ದಿ. ಚಂಪಾರವರಿಗೆ ಶ್ರದ್ಧಾಂಜಲಿ

ಮೈಸೂರು:11 ಜನವರಿ 2022

ನಂದಿನಿ ಮೈಸೂರು

ಹಿರಿಯ ಸಾಹಿತಿ ,ಹೋರಾಟಗಾರರಾದ
ದಿವಂಗತ ಪ್ರೊ ಚಂದ್ರ ಶೇಖರ್ ಪಾಟೀಲ ( ಚಂಪಾ ) ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ದಿವಂಗತ ಪ್ರೊ ಚಂದ್ರ ಶೇಖರ್ ಪಾಟೀಲ ( ಚಂಪಾ ) ರವರಿಗೆ ಇಂದು ರಾಜ್ಯಾದ್ಯಕ್ಷರಾದ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಮೈಸೂರಿನ ರಾಜ್ ಕುಮಾರ್ ಉದ್ಯಾನವನ ದಲ್ಲಿ ಚಂಪಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.

ಇದೆ ಸಂಧರ್ಭದಲ್ಲಿ ಕೆ ಎಸ್ ಶಿವರಾಂ , ಕೆ ಎಸ್ ಭಗವಾನ್ ಅವರು ಮಾತನಾಡಿ
ಚಂಪಾ ರವರು ಕವಿ ,ಸಾಹಿತಿ ನಾಟಕಕಾರ , ವಿಮರ್ಶಕ , ಭಾಷಣಾಕಾರರಾಗಿ ಕನ್ನಡ ಪರ ಹೋರಾಟಗಾರರಾಗಿ ವೈಚಾರಿಕಥೆಗೆ ಗುರುವಾಗಿ ಬಹುಮುಖ ಪ್ರತಿಭೆಯ ಮೇರು ಪರ್ವತವಾಗಿದ್ದರು.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಭೋಧನ ಮಾಧ್ಯಮವಾಗಿರಬೇಕು ಎಂದು ಆಗ್ರಹಿಸಿದ್ದರು . ಕರ್ನಾಟಕದಲ್ಲಿದ್ದರೆ , ಅವರು ಕನ್ನಡವನ್ನು ಕಲಿಯಬೇಕು ಎಂಬ ವಿಷಯಗಳ ಬಗ್ಗೆ ಚಂಪಾ ಅವರು ನಿರಂತರವಾಗಿ ಹೋರಾಡಿದ್ದರು.
ಚಂಪಾ ರವರ ನಿಧನ ಜನಪರ ಚಳುವಳಿಯ ಮತ್ತೊಂದುಕೊಂಡಿ ಕಳಚಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನುಡಿ‌ನಮನ ಕಾರ್ಯಕ್ರಮದಲ್ಲಿ
ಮುಖಂಡರಾದ ಲೋಕೇಶ್ ಕುಮಾರ್ ಮಾದಪುರ , ಎಸ್ ಆರ್.ರವಿ , ರೋಹಿತ್‌ ಮಂಜುಳ ಸೌಂಡ್ಸ್ , ಮುಂತಾದವರು ಭಾಗವಹಿಸಿದ್ದರು .

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published. Required fields are marked *