126 Views
ಬಾವಲಿ:7 ಡಿಸೆಂಬರ್ 2021
ನಂದಿನಿ
ದಿನೇ ದಿನೇ ಹೆಚ್ಚಾಗುತ್ತಿರುವ
ಕೊರೋನ ವೈರಸ್ ಮತ್ತು ನೋರೋ ವೈರಸ್ ಹಿನ್ನಲೆ ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ವಾಹನ ತಪಾಸಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಅವರು ಕೋವಿಡ್ ವೈರಸ್ ಮತ್ತು ನೊರೋ ವೈರಸ್ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದೇವೆ. 72 ಗಂಟೆಗಳಲ್ಲಿ ಕೋವಿಡ್ ಟೆಸ್ಟ್ ಆಗಿ ನೆಗೆಟಿವ್ ರಿಪೋರ್ಟ್ ಇರುವವರನ್ನು QR ಬಾರ್ ಕೋಡಿಂ ಗ್ ನಿಂದ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೂ ಬೆಳ್ಳಗೆ 6 ಗಂಟೆ ಯಿಂದ ಸಂಜೆ 6 ತನಕ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದೇವೆ. ವಾಹನದಲ್ಲಿ ಓಡಾಡುವ ಎಲ್ಲ ಜನರುಗಳ ಹೆಸರುಗಳನ್ನು ನೊಂದಣಿ ಮಾಡಿ ಜಿಲ್ಲಾ ಸರ್ವೇಕ್ಷಣಾದಿಕಾರಿಗಳ ಕಚೇರಿಗೆ ವರದಿಯನ್ನು ನೀಡಿದ್ದೇವೆ. ಅವರು ಎಲ್ಲರಿಗೂ ದೂರವಾಣಿ ಮೂಲಕ ಕರೆ ಮಾಡಿ ಕ್ರಮ ಕೈಗೊಳ್ಳುತ್ತಿದರೆ. ಕೋವಿಡ್ ಮತ್ತು ನೂರೋ ವೈರಸ್ ಬಗ್ಗೆ ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮ ವಹಿಸುತ್ತಿದ್ದೇವೆ ಎಂದರು.