ಏಕಾಗ್ರತೆಗೆ ಸಂಗೀತ ಸಹಕಾರಿ:ಶ್ವೇತಾ ಮಡಪ್ಪಾಡಿ

ನಂದಿನಿ ಮೈಸೂರು

“ಕರ್ನಾಟಕ ಸಂಗೀತದ ಕೇಂದ್ರ ಸ್ಥಾನದಂತಿರುವ ಮೈಸೂರು ನಗರದಲ್ಲಿಂದು ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದರೊಬ್ಬರ ಸಂಸ್ಮರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿ ತೋರುತ್ತಿದೆ”
ವಿಧ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಂಗೀತ ಸಹಕಾರಿಯಾಗುತ್ತದೆ
ಎಂದು ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ತಾಲವಾದ್ಯ ಪ್ರತಿಷ್ಠಾನ
ವತಿಯಿಂದ ಇಂದು ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್
ರವರ 13ನೇ ಬೆಲೆ ಸ್ಮರಣಾ ಕಾರ್ಯಕ್ರಮದಲ್ಲಿ ಡಾ.ಗಂಗೂಬಾಯಿ ಹಾನಗಲ್
ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು
ಎಲ್ಲಾ ಕಲೆಗಳೂ ಬದುಕಿಗೆ ಸರ್ವೋತ್ಕೃಷ್ಟ ಸಂತೋಷ ನೀಡಬಲ್ಲವೇ ಆಗಿವೆ. ಆದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೋಡಿಗೆ ಒಮ್ಮೆ ಒಳಗಾದರೆ ಅದರಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲದಷ್ಟು ಅದು ಮನಸ್ಸನ್ನು ಆಕ್ರಮಿಸಿಕೊಂಡು ಬಿಡುತ್ತದೆ. ಗಂಗೂಬಾಯಿಯವರ ತಾಯಿ ಸ್ವತಃ ಕರ್ನಾಟಕ ಶೈಲಿಯ ಅದ್ಭುತ ಗಾಯಕಿಯಾಗಿದ್ದರೂ ಮಗಳಿಗೆ ಹಿಂದೂಸ್ತಾನಿ ಗಾಯಕಿಯಾಗಿಸಬೇಕೆಂಬ ಹುಚ್ಚು ಹತ್ತಿಸಿಕೊಂಡವರಂತೆ. ಕರ್ನಾಟಕ ಸಂಗೀತದ ಪರಿಣಾಮ ಗಂಗೂಬಾಯಿಯವರ ಹಾಡಿಗೆ ತೊಂದರೆ ಉಂಟು ಮಾಡಬಾರದೆಂದು ತಾನು ಹಾಡುವುದನ್ನೇ ನಿಲ್ಲಿಸಿದ ಮಹಾತಾಯಿಯಂತೆ . ಗಂಗೂಬಾಯಿಯವರ ಸಾಧನೆ ಅವರ ತಾಯಿಯ ಕನಸೂ ಆಗಿತ್ತು. ಮಕ್ಕಳಲ್ಲಿ ಸಂಗೀತ ಸಾಹಿತ್ಯದ ಆಸಕ್ತಿಯನ್ನು ಹುಟ್ಟುಹಾಕಿ ಪೋಷಿಸುವಲ್ಲಿ ಹೆತ್ತವರ ಪಾತ್ರ ಎಷ್ಟಿರುತ್ತದೆಂಬುದನ್ನು ಗಂಗೂಬಾಯಿಯವರ ತಾಯಿ ಸಾಬೀತು ಮಾಡಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳ ಬದುಕಿನ ಹಾಗೆ ಜೀವನದ ಏಳು ಬೀಳುಗಳ ನಡುವೆ ಹೆಣ್ಣೊಬ್ಬಳು ಸಾಧನೆಯ ಉತ್ತುಂಗಕ್ಕೇರಿದ ರೀತಿಯೇ ಅತ್ಯದ್ಭುತವಾದದ್ದು. ಸಂಗೀತದ ಶ್ರೇಷ್ಠ ಗೌರವಗಳೆಲ್ಲ ಈ ಪುಟ್ಟ ಜೀವದ ಮಹಾನ್ ಸಾಧಕಿಯ ಮಡಿಲು ಸೇರಿದ ಕ್ರಮವೇ ರೋಮಾಂಚಕ. ಹೀಗಾಗಿ ಇಂಥ ಮೇರು ಗಾಯಕಿಯೊಬ್ಬರನ್ನು ನೆನಪಿಸಿಕೊಳ್ಳುವುದು ಅತ್ಯಂತ ಗೌರವಯುತ ಕೆಲಸ.
ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿಯವರ ಹೆಸರನ್ನಿರಿಸಿದೆ ರಾಜ್ಯ ಸರಕಾರ. ಅದು ಮತ್ತೆ ಮತ್ತೆ ಯುವ ಮನಸ್ಸುಗಳ ನಡುವೆ ಗಂಗೂಬಾಯಿಯವರ ಹೆಸರನ್ನು ಜೀವಂತವಾಗಿರಿಸಬಲ್ಲುದು. ಅದು ಮೈಸೂರಿನಲ್ಲೇ ಇದೆ ಎನ್ನುವುದು ನಮ್ಮ ಹೆಮ್ಮೆ. ಈ ವಿಶ್ವವಿದ್ಯಾಲಯವನ್ನು ಗಟ್ಟಿಯಾಗಿ ಬೆಳೆಯಬೇಕಾದ ಜವಾಬ್ದಾರಿಯನ್ನು ಸರಕಾರ ನಿರ್ವಹಿಸಬೇಕಾಗಿದೆ. ಗಂಗೂಬಾಯಿಯವರ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ ಜವಾಬ್ದಾರಿಯೊಂದು ನಮ್ಮ ಮುಂದಿದೆ. ಇಂಥದ್ದೊಂದು ಕಾರ್ಯಕ್ರಮ ನಮ್ಮಂಥ ಯುವ ಮನಸ್ಸುಗಳನ್ನು ಇಂಥ ಆರೋಗ್ಯಯುತ ಚಿಂತನೆಗಳಿಗೆ ಪ್ರೇರೇಪಿಸಬಲ್ಲುದು. ಹಾಗಾಗಿ ಸಂಘಟನಕಾರರಿಗೆ ಅಭಿನಂದನೆಗಳು ಎಂದರು. ಗಂಗೂಬಾಯಿ ಸ್ವರ ಗಂಗೆ. ತೊಂಬತ್ತೇಳು ವರುಷಗಳ ತುಂಬು ಜೀವನದ ತುಂಬಾ ಸಂಗೀತವೇ ತುಂಬಿತ್ತು. ಚಿಕ್ಕ ವಯಸ್ಸಿನಲ್ಲೇ ಆದ ಗಂಟಲಿನ ಶಸ್ತ್ರಚಿಕಿತ್ಸೆ ಯಿಂದ ಅವರ ಧ್ವನಿ ಗಡಸಾಗಿದ್ದಕ್ಕೆ ಹಲವರು ಅವರನ್ನು ಅಪಹಾಸ್ಯ ಮಾಡಿದ್ದರೆಂದು ಒಂದುಕಡೆ ದಾಖಲಾಗಿದೆ. ಇಂಥ ಗಂಟಲಿನಿಂದಲೇ ಪದ್ಮಭೂಷಣ, ಪದ್ಮವಿಭೂಷಣ, ಗೌರವ ಡಾಕ್ಟರೇಟ್ ನಂಥ ಹಲವು ಪ್ರತಿಷ್ಠೆ ಗಳನ್ನು ಮುಡಿಗೇರಿಸಿಕೊಂಡ ಗಂಗೂಬಾಯಿ ನಮ್ಮ ನಡುವೆ ಸದಾ ಜೀವಂತವಾಗಿರಬಲ್ಲ ದೈತ್ಯ ಪ್ರತಿಭೆ ಎಂದವರು ಅಭಿಪ್ರಾಯ ಪಟ್ಟರು.

ನಂತರ ಮಾತನಾಡಿದ ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ಇವತ್ತು ಡಾ. ಗಂಗೂಬಾಯಿ ಹಾನಗಲ್ ರವರ ಸಂಸ್ಮರಣಾ ಇಲ್ಲಿ ನಡೆಯುತ್ತಿದ್ದ ಭಾಗಿಯಾಗಿರುವುದು ಸಂತಸ ತಂದಿದೆ ಗಂಗೂಬಾಯಿ ಹಾನಗಲ್ ರವರ ಹೆಸರನ್ನು ರಾಜ್ಯದಲ್ಲಿ ದೇಶದಲ್ಲಿ ಕೇಳದೆ ಇರುವವರೇ ಇಲ್ಲ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈಗಾಗಲೇ ಅವರ ಹೆಸರಿನಲ್ಲಿ 1ಸಂಗೀತ ವಿಶ್ವವಿದ್ಯಾನಿಲಯವೇ ಪ್ರಾರಂಭಿಸಲಾಗಿದೆ ಇವರು ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು ಶಿಷ್ಯರು ಲಕ್ಷಾಂತರ ಮಂದಿ ಇವರ ಶಿಷ್ಯರಾಗಿ ಬೆಳೆದಿದ್ದಾರೆ ಗಂಗೂಬಾಯಿ ಹಾನಗಲ್ ರವರು ಆ ಸಂದರ್ಭದಲ್ಲಿ ಕಚೇರಿ ನಡೆಸುತ್ತಿದ್ದ ಸಂದರ್ಭದಲ್ಲಿ ಕಲೆ ಎನ್ನುವುದು ಸೇವೆಗೆ ಮೀಸಲಾಗಿತ್ತು ಇಂದು ಅದು ವ್ಯಾಪಾರೀಕರಣವಾಗುತ್ತಿದೆ ,ಸರ್ಕಾರ ಕಳೆಗೋಸ್ಕರ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಹಿಂದೆ ಶಾಲೆಯಲ್ಲಿ ಒಬ್ಬರು ಸಂಗೀತದ ಉಪಾಧ್ಯಾಯರು ಇರುತ್ತಿದ್ದರು
ಈಗ ಕಾಣೆಯಾಗಿದೆ ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದರು

ಗಾಯಕರಾದ ಶ್ವೇತಾ ಮಡಪ್ಪಾಡಿ ,ವಿದ್ವಾನ್ ಎಂ ಎಸ್ ಜಯರಾಮ್ ,ಪಂಡಿತ್ ಡಾ.ಶಿವಕುಮಾರ್ ,ವಿದ್ವಾನ್ ವಿಶ್ವನಾಥ್ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ ,ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ಡಾ.ಸಿ ಆರ್ ರಾಘವೇಂದ್ರ ಪ್ರಸಾದ್ ,ವಿದ್ವಾನ್ ನಾಗೇಂದ್ರ ಪ್ರಸಾದ್ ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷರಾದ ರವಿಶಂಕರ್ ,ತಬಲಾ ಜಗದೀಶ್ ,ರೇಖಾ ರಾಜು, ಸುಚೀಂದ್ರ ,
ಗಾಯಕರಾದ ಪುರುಷೋತ್ತಮ್ ,ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *