ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಡಾ.ಜ್ಯೋತೀಸ್ ಹೆಲ್ತ್ ಕೇರ್ ನಲ್ಲಿ ನೀರಿನೊಳಗಿನ ಪ್ರಸವ ಯಶಸ್ವಿ

ನಂದಿನಿ ಮೈಸೂರು

ನೀರಿನೊಳಗಿನ ಪ್ರಸವ

ಮೈಸೂರು:ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಡಾ. ಜ್ಯೋತೀಸ್ ಹೆಲ್ತಕೇರ್ ನಲ್ಲಿ ನೀರಿನೊಳಗಿನ ಪ್ರಸವದ ಅನುಕೊಲತೆಯನ್ನು ಒದಗಿಸಲಾಗಿದೆ ನಮ್ಮ ಆಸ್ಪತ್ರೆಯಲ್ಲಿನ ನುರಿತ ಪ್ರಸವ ತಜ್ಞರು ಈ ವಿಧಾನದಲ್ಲಿ ತರಭೇತಿ ಪಡೆದಿರುತ್ತಾರೆ.ನೀರಿನೊಳಗಿನ ಪ್ರಸವಕ್ಕೆ ಅನುಕೂಲವಾಗುವಂತ ಎಲ್ಲಾ ಸೌಲಭ್ಯವನ್ನು ಡಾ. ಜ್ಯೋತೀಸ್ ಹೆಲ್ತಕೇರ್ ನಲ್ಲಿ ಅಳವಡಿಸಲಾಗಿದೆ. ನಮ್ಮ ವೈದ್ಯರು ಹಾಗೂ ಸಹಾಯಕರ ನುರಿತ ತಂಡ ಮಹಿಳೆಯರಿಗೆ ಸುರಕ್ಷಿತ ಖಾಸಗಿ ಹಾಗೂ ಆರಾಮಾದಾಯಕ ಹೆರಿಗೆಯ ಅನುಭವ ಹಾಗೂ ವಿಧಾನದ ಆಯ್ಕೆಯನ್ನು ಒದಗಿಸುತ್ತದೆ.

ನೀರಿನೊಳಗಿನ ಪ್ರಸವವು ಸಹಜ ಹೆರಿಗೆಯಲ್ಲಿನ ಒಂದು ಬಗೆಯ ಆವಿಷ್ಕಾರವಾಗಿದ್ದು ಇದು ತಾಯಿಗೆ ಸಹಾಯಕವಾಗಿ ಬೆಚ್ಚಗಿನ ನೀರಿನಲ್ಲಿ ಮಗುವನ್ನು ಹೆರಿಗೆ ಮಾಡಿಸುವ ವಿಧಾನವಾಗಿದೆ.

ನೈಸರ್ಗಿಕ ಹೆರಿಗೆ ವಿಧಾನದಲ್ಲಿ ಹಲವು ಹಂತಗಳಿದ್ದು ಕೆಲವು ಅಥವಾ ಎಲ್ಲಾ ಹಂತಗಳಲ್ಲೂ ಬೆಚ್ಚಗಿನ ನೀರಿನ ತೊಟ್ಟಿಯಲ್ಲಿನ ಹೆರಿಗೆ ವಿಧಾನವನ್ನು ಅಳವಡಿಸಿಕೊಳ್ಳಬಹುದು.ಬಸಿರು ಮತ್ತು ಮಗುವಿನ ಜನನ ಸಹಜ ಹಾಗೂ ನೈಸರ್ಗಿಕವಾದ ಕ್ರಿಯೆಗಳು ಹಾಗಾಗಿ ಗರ್ಭಿಣಿಯರು ಇಚ್ಚಾನುಸಾರವಾಗಿ ಸ್ವತಂತ್ರವಾಗಿ ಹೊರಳಾಡಿ ಆರಾಮದಾಯಕವಾದ ಭಂಗಿಗಳಲ್ಲಿ ಹೆರಿಗೆಯ ಹಂತಗಳನ್ನು ನೀರಿನೊಳಡೆ ಕಳೆಯುವುದು ಆಸ್ಪತ್ರೆಯ ಹೆರಿಗೆ ಮಂಚಗಳಲ್ಲಿನ ಸೀಮಿತ ಹೊರಳಾಟದ ಆನುಭವಕ್ಕಿಂತ ಒಳ್ಳೆಯದು.

ಈ ವಿಧಾನವು ಹೆರಿಗೆ ಮತ್ತು ಹೆರಿಗೆಯ ನೋವನ್ನು ಕಡಿಮೆ ಮಾಡುತ್ತದೆ. ನೀರಿನೊಳಗಿನ ದೇಹದ ತೇಲುವಿಕೆಯು ತಾಯಿಗೆ ಸಹಜವಾಗಿ ಚಲಿಸಲು ಶ್ರಮದಾಯಕವಾದ ವಿವಿಧ ಭಂಗಿಗಳ ಮಗ್ಗಲು ಬದಲಾಯಿಸುವುಕ್ಕೆ ಸಹಾಯಕವಾಗುತ್ತದೆ ಬೆಚ್ಚಗಿನ ನೀರಿನೊಳಗಣ ಹಿತವಾದ ಪರಿಣಾಮ ತಾಯಿಯ ದೇಹದೊಳಗಿನ ಹೆಚ್ಚು ಎಂಡಾರ್ಫಿನಗಳನ್ನು ಬಿಡುಗಡೆಗೆ ಪ್ರಚೋದಿಸುತ್ತದೆ ಮತ್ತು ಗರ್ಭಾಶಯದ ಸ್ನಾಯುಗಳಿಗೆ ರಕ್ತದ ಹರಿಯನ್ನು ಸುಧಾರಿಸುತ್ತದೆ. ಇದು ತಾಯಿಗೆ ನೋವಿಗಿಂತ ಮಿಗಿಲಾಗಿ ಸಹಜವಾದ ಪ್ರೀತಿಯಿಂದ ತನ್ನ ಮಗುವಿನ ಜನನವನ್ನು ಎದಿರುನೊಡುವಂತೆ ಮಾಡುತ್ತದೆ.

ನೀರಿನಲ್ಲಿನ ಹೆರಿಗೆಯನ್ನು ಆಯ್ಕೆಮಾಡಿಕೊಳ್ಳುವ ಮಹಿಳೆಗೆ ಹೆಚ್ಚಿನ ಪ್ರಮಾಣ ನೈರ್ಸಗಿಕ ಹೆರಿಗೆಯು ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸಹಜ ಹೆರಿಗೆಯ ಮೊಲಕ ಜನ್ಮ ನೀಡುವ ಮಹಿಳೆಗೆ ಅತ್ಯಂತ ಕಷ್ಟಕರದಾದ ಹಂತವೆಂದರೆ ಅದು ಗರ್ಭಾಶಯದ ಸ್ನಾಯುಗಳ ಸಂಕುಚಿತ ಹಾಗೂ ಗರ್ಭಕೊರಳಿನ ಮೇಲಿನ ಒತ್ತಡ. ನೀರಿನಲ್ಲಿನ ಜನನವು ಈ ಭಾಗದ ನೋವಿನ ಅನುಭವವನ್ನ ಪರಿಣಾಮಕಾರುಯಾಗಿ ಕಡಿಮೆಗೊಳಿಸುತ್ತದೆ.

ನೀರಿನಲ್ಲಿನ ಹೆರಿಗೆಯು ಹಿತಕರವಾಗಿದ್ದು, ನೋವು ನಿವಾರಿಸುವುದಲ್ಲದೆ ಗರ್ಭದೊಳಗಿನ ವಾತಾವರಣವನ್ನು ಹೋಲುವುದರಿಂದ ಮಗುವಿಗು ಕೂಡ ಆರಾಮದಾಯಕವಾಗಿರುತ್ತದೆ. ಇದು ಮಗುವಿನ ಉಸಿರಾಟದ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ, ಕಾರಣ ಮಗು ಹೊಕ್ಕಳಿನ ಬಳ್ಳಿಯ ಮೂಲಕ ತನ್ನ ಆಮ್ಲಜನಕದ ಅಗತ್ಯತೆಯನ್ನು ನೀರಿನ ತೊಟ್ಟಿಯಿಂದ ಹೊರ ತೆಗೆಯುವವರೆಗೂ ಪಡೆದುಕೊಳ್ಳುತ್ತದೆ.

ನೀರಿನೊಳಗೆ ಇಳಿಯುವ ಮುನ್ನ ತಾಯಿಗೆ ಸಂಪೂರ್ಣವಾಗಿ ಹೆರಿಗೆಯ ಹಂತಗಳನ್ನು ಸಮಾಲೋಚನೆಯ ಮೂಲಕ ತಿಳಿಸಿ. ನೀರಿನ ಭಯವನ್ನು ಹೋಗಲಾಡಿಸಬೇಕು. ತಾಯಿ ನಿರ್ಜಲೀಕರಣಗೊಳ್ಳದಂತೆ ಎಚ್ಚರ ವಹಿಸಬೇಕು. ಆಗಾಗ ನೀರು ಹಾಗೂ ದ್ರವಹಾರವನ್ನು ನೀಡುತ್ತಿರಬೇಕು. ನೀರು ನಿರಂತರವಾಗಿ ಬಿಸಿಯಾಗಿರುವಂತೆ ನೋಡಿಕೊಳ್ಳಬೇಕು.

ಹೆರಿಗೆಯ ಮೊದಲ ಹಂತದಲ್ಲಿ ನೀರಿನಲ್ಲಿ ತೇಲುವಿಕೆಯ ಕಡಿಮೆ ಹೆರಿಗೆಯ ಸಮಯ ಹಾಗೂ ಅತ್ಯಲ್ಪ ಜನನ ಉತ್ತೇಜಕ ಔಷಧಗಳ ಉಪಯೋಗವನ್ನು ಸೂಚಿಸುತ್ತದೆ.

ನೀರಿನೊಳಗಿನ ಜನನವು ಒಬ್ಬ ನುರಿತ ಪ್ರಸೂತಿ ತಜ್ಞರ ಮೇಲ್ವಚಾರಣೆಯಲ್ಲೇ ನಡೆಯಬೇಕು ಯಾವುದೆ ತುರ್ತಚಿಕಿತ್ಸೆಯ ನೆರವಿಲ್ಲದೆ ಮನೆಯಲ್ಲಿನ ಹೆರಿಗೆಯಲ್ಲಿ ನೀರಿನೂಳಗಿನ ಜನನವು ಅಪಾಯಾಕಾರಿಯಾಗಿರುತ್ತದೆ.

ನೀರಿನೂಳಗಿನ ಜನನದಲ್ಲಿ ನೀರು ಪೆರಿನಿಯಮ್ ಅನ್ನು ಹೆಚ್ಚು ಸ್ಥಿತಿಸ್ಥಾಪಕ ಮತ್ತು ಸಡಿಲಗೂಳಿಸುವಂತೆ ಮಾಡುತ್ತದೆ. ಈ ಮೂಲಕ ಎಪಿಸಿಯೂಟಮಿ ಮತ್ತು ಹೊಲಿಗೆಗಳ ಅಗತ್ಯವನ್ನು ಕಡಿಮೆಮಾಡುತ್ತದೆ.

ಮಗುವಿಗೆ ಪ್ರಯೋಜನೆಗಳು

ಮಗುವು ಈಗಾಗಲೇ ಆಮ್ನಯೋಟಿಕ್ ದ್ರವದಲ್ಲೆ 9 ತಿಂಗಳುಗಳ ಕಾಲ ಇರುವುದರಿಂದ ನೀರಿನ ಪ್ರಸವದಿಂದ ಆಮ್ನಯೋಟಿಕ್ ಚೀಲದಂತೆಯೇ ವಾತಾವರಣವನ್ನು ಒದಗಿಸುತ್ತದೆ. ಜನನದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಭರವಸೆ ಮತ್ತು ಭದ್ರತೆಯ ಅರ್ಥವನ್ನು ಹೆಚ್ಚಿಸುತ್ತದೆ.

ಮಗುವಿಗಾಗುವ ಅಪಾಯಗಳೇನು

ಮಗುವು ಕೆಲವೊಮ್ಮೆ ನೀರನ್ನು ಕುಡಿಯುವ ಸಾಧ್ಯಾತೆಗಳಿರುತ್ತದೆ ಮಗುವಿಗೆ ಸೋಂಕು ತಗುಲುವ ಸಾಧ್ಯತೆಗಳು ಇರಬಹುದು. ಮಗುವನ್ನು ನೀರಿನ ಮೇಲ್ಮೆಗೆ ತಂದಾಗ ಹೊಕ್ಕಳು ಬಳ್ಳಿಯ ಸ್ನ್ಯಾಪ್ (ತಿರುಚುವಿಕೆ) ಆಗಬಹುದು.

ಮಗುವನ್ನು ತಾಯಿಯ ಎದೆಗೆ ಎತ್ತುವಾಗ ಎಚ್ಚರಿಕೆ ವಹಿಸುವುದರ ಮೂಲಕ ಇದನ್ನು ತಡೆಯಬಹುದು. ಪ್ರಸವ ತಜ್ಞರು ಈ ಎಲ್ಲಾ ಅಪಾಯಗಳನ್ನು ಸಂಭವಿಸದಂತೆ ಎಚ್ಚರ ವಹಿಸುವರು

ನೀರಿನ ಜನನಕ್ಕೆ ಯಾವ ಸಂದರ್ಭಗಳು ಸೂಕ್ತವಲ್ಲ

•​ಅವಳಿ ಜನನ, ಪ್ರಸವ ಪೂರ್ವ ಹೆರಿಗೆ, ಮಗು ಬ್ರೀಚ್ ಅವಸ್ಥೆಯಲ್ಲಿದ್ದರೆ.
•​ತೀವ್ರವಾದ ಮೆಕೊನಿಯಮ್ ಇದ್ದರೆ
•​ಹೆಚ್ಚಿನ ತೂಕದ ಮಗುವನ್ನು ಎದಿರು ನೋಡುತ್ತಿದ್ದರೆ(ಮಗು ದೊಡ್ಡದಿದ್ದರೆ)
•​ಹರ್ಪಿಸ್ ಖಾಯಿಲೆ ಅಥವಾ ತಾಯಿಗೆ ಸೊಂಕು ಇದ್ದರೆ
•​ಟ್ಯಾಕ್ಸಿಮಿಯ ಅಥವಾ ತಾಯಿಗೆ ಅಧಿಕ ರಕ್ತದೊತ್ತಡದ ಸಮಸ್ಯ ಹೊಂದಿದ್ದರೆ ಮತ್ತು ಅತಿüಯಾದ ರಕ್ತಸ್ರಾವವಾಗುತ್ತಿದ್ದರೆ.

ಸಾರಾಂಶ

ನೀರಿನಲ್ಲಿ ಜನನವು ಒಂದು ಆರಾಮಾದಾಯಕ , ಐಶಾರಾಮಿ ಹಾಗೂ ನೋವು ರಹಿತ ಅನುಭವವಾಗಿದ್ದು ಕಡಿಮೆ ಅವಧಿಯ ಪ್ರಸವ ವಿಧಾನವಾಗಿದೆ ಈ ವಿಧಾನವು ಶೀಘ್ರದಲ್ಲೇ ಅತ್ಯಂತ ಸುರಕ್ಷಿತ ಹಾಗೂ ಜನಪ್ರಿಯ ಹೆರಿಗೆ ವಿಧಾನವಾಗಿ ನಮ್ಮ ದೇಶದಲ್ಲಿ ಪ್ರಚಾರಾವಾಗಲಿದೆ. ಈ ಮೂಲಕ ಗರ್ಭಿಣಿ ವiಹಿಳೆಯರಿಗೆ ಹೆರಿಗೆಯು ಭರಿಸಬಹುದಾದ ಹಾಗೂ ಕಡಿಮೆ ನೋವಿನ ಅನುಭವವಾಗಲಿದೆ

ಡಾ. ಜ್ಯೋತೀಸ್ ಹೆಲ್ತಕೇರ್ ಪ್ರೈವೇಟ್ ಲಿಮಿಟೆಡ್
#22,8 ನೇ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್, ಜೆ.ಎಸ್,ಎಸ್ ಲೇಔಟ್,ಶಕ್ತಿನಗರ್
ಮೈಸೂರು – 570029 ದೂರವಾಣಿ ಸಂಖ್ಯೆ – 0821 – 2475869,2475870

ನಮ್ಮ ನುರಿತತಜ್ಞ ವೈದ್ಯರು
ಡಾ. ಜ್ಯ ೀತ್ರ ಉಮೇಶ್ ಎಂ.ಬಿ.ಬಿ.ಎಸ್,ಡಿ.ಎನ್.ಬಿ(ಓಬಿಜಿ)
ವಯ ವಸ್ಥಾ ಪಕ ನಿರ್ದೆಶಕರು
ಡಾ.ಸುಷ್ಮಮ ಮ್ಧುಪಿ ಕಾಶ್
ಎಂ.ಬಿ.ಬಿ.ಎಸ್,ಡಿ.ಎನ್.ಬಿ(ಓಬಿಜಿ)

Leave a Reply

Your email address will not be published. Required fields are marked *