ಟಿ‌ ನರಸೀಪುರ ಪ್ರೀಮಿಯರ್ ಲೀಗ್ ಎರಡನೆ ಆವೃತ್ತಿಗೆ ದಿನಗಣನೆ,ಪೋಸ್ಟರ್ ಬಿಡುಗಡೆ

ನಂದಿನಿ ಮೈಸೂರು

ಟಿ.ನರಸೀಪುರ ತಾಲ್ಲೂಕಿನ ಅತಿದೊಡ್ಡ ಕ್ರೀಡಾ ಕೂಟ ನವಚೇತನ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಟಿ.ನರಸೀಪುರ ಪ್ರೀಮಿಯರ್ ಲೀಗ್(TPL) ಎರಡನೆ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಇಂದು ಮೈಸೂರಿನ ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕರಾದ ಎಸ್ ಬಸವರಾಜುರವರು ಪೋಸ್ಟರ್ ಬಿಡುಗಡೆಗೊಳಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಕಳೆದ ಬಾರಿ ಕೇವಲ 6 ಫ್ರಾಂಚೈಸಿಗಳೊಂದಿಗೆ ಪ್ರಾರಂಭವಾದ ಟಿ.ನರಸೀಪುರ ಪ್ರೀಮಿಯರ್‌ ಲೀಗ್ ಮೊದಲ ಆವೃತ್ತಿ ಅಭೂತಪೂರ್ವವಾಗಿ ಈ ಬಾರಿ ಫಾಲ್ಕಾನ್ ಕ್ರಿಕೆಟರ್ಸ್, ತುಂಬಲ ಟೈಗರ್ಸ್ ,ಯಡದೊರೆ
ಫೈಟರ್ಸ್,ಸೋಸಲೆ ಸ್ಟಾರ್ಸ್,ರಾಯಲ್ ಎಂಸಿಸಿ ,ನೊ ಫಿಯರ್ಸ್ ,ವಿಬಿ ಕಿಂಗ್ಸ್,ಟೀಮ್ ಯುನೈಟೆಡ್, ಬೆಳ್ಳಿ ಕ್ರಿಕೆಟರ್ಸ್,ಹಾಗೂ ಆರ್.ಆರ್ ಕ್ರಿಕೆಟರ್ಸ್ ಎಂಬ 10 ಫ್ರಾಂಚೈಸಿಗಳು ಕಣದಲ್ಲಿದ್ದು ತಾಲ್ಲೂಕಿನ ಸುಮಾರು 250 ಹೆಚ್ಚು ಆಟಗಾರರು ಲೀಗ್ ನಲ್ಲಿ ನೊಂದಾಯಿಸಿಕೊಂಡು ಹರಾಜಿನ ಮೂಲಕ ವಿವಿಧ ಫ್ರಾಂಚೈಸಿಗಳನ್ನು ಸೇರಿಕೊಂಡಿದ್ದಾರೆ ಇದೆ ತಿಂಗಳ 23 ರಿಂದ 25 ರ ವರೆಗೆ ಟಿ‌.ನರಸೀಪುರ ಪ್ರೀಮಿಯರ್ ಲೀಗ್ ಎರಡನೆ ಆವೃತ್ತಿ ನೆಡೆಯಲಿದ್ದು ಈ ಲೀಗ್ ಗೆ ಬಸವ ಮಾರ್ಗ ಫೌಂಡೇಷನ್ ಸಂಸ್ಥಾನಕ ಬಸವರಾಜುರವರು ಶುಭಕೋರಿ ಪೋಸ್ಟರ್ ಬಿಡುಗಡೆಗೊಳಿಸಿ ನವಚೇತನ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಈ ಲೀಗ್ ರಸದೌತಣ ಆಗಲಿದ್ದು ತಾಲ್ಲೂಕಿನ ಅತಿದೊಡ್ಡ ಕ್ರಿಕೆಟ್ ಲೀಗ್ ಕಣ್ತುಂಬಿಕೊಳ್ಳಲು ಟಿ‌.ನರಸೀಪುರ ತಾಲ್ಲೂಕಿನ ಜನತೆ ಮಾತ್ರವಲ್ಲದೆ ಜಿಲ್ಲೆಯ ಜನರು ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *