ವಿಶೇಷಚೇತನ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹು ಮುಖ್ಯ: ದೇಚಿ ಕಾವೇರಿಯಪ್ಪ

ಸರಗೂರು:12 ಜನವರಿ 2022 

ವಿಶೇಷಚೇತನ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹು ಮುಖ್ಯ ಎಂದು ಆಶ್ರಿತಾ ಶಿಶು ಅಭಿವೃದ್ಧಿ ಕೇಂದ್ರದ ಸಹ ಸಂಸ್ಥಾಪಕರಾದ ದೇಚಿ ಕಾವೇರಿಯಪ್ಪ ಅವರು ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಛೇರಿಯಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಗುವಿನ ಅಂಗವಿಕಲತೆ ಬಗ್ಗೆ ಯೋಚಿಸುವುದಕ್ಕಿಂತ, ಅಂಗವಿಕಲತೆಗೆ ಪರಿಹಾರವನ್ನು ಕಂಡುಕೊಳ್ಳಲು ಪೋಷಕರು ಮುಂದಾಗಬೇಕು ಎಂದರು. 

ಪೋಷಕರು ತಮ್ಮ ಮಗುವಿನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದೆ, ಮುಖ್ಯ ವಾಹಿನಿಗೆ ತರುವಂತಹ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.

ಹುಣಸೂರು ತಾಲೂಕಿನಿಂದ ಆಶಾ ಎಂಬುವವರು ಕರೆ ಮಾಡಿ ನನ್ನ ಮಗನಿಗೆ 6 ವರ್ಷ ಆದರೆ ಅವನಿಗೆ ಅಪ್ಪ, ಅಮ್ಮ ಬಿಟ್ಟರೆ ಇನ್ಯಾವ ಪದಗಳು ಬರುತ್ತಿಲ್ಲ ಹಾಗಾಗಿ ಅವನ ಮುಂದಿನ ಶಿಕ್ಷಣಕ್ಕೆ ಏನು ಮಾಡಬೇಕೆಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೇಚಿ ಅವರು ಮಗುವಿಗೆ ನಿರಂತರವಾಗಿ ಪಿಸಿಯೋ ಥೆರಪಿ ಕೋಡಿಸಿ. ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದರು.

ಬಳಿಕ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಅವರು ವಿಶೇಷ ಚೇತನ ಮಕ್ಕಳಿಗೆ, ಚಿಕ್ಕ ವಯಸ್ಸಿನಲ್ಲಿ ಯಾವ ವಿಧದ ಶಿಕ್ಷಣ ನೀಡುವುದು ಉತ್ತಮ ಎಂದು ಕೇಳಿದರು.

ಮನೆಯೇ ಮೊದಲ ಪಾಠ ಶಾಲೆ ಅಂದ ಹಾಗೆ ಚಿಕ್ಕ ಮಕ್ಕಳಿಗೆ ವಿಶೇಷ ಅಗತ್ಯಯುಳ್ಳ ಶಿಕ್ಷಣವನ್ನು ತಮ್ಮ ಮನೆಯಲ್ಲಿಯೇ ಹೇಳುವುದು ಉತ್ತಮ.

ಕಾರ್ಯಕ್ರಮವನ್ನು ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕರಾದ ನಿಂಗರಾಜು ಅವರು ನಡೆಸಿಕೊಟ್ಟರು.

ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಶಿವಲಿಂಗ್, ಸೋಮೇಶ್, ಶ್ರೀಕಾಂತ್, ಸಿದ್ಧಾರ್ಥ, ಇದ್ದರು.

ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು.

Leave a Reply

Your email address will not be published. Required fields are marked *