ಪ್ರೇರಣಾ ಜತೆಗಿನ ಪ್ರಗ್ನೆನ್ಸಿ ಫೋಟೋಶೂಟ್‌ ಶೇರ್ ಮಾಡಿದ ದ್ರುವ ಸರ್ಜಾ

 

*ನಂದಿನಿ ಮೈಸೂರು*

ಸ್ಯಾಂಡಲ್‌ವುಡ್‌ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಇದೇ ತಿಂಗಳು ಕುಟುಂಬಕ್ಕೆ ಹೊಸ ಅಥಿತಿಯನ್ನು ಬರ ಮಾಡಿಕೊಳ್ಳುತ್ತಿದ್ದಾರೆ.

ದ್ರುವ ಸರ್ಜಾ ಮತ್ತು ಪ್ರೇರಣಾ ಚಿಕ್ಕ ವಯಸ್ಸಿನಿಂದ ಸ್ನೇಹಿತರಾಗಿದ್ದರು. ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಮನೆಯ ಹಿರಿಯರಿಂದ ಒಪ್ಪಿಗೆ ಪಡೆದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ
2019ರ ನವೆಂಬರ್‌ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಮೂರು ವರ್ಷಗಳ ನಂತರ ಈ ಜೋಡಿ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪ ಅಮ್ಮ ಆಗುವ ಖುಷಿಯಲ್ಲಿ ಪ್ರಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ್ದಾರೆ.ಪ್ರೇರಣಾ
ಕಾಫಿ ಬಣ್ಣ,ನೀಲಿ ಬಣ್ಣ,ಗುಲಾಬಿ ಬಟ್ಟೆ, ತೊಟ್ಟಿದ್ದಾರೆ.ದ್ರುವ ಸರ್ಜಾ ಬ್ಲ್ಯಾಕ್ ಸೂರ್ಟ್ ,ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.
ಸ್ಕ್ಯಾನಿಂಗ್ ಫೋಟೋ ಹಿಡಿದು ಡಿಫರೇಂಟ್ ಆಗಿ ಪ್ರೇರಣಾ ಮತ್ತು ದ್ರುವ ಸರ್ಜಾ ಬೇಬಿ ಬಂಪ್ ಫೋಟೋ ತೆಗೆಸಿದ್ದಾರೆ.

ಫೋಟೋಶೂಟ್ ನಲ್ಲಿರುವ
ಉಡುಪುಗಳನ್ನು ಚೇತನ್ ಡಿಸೈನ್ ಮಾಡಿದ್ದಾರೆ.ಜೀವಿತಾ ಹಾಗೂ ಆಧ್ಯಾ ರಾಜ್ ಮೇಕಪ್ .ಸಾಕೇತ್ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದಾರೆ.ಕಾಂತಿ ಸ್ಟುಡಿಯೋ ಮತ್ತು ಪ್ರವೀಣ್ ಗೌಡ ವಿಭಿನ್ನವಾಗಿ ವಿಡಿಯೋ ಹಾಗೂ ಗ್ರಾಫಿಕ್ಸ್ ಮಾಡಿದ್ದು ಅದರಲ್ಲಿ ಅಂಬಾರಿ ಸಿನಿಮಾದ ಪೆದ್ದು ಮುದ್ದು ಜೋಡಿ ಹಾಡನ್ನು ಹಾಕಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ಧ್ರುವ ಸರ್ಜಾ ದಂಪತಿ
ವಿಶೇಷ ಪ್ರಗ್ನೆನ್ಸಿ ಫೋಟೋಶೂಟ್‌ ಮೂಲಕ ಸಿಹಿ ಸುದ್ದಿ ಹೇಳಿಕೊಂಡಿದ್ದಾರೆ.
ನಾವಿಬ್ಬರೂ ಇದೀಗ ಮತ್ತೊಂದು ಘಟ್ಟ ತಲುಪಿದ್ದೇವೆ, ನಮ್ಮ ಜೀವನದ ಹೊಸ ಪೇಸ್ ಎಂಟರ್ ಆಗುತ್ತಿದ್ದೀವಿ.
ಶೀಘ್ರದಲ್ಲಿ ಪುಟಾಣಿಯೊಂದು ನಮ್ಮ ಮಡಿಲು ಸೇರಲಿದೆ.ಪುಟ್ಟ ಕಂದಮ್ಮನನ್ನು ಆಶೀರ್ವಾದಿಸಿ ಜೈ ಹನುಮಾನ್ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

ಸದ್ಯ ಧ್ರುವ ಸರ್ಜಾ ಎ.ಪಿ ಅರ್ಜುನ್‌ ನಿರ್ದೇಶನದ ಮಾರ್ಟಿನ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಧ್ರುವ ಅವರ ಈ ಪೋಸ್ಟ್‌ಗೆ ಮೇಘನಾ ರಾಜ್‌ ಸರ್ಜಾ ಸಹ ಕಮೆಂಟ್‌ ಮಾಡಿದ್ದು, “ಖುಷಿಯ ಸುದ್ದಿ ನೀಡಿದ್ದೀರಿ. ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡಲಿ, ಪುಟಾಣಿಗೂ ಸಹ” ಎಂದಿದ್ದಾರೆ.

ಪ್ರೇರಣಾ ದ್ರುವ ಸರ್ಜಾರವರ ಕೂಸು ಅವರ ಕುಟುಂಬಕ್ಕೆ ದುಪ್ಪಟ್ಟು ಖುಷಿ ತಂದುಕೊಡುತ್ತಾ ಎಂಬುದನ್ನ ಕಾದಷ್ಟೇ ನೋಡಬೇಕಿದೆ.

Leave a Reply

Your email address will not be published. Required fields are marked *