ನಂದಿನಿ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಅಪಪ್ರಚಾರ:ಡಾ.ಕೆ.ವಸಂತಕುಮಾರ್
ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲರಿಗೂ 10 ಕೆ.ಜಿ ಅಕ್ಕಿಯನ್ನು ಫ್ರೀಯಾಗಿ ನೀಡುತ್ತೇವೆ ನಿನಗೂ ಫ್ರೀ ನನಗೂ ಫ್ರೀ ಎಲ್ಲರಿಗೂ ಫ್ರೀ ಎಂದು ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಎಲ್ಲಾ ಭಾಷಣಗಳಲ್ಲಿ ಘಂಟಾಘೋಷವಾಗಿ ಸಾರ್ವಜನಿಕ ಸಭೆಗಳಲ್ಲಿ ಘೋಷಿಸಿ ಸರ್ಕಾರ ಬಂದ ತಕ್ಷಣವೇ ನಿಮಗೆ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ನಮಗೆ ವೋಟು ಹಾಕಿ ಎಂದು ಹೇಳಿದ್ದರು ಈಗ ನಮಗೆ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಕೇಂದ್ರದ ಮೇಲೆ ಸುಳ್ಳು ಆರೋಪವನ್ನು ಒರಿಸುವ ಕಾರ್ಯವನ್ನು ಮಾಡುತ್ತಿರುವುದು ನಾಚಿಗೇಡಿನ ಸಂಗತಿ ,ತಮಗೆ ಘೋಷಣೆ ಮಾಡುವಾಗ ಅಕ್ಕಿ ಸಿಗುತ್ತದೆಯೆ ಇಲ್ಲವೆ ಎಂಬ ಪರಿಜ್ಙಾನ ಇರಲಿಲ್ಲವಾ? ಯಾವ ಸಂದರ್ಭದಲ್ಲಿಯೂ ಕೂಡ ಕೇಂದ್ರ ಸರ್ಕಾರ ಸಿದ್ದರಾಮಯ್ಯನವರಿಗೆ ಅಕ್ಕಿಯನ್ನು ನೀಡುತ್ತೇವೆ ಎಂದು ಹೇಳಿಲ್ಲ ಆ ರೀತಿ ಯಾವುದಾದರು ಮಾತುಕತೆ ಅಥವಾ ಒಪ್ಪಂದ ವಾಗಿದ್ದರೆ ಬಹಿರಂಗ ಪಡಿಸಲಿ ಆದನ್ನು ಬಿಟ್ಟು ಈಗ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಅಪಪ್ರಚಾರವನ್ನು ಮಾಡುತ್ತಿರುವುದು ರಾಜ್ಯದ ಜನತೆಗೆ ಮಾಡಿದ ದೊಡ್ಡ ಮೋಸವೇ ಸರಿ , ತಮಗೆ ಉಚಿತವಾಗಿ ಅಕ್ಕಿಯನ್ನು ಕೊಡಲಿಕ್ಕೆ ಆಗದಿದ್ದರೆ ತಾವು ಅದನ್ನು ಒಪ್ಪಿಕೊಳ್ಳಬೇಕು ಅದು ಬಿಟ್ಟು ಕೇಂದ್ರ ಸರ್ಕಾರ ನಮಗೆ ಅಕ್ಕಿಯನ್ನು ನೀಡುತ್ತಿಲ್ಲ ಎಂದು ಹೇಳುವಂತದು ಹಾಸ್ಯಸ್ಪದ ಇದರಿಂದ ಜನರಿಗೆ ಮಂಕು ಬೂದಿಯನ್ನು ಎರಚಿ ಮತವನ್ನು ಹಾಕಿಸಿಕೊಂಡು ಜನರಿಗೆ ಪಂಗನಾಮವನ್ನು ಹಾಕುತ್ತಿರುವುದು ಸ್ಪಷ್ಟವಾಗುತ್ತಿದೆ! ಈ ರೀತಿಯ ಸುಳ್ಳುಗಳ ಮೂಲಕ ಕರ್ನಾಟಕದ ಜನರ ಹಾದಿ ತಪ್ಪಿಸುವ ಕೆಲಸವನ್ನು ಮಾನ್ಯ ಮುಖ್ಯಮಂತ್ರಿಗಳು ನಿಲ್ಲಿಸಬೇಕು ಹಾಗೂ ಕೇಂದ್ರಸರ್ಕಾರ ಹಾಗೂ ಸನ್ಮಾನ್ಯ ಪ್ರಧಾನ ಮಂತ್ರಿಗಳ ವಿರುದ್ಧ ಮಾಡುತ್ತಿರುವ ಸುಳ್ಳು ಅಪಪ್ರಚಾರಗಳನ್ನು ನಿಲ್ಲಿಸಿ ನ್ಯಾಯಯುತವಾದಂತ ಆಡಳಿತವನ್ನು ಕರ್ನಾಟಕದಲ್ಲಿ ನೀಡಲಿ . ತಾವು ಚುನಾವಣೆಯ ಪೂರ್ವದಲ್ಲಿ ನೀಡಿರುವ ಗ್ಯಾರಂಟಿಗಳು ಯಾವುದಿದೆ, ಅವುಗಳನ್ನು ಜನರಿಗೆ ಯಾವುದೇ ಷರತ್ತುಗಳಿಲ್ಲದೆ ನೀಡುವ ಕಾರ್ಯವಾಗಬೇಕು ಅದನ್ನು ಬಿಟ್ಟು ಕೇಂದ್ರದ ಮೇಲಿ ಗೂಬೆ ಕೂರಿಸುವ ಪ್ರಯತ್ನ ಮಾಡವಾರದೆಂದು ಭಾರತೀಯ ಜನತಾ ಪಾರ್ಟಿ ಈ ಮೂಲಕ ಎಚ್ಚರಿಸುತ್ತಿದೆ ಎಂದು ಡಾ.ಕೆ.ವಸಂತ ಕುಮಾರ್ ತಿಳಿಸಿದರು.