ಡಾ.ವಿಷ್ಣು ಸೇನಾ ಸಮಿತಿಯ 2021ನೇ ಸಾಲಿನ ಸರ್ವಸದಸ್ಯರ ಸಭೆ

ಬೆಂಗಳೂರು:7 ಡಿಸೆಂಬರ್ 2021

 

ನಂದಿನಿ

ಡಾ.ವಿಷ್ಣು ಸೇನಾ ಸಮಿತಿಯ 2021ನೇ ಸಾಲಿನ ಸರ್ವಸದಸ್ಯರ ಸಭೆ ಬೆಂಗಳೂರಿನ ಶಾರದಾ ಥಿಯೇಟರ್ ನಲ್ಲಿ ನಡೆಯಿತು.

ವೀರಕಪುತ್ರ ಶ್ರೀನಿವಾಸರ ಅಧ್ಯಕ್ಷತೆಯ ಈ ಸಮಿತಿ ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮಾಡುವುದು ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೆಳಕಂಡ ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿಯು ಬಂದಿದೆ.

1. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿಯನ್ನು ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸುವುದು.

2. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆವಿಷ್ಣುವರ್ಧನ ಎಂಬ ಯೋಜನೆ ರೂಪಿಸಿಲಾಗಿದೆ. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ & ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸಲಾಗುವುದು.

3. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು.

4. ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯಗಳನ್ನು ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವುದು.

ಈ ಪ್ರಮುಖ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಮೊದಲಾದ ಹಿರಿಯ ವಿಷ್ಣು ಅಭಿಮಾನಿಗಳು ವೇದಿಕೆಯನ್ನು ಅಲಂಕರಿಸಿದ್ದರು.

Leave a Reply

Your email address will not be published. Required fields are marked *