ನೀರು ಸರಬರಾಜಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ

ನಂದಿನಿ ಮೈಸೂರು

ನೀರು ಸರಬರಾಜಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ

ಮೈಸೂರು ನಗರದ ಜೆ.ಪಿ.ನಗರ ಹೊರವರ್ತುಲ ರಸ್ತೆಯ ರೈಲ್ವೆ ಬ್ರಿಡ್ಜ್ ಆಗಲೀಕರಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ದಿನಾಂಕ: 20/09/2023 ರಂದು ಮುಖ್ಯ ನೀರು ಸರಬರಾಜು ಕೊಳವೆಮಾರ್ಗವನ್ನು ಸ್ಥಳಾಂತರಿಸಿ ಲಿಂಕಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೂಲಸ್ಥಾವರದಿಂದ ಪಂಪಿಂಗ್ ನಿಲುಗಡೆಗೊಳಿಸಬೇಕಾಗಿರುತ್ತದೆ. ಆದ್ದರಿಂದ ದಿನಾಂಕ: 20/09/2023 ಮತ್ತು 21/09/2023ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ನೀರನ್ನು ಸಂಗ್ರಹ ಮಾಡಿಕೊಂಡು, ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗುವ ಪ್ರದೇಶಗಳು:-

ವಾರ್ಡ್ ನಂ. 45 ರಿಂದ, 51 (ಶಾರದಾದೇವಿನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54 ರಿಂದ 65 (ಗುಂಡುರಾವ್‌ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿ.ಐ.ಟಿ.ಬಿ., ರಾಮಕೃಷ್ಣನಗರ, ಕುವೆಂಪುನಗರ ಎಂ. ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶ: ಪ್ರದೇಶ, ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ) ಹಾಗೂ ಇತ್ಯಾದಿ ಪ್ರದೇಶಗಳಾಗಿವೆ.

 

 

Leave a Reply

Your email address will not be published. Required fields are marked *