*ಆಧುನಿಕವಾಗಲಿರುವ ಅಗ್ನಿಶಾಮಕ ಸೇವೆ , ನಗರಗಳು ಪ್ರವಾಹ ಸಮಸ್ಯೆಯಿಂದ ಮುಕ್ತವಾಗಲಿವೆ, 8000 ಕೋಟಿ ಮೌಲ್ಯದ 3 ಯೋಜನೆಗಳನ್ನು ಘೋಷಿಸಿದ ಅಮಿತ್ ಶಾ*
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಬಲಪಡಿಸಲು ರೂ 8000 ಕೋಟಿ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದರು, ಅವುಗಳೆಂದರೆ – (1) ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಯನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು 5,000 ಕೋಟಿ ಯೋಜನೆ, (2) ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಂತಹ ಏಳು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರಗಳಲ್ಲಿ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು 2,500 ಕೋಟಿ ರೂ. ಮತ್ತು (3) ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 17 ರಾಜ್ಯಗಳಲ್ಲಿ ಭೂಕುಸಿತ ತಗ್ಗಿಸುವಿಕೆಗಾಗಿ 825 ಕೋಟಿ ರಾಷ್ಟ್ರೀಯ ಭೂಕುಸಿತ ಅಪಾಯ ಶಮನ ಯೋಜನೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಪತ್ತು ನಿರ್ವಹಣಾ ಸಚಿವರ ಸಭೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಈ ಮೂರು ಪ್ರಮುಖ ಯೋಜನೆಗಳ ಅನುಷ್ಠಾನವು ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಪತ್ತು ಮುಕ್ತ ಭಾರತದ ಸಂಕಲ್ಪವನ್ನು ಸಾಕಾರ ಮಾಡಲಿದೆ.
2005-06 ರಿಂದ 2013-14 ರವರೆಗಿನ ಒಂಬತ್ತು ವರ್ಷಗಳು ಮತ್ತು 2014-15 ರಿಂದ 2022-23 ರವರೆಗಿನ ಒಂಬತ್ತು ವರ್ಷಗಳನ್ನು ಹೋಲಿಸಿದರೆ, ಈ ಹಿಂದೆ 35,858 ಕೋಟಿ ರೂಪಾಯಿಗಳನ್ನು ಎಸ್‌ಡಿಆರ್‌ಎಫ್‌ಗೆ ಬಿಡುಗಡೆ ಮಾಡಲಾಗಿತ್ತು, ಈಗ ಇದು ಸುಮಾರು ಮೂರು ಪಟ್ಟು ಹೆಚ್ಚಾಗಿ 1,04,704 ಕೋಟಿ ರೂ ಆಗಿದೆ ಎಂದು ಶಾ ಸಭೆಯಲ್ಲಿ ಒತ್ತಿ ಹೇಳಿದರು. . ಇದಲ್ಲದೆ, ಎನ್‌ಡಿಆರ್‌ಎಫ್‌ನಿಂದ ಬಿಡುಗಡೆಯಾದ ಮೊತ್ತವು 25,000 ಕೋಟಿಯಿಂದ 77,000 ಕೋಟಿಗೆ ಏರಿಕೆಯಾಗಿದೆ, ಇದು ಕೂಡ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರೈತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ರಾಜ್ಯಗಳು ತಮ್ಮ ಬಜೆಟ್ ನಿಬಂಧನೆಯನ್ನು ಹೆಚ್ಚಿಸಬೇಕು ಎಂದು ನಂಬುವ ಶಾ ಇದರ ಜೊತೆಗೆ ಮಾದರಿ ಅಗ್ನಿಶಾಮಕ ಮಸೂದೆ, ವಿಪತ್ತು ತಡೆ, ಚಂಡಮಾರುತ, ಸಿಡಿಲು, ಚಳಿಗಾಳಿ ತಡೆಗೆ ಕೇಂದ್ರ ಸರ್ಕಾರ ರೂಪಿಸಿರುವ ನೀತಿಗಳು ಇಡೀ ದೇಶದಲ್ಲಿ ಜಾರಿಯಾಗಬೇಕು ಎಂದರು.
ಕೆಲವು ವರ್ಷಗಳ ಹಿಂದೆ, ವಿಪತ್ತಿನ ಬಗ್ಗೆ ಸರ್ಕಾರದ ವಿಧಾನ ಪರಿಹಾರ ಕೇಂದ್ರಿತ ಮತ್ತು ಪ್ರತಿಗಾಮಿಯಾಗಿತ್ತು. ಆದರೆ ಕಳೆದ 9 ವರ್ಷಗಳಲ್ಲಿ, ಮುನ್ನೆಚ್ಚರಿಕೆ ವ್ಯವಸ್ಥೆ, ತಡೆಗಟ್ಟುವಿಕೆ ಮತ್ತು ಸನ್ನದ್ಧತೆ ಆಧಾರಿತ ವಿಪತ್ತು ನಿರ್ವಹಣಾ ನೀತಿಗಳನ್ನು ಜಾರಿ ಮಾಡಲಾಗಿದೆ. ಶಾ ಅವರ ನೀತಿಗಳ ಮೂಲಕ 350 ಹೆಚ್ಚಿನ ಅಪಾಯದ ವಿಪತ್ತು ಪೀಡಿತ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಯುವ ಸ್ವಯಂಸೇವಕರ ನಿಯೋಜನೆಯು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗಿದೆ.
ಕಳೆದ 9 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮನ್ವಯದಿಂದ ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲಾಗಿದೆ. ಆದರೆ ಸತತ ಶ್ರಮಿಸುವ ನಾಯಕ ಶಾ, ವಿಪತ್ತುಗಳ ಸ್ವರೂಪ ಬದಲಾದಂತೆ, ಅವುಗಳ ಆವರ್ತನ ಮತ್ತು ತೀವ್ರತೆ ಹೆಚ್ಚಿದೆ, ಅದೇ ರೀತಿಯಲ್ಲಿ ಸಿದ್ಧತೆಯನ್ನು ಚುರುಕುಗೊಳಿಸಬೇಕು ಮತ್ತು ವಿಸ್ತರಿಸಬೇಕು ಎಂದರು. ವಿಪತ್ತಿನ ಕಾರಣ ಒಬ್ಬ ವ್ಯಕ್ತಿಯ ಪ್ರಾಣವೂ ಹೋಗಬಾರದು ಎಂಬುದು ಶಾರ ವಾದ.
ಕಳೆದ 9 ವರ್ಷಗಳಲ್ಲಿ, ಮೋದಿಯವರ ನಾಯಕತ್ವದಲ್ಲಿ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಎಲ್ಲಾ ರಾಜ್ಯಗಳು ಈ ಗುರಿಯನ್ನು ಸಾಧಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿವೆ. ಈ ಶತಮಾನದ ಕೆಟ್ಟ ಸಾಂಕ್ರಾಮಿಕ ರೋಗವಾದ ಕೋವಿಡ್ ಅನ್ನು ಯಶಸ್ವಿಯಾಗಿ ಎದುರಿಸಲು ಕೇಂದ್ರ, ರಾಜ್ಯ ಮತ್ತು ಸಾರ್ವಜನಿಕರ ನಡುವಿನ ಸಮನ್ವಯವು ಇತ್ತೀಚಿನ ವರ್ಷಗಳಲ್ಲಿ ವಿಪತ್ತು ನಿರ್ವಹಣೆಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.