ನಂಜನಗೂಡು:11 ಜನವರಿ 2022
ನಂದಿನಿ
ರೈತರು ಒಕ್ಕಣೆಗಾಗಿ ರಸ್ತೆಯಲ್ಲಿ ಹುರುಳಿ ಹಾಕಿದ್ದ ಹಿನ್ನೆಲೆ
ಹುರುಳಿ ಒಟ್ಟಿನಿಂದ ಹೊತ್ತಿ ಉರಿದು ಕಾರು ಸುಟ್ಟು ಕರಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಂಜನಗೂಡು ತಾಲೂಕಿನ
ಬದನವಾಳು ದೇವನೂರು ರಸ್ತೆಯಲ್ಲಿ 3 ಕಿಲೋ ಮೀಟರ್ ದೂರದಲ್ಲಿ ರಸ್ತೆಯಲ್ಲಿ ಹಾಕಿದ್ದ ಹುರುಳಿ ಒಕ್ಕಣೆಯಿಂದ ಕಾರಿನ ಎಂಜಿನ್ ಗೆ ಒಣಗಿದ ಹುರುಳಿ ಸೊಪ್ಪು ಸುತ್ತಿಕೊಂಡ ಪರಿಣಾಮ
ಓಮ್ನಿ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ತಕ್ಷಣ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದೇವೆ.
ಕಾರಿನಿಂದ ಹೊರ ಬಂದು ಬೆಂಕಿ ನಂದಿಸಲು ಯತ್ನಿಸಿದರೂ ಕಾರು ಸುಟ್ಟು ಕರಕಲಾಗಿದೆ ಎಂದು ವಾಹನ ಚಾಲಕ ಪೋಲಿಸರಿಗೆ ದೂರು ನೋಡಿದ್ದಾನೆ.
ಕಾರಿನವರು ಬನ್ನೂರು ಮೂಲದವರು ಎನ್ನಲಾಗಿದೆ.ಆ ರಸ್ತೆಯಲ್ಲಿ 3 ಕಿಲೋಮೀಟರ್ ಹಿಂದೆ ವರೆಗೂ ಯಾವುದೇ ಉರುಳಿ ಒಕ್ಕಣೆ ಮಾಡಿಲ್ಲ.ಉರುಳಿ ಒಕ್ಕಣೆ ಹುಲ್ಲು ಕಾರಿಗೆ ಸಿಕ್ಕಿಕೊಂಡು ಕಾರು ಸಂಪೂರ್ಣ ಭಸ್ಮವಾಗಿದೆ ಎಂದು ಕಾರಿನವರು ತಿಳಿಸಿದ್ದಾದರೂ.ಇದು ಯಾವುದರಿಂದ ಆಗಿದೆ ಎಂದು ಕವಲಂದೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕಾರು ಉರುಳಿ ಹುಲ್ಲಿನಿಂದ ಸುಟ್ಟು ಕರುಕಲಾಗಿದ್ದೀಯಾ ಅಥವಾ ಕಾರಿನಲ್ಲಿಯೇ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿದ್ದೀಯಾ ಎಂಬುದು ಪೋಲಿಸರ ತನಿಖೆ ನಂತರವೇ ಸತ್ಯ ಸತ್ಯತೆ ಹೊರಬೀಳಲಿದೆ.