ನಂದಿನಿ ಮೈಸೂರು
ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇದೇ ಆ. ೧೧ ರಿಂದ ೨೦ ರವರೆಗೆ ನಗರದ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ವಸ್ತ್ರ ಉತ್ಸವ ಶೀರ್ಷಿಕೆ ಅಡಿಯಲ್ಲಿ ಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜೆಎಸ್‌ಎಸ್ ಪ್ರಕಟಣ ವಿಭಾಗದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಮೇಳದ ಉದ್ಘಾಟನೆಯನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ನೆರವೇರಿಸುವರು.
ನೇಕಾರರು ನೇಕಾರಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಮತ್ತು ಕ್ರೆöÊಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೊಗಲು ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಕೈಮಗ್ಗ ನೇಕಾರರು ಮತ್ತು ಕರಕುಶಲಕರ್ಮಿಗಳು ತಾವು ತಯಾರು ಮಾಡಿದ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ದೇಶದ ಸುಮಾರು ೭೫ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಗೊಳ್ಳುತ್ತಿದೆ ಎಂದು ತಿಳಿಸಿದರು.
ಅಲ್ಲದೆ, ನಮ್ಮ ರಾಜ್ಯದ ರೇಷ್ಮೆ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ. ಕಸೂತಿ ಸೀರೆ ತಮಿಳುನಾಡು ರಾಜ್ಯದ ಹರಿಶುದ್ಧ
ಕಾಂಜಿವರಂ ಸೀರೆ, ಕೇರಳ ರಾಜ್ಯದ ಕೈಮಗ್ಗ ಉತ್ಪನ್ನಗಳು, ಬಿಹಾರ್ ತಸ್ಸರ್ ಸೀರೆ, ಪಶ್ಚಿಮ ಬಂಗಾಳದ ಕಾಂತಾ ಸೀರೆ, ಬಲಚುರಿ ಸೀರೆ, ಭುಟಿಕ್ ಸೀರೆ, ಕಾಟನ್ ಸೀರೆಗಳು, ಮೊದಲಾದವು ಇರಲಿವೆ.
ನಿತ್ಯ ಬೆಳಗ್ಗೆ ೧೦ ರಿಂದ ರಾತ್ರಿ ಒಂಭತ್ತರವರೆಗೆ ಮೇಳ ತೆರೆದಿರಲಿದೆ ಎಂದರು.
ಯೋಜನಾ ನಿರ್ದೇಶಕ ಎಂ. ಶಿವನಂಜಸ್ವಾಮಿ, ರಾಕೇಶ್ ರೈ ಹಾಜರಿದ್ದರು.