ನಂದಿನಿ ಮೈಸೂರು
*ಗೌರಿ ಗಣೇಶ ಹಬ್ಬಕ್ಕೆ ‘ಕೆಂದಾವರೆ’ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್…ಹೊಸಬರ ಪ್ರಯತ್ನಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್*
ಕಡಲತೀರದ ಭಾರ್ಗವ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಪನ್ನಾಗ ಹೊಸ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಪನ್ನಾಗ ಹೊಸ ಹೆಜ್ಜೆಗೆ ಕೆಂದಾವರೆ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಆದಿತ್ಯ ವಿನೋದ್ ನಾಯಕನಾಗಿ ಸ್ಯಾಂಡಲ್ ವುಡ್ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ವಿನೋದ್ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ್ದರು.
ನೈಜ ಘಟನೆಯ ಆಧಾರಿತ ಕೆಂದಾವರೆ ಸಿನಿಮಾಗೆ ಆದಿತ್ಯ ವಿನೋದ್, ಹಿತಾಂಶು ಸಂಗೀತ ಒದಗಿಸುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ ನೀಡಲಿದ್ದಾರೆ. ಅಪ್ರಮೇಯ ಫಿಲ್ಮಂಸ್ ಬ್ಯಾನರ್ ನಡಿ ಚಿತ್ರ ತಯಾರಾಗುತ್ತಿದ್ದು, ಅನಿಲ್ ಎಂ ಎಚ್, ಪ್ರಶಾಂತ್ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.
ಹುಬ್ಬಳ್ಳಿ, ಕಾರ್ಕಳ, ಸಾಗರ ಭಾಗದಲ್ಲಿ ಕೆಂದಾವರೆ ಸಿನಿಮಾದ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ನವೆಂಬರ್ ತಿಂಗಳಿನಿಂದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ.