102 Views
ಗುಂಡ್ಲುಪೇಟೆ:30 ಸೆಪ್ಟೆಂಬರ್ 2021
ನ@ದಿನಿ
ಜಮೀನಿಗೆ ದನಗಳನ್ನು ಮೇಯಿಸಲು ತೆರಳಿದ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತೆರಕನಾಂಬಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಪ್ಪ ಮೃತ ದುರ್ದೈವಿ. ಸಾವಿಗೆ ಕಾರಣವಾಗಿರುವ ಜಮೀನಿನ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಕುಟುಂಬಸ್ಥರು ತೆರಕನಾಂಬಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮರಣೋತ್ತರದ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.