ಡಬಲ್ ಎಂಜಿನ್ ಸರ್ಕಾರ ವಿದ್ದರೆ ಮಾತ್ರ ರಾಜ್ಯ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್

ನಂದಿನಿ ಮೈಸೂರು

ಮೈಸೂರು:ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಗೆ ಬಿಜೆಪಿ ಸರ್ಕಾರ ವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ತಿಳಿಸಿದರು.

ಮಂಗಳವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಹಲವಾರು ಅಭಿವೃದ್ಧಿ ಕೆಲಸಗಳು, ಯೋಜನೆ ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ ಯನ್ನು ನಿರ್ಮಾಣ ಮಾಡಿ, ಅದರ ಉದ್ಘಾಟನೆ ಮಾಡಿದ ಮೋದಿಯವರು ವಾಹನ ಚಾಲಕರು, ಜನರಿಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಮೈಸೂರಿಗೆ ಮತ್ತಷ್ಟು ಕೈಗಾರಿಕೆಗಳು ಬರಲಿದ್ದು, ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಸೆಮಿ ಕಂಡಕ್ಟರ್ ಹಬ್ ನಿರ್ಮಾಣ ಘೋಷಣೆ ಮಾಡಿದ್ದು, ಇಲ್ಲಿ ನಿರ್ಮಾಣ ವಾದರೆ, ವಾಹನಗಳಿಗೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಕಾದ ಸೆಮಿ ಕಂಡಕ್ಟರ್ ಉತ್ಪಾದನೆ ಯಾಗಲಿದ್ದು, ಇಡೀ ವಿಶ್ವಕ್ಕೆ ಪೂರೈಕೆ ಯಾಗಲಿದೆ, ಈ ಹಬ್ ನಿರ್ಮಾಣ ದಿಂದಾಗಿ ಸಾವಿರಾರು ಮಂದಿ ಗೆ ಉದ್ಯೋಗ ಸಿಗಲಿದೆ.ಅಲ್ಲದೇ ಬೆಂಗಳೂರು ಬಿಟ್ಟರೆ ಮೈಸೂರೇ ಬೃಹತ್ ನಗರವಾಗಿ ಬೆಳೆದು, ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು. ಉಡಾನ್ ಯೋಜನೆ ಯಡಿ ಎಲ್ಲಾ ವಿಮಾನ ನಿಲ್ದಾಣ ಗಳಿಗೂ ವಿಮಾನ ಹಾರಾಟ ಹಾಗೂ ಸಂಪರ್ಕ ವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಲ್ಪಿಸಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಅಭಿವೃದ್ಧಿ ಗೂ ಅನುದಾನ ನೀಡಿದೆ.ಮೈಸೂರಿನ ರಿಂಗ್ ರೋಡ್ ನಿರ್ಮಿಸಲಾಗಿದೆ.ವಾಹನಗಳ ಸುಗಮ ಸಂಚಾರಕ್ಕಾಗಿ ಫೆರಿಫಲ್ ರಸ್ತೆಯ ನಿರ್ಮಾಣ ಕಾರ್ಯ ಕೂಡ ನಡೆಯುತ್ತದೆ ಎಂದು ಹೇಳಿದರು. ಪ್ರಧಾನ ಮೋದಿಯವರು ಇಡೀ ಭಾರತದ ಆರ್ಥಿಕತೆಯನ್ನು ಬಲಿಷ್ಟ ಗೊಳಿಸಲು ಹಲವಾರು ಕ್ರಮಕೈಗೊಳ್ಳುತ್ತಿದ್ದಾರೆ. ಭಾರತದ ಆರ್ಥಿಕ ಯತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುತ್ತಿದ್ದಾರೆ.ಕರ್ನಾಟಕ ದಲ್ಲೂ ಒಂದು ಟ್ರಿಲಿಯನ್ ಆರ್ಥಿಕ ಕೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.ಪ್ರತಿಯೊಂದು ಮನೆಗೂ ಜಲಜೀವನ್ ಮಿಷನ್, ಅಮೃತ್ ಯೋಜನೆ ಯಡಿ ಶುದ್ದ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.ಪ್ರತಿಯೊಂದು ಗ್ರಾಮಕ್ಕೂ, ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ರಸ್ತೆ ಸಂಪರ್ಕ ಗಳನ್ನು ಕಲ್ಪಿಸಿ, ಅಭಿವೃದ್ಧಿ ಪಡಿಸಲಾಗಿದೆ. ಡಬಲ್ ಎಂಜಿನ್ ಸರ್ಕಾರ ವಿದ್ದರೆ ಮಾತ್ರ ರಾಜ್ಯ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಹಾಗಾಗಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಗಾಗಿ ಮತದಾರರು 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಡಬೇಕು. ಮೈಸೂರಿನಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀ ವತ್ಸ, ಚಾಮರಾಜ ಕ್ಷೇತ್ರದ ಎಲ್.ನಾಗೇಂದ್ರ, ನರಸಿಂಹರಾಜ ಕ್ಷೇತ್ರದ ಸಂದೇಶ್ ಸ್ವಾಮಿ ಅವರು ಗಳನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಕಳೆದ 60 ವರ್ಷಗಳಿಂದ ಕಾಂಗ್ರೆಸ್ ರಾಜ್ಯದಲ್ಲಿ, ದೇಶದಲ್ಲಿ ಆಡಳಿತ ನಡೆಸಿದರೂ ಬಡವರ ಉದ್ಧಾರವಾಗಿಲ್ಲ, ರೈತರ ಏಳಿಗೆಯಾಗಿಲ್ಲ, ಸರ್ಕಾರದ ಯಾವುದೇ ಯೋಜನೆ ಗಳ ಫಲ ನೇರ ವಾಗಿ ಜನರಿಗೆ ತಲುಪುತ್ತಿರಲಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರತಿಯೊಂದು ಯೋಜನೆ ಗಳ ಫಲ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಇದರಿಂದಾಗಿ ಜನರ, ರೈತರ ಅಭಿವೃದ್ಧಿ ಯಾಗುತ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್ ನವರು ಸುಳ್ಳು ಭರವಸೆ ಗಳನ್ನು ಜನರಿಗೆ ನೀಡಿ, ಮರಳು ಮಾಡಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ. ಕರ್ನಾಟಕದ ಜನರು ಇದಕ್ಕೆ ಅವಕಾಶ ನೀಡಬಾರದು. ಜೆಡಿಎಸ್ -ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಒಳ ಒಪ್ಪಂದ ಮಾಡಿಕೊಂಡಿರುತ್ತಾರೆ. ಹಾಗಾಗಿ ಜೆಡಿಎಸ್ ಗೆ ಮತ ನೀಡಿದರೆ, ಕಾಂಗ್ರೆಸ್ ಗೆ ನೀಡಿದಂತೆ. ಜೆಡಿಎಸ್ ನ್ನು ಜನರು ತಿರಸ್ಕರಿಸಬೇಕು.150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಯನ್ನು ಗೆಲ್ಲಿಸುವ ಮೂಲಕ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಸರ್ಕಾರ ವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ಪ್ರಚಾರ ನಡೆಸಿದರೂ, ಅಲ್ಲಿ ಅವರ ಯಾವುದೇ ಜಾದೂ ನಡೆಯಲಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ, ಅದೇ ರೀತಿ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಅವರು ಬಂದು ಪ್ರಚಾರ ನಡೆಸಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಬಿಜೆಪ ನಗರ ಕಾರ್ಯಾಧ್ಯಕ್ಷ ಹೆಚ್.ಜಿ.ಗಿರಿಧರ್, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರ ದ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಕೇಬಲ್ ಮಹೇಶ್, ಸಹ ಸಂಚಾಲಕ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *