ಸರಳ ದಸರಾ ಬೇಡ ನಾಡ ಹಬ್ಬ ವಿಜೃಂಭಣೆಯಾಗಿ ನಡೆಸಿ:ವಾಟಾಳ್ ನಾಗರಾಜ್

 

ಮೈಸೂರು:30 ಸೆಪ್ಟೆಂಬರ್ 2021

ನ@ದಿನಿ

                ಸರಳ ದಸರಾ ಬೇಡ ವಿಶ್ವ ವಿಖ್ಯಾತ ನಾಡ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುವಂತೆ ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.

                 ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ವಿವಿಧ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

                  ನಂತರ ಮಾತನಾಡಿದ ಅವರು ಈ ಬಾರಿಯ ದಸರಾ ಜನಸಾಮಾನ್ಯರ ದಸರಾವಾಗಿ ಆಚರಣೆಯಾಗುತ್ತಿಲ್ಲ.ದಸರಾವನ್ನ ಬಿಜೆಪಿ ಸರ್ಕಾರ ತನ್ನ ಇಷ್ಟದಂತೆ ಮಾಡುತ್ತಿದೆ.ಉಸ್ತುವಾರಿ ಸಚಿವರಿಗೆ ಮಾತ್ರ ದಸರಾ ಆಗ್ತಿದೆ.ಜನಸಾಮಾನ್ಯರ ದಸರಾ ಆಗುತ್ತಿಲ್ಲ.ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಬಾರದು.ಬನ್ನಿಮಂಟಪದ ಜಂಬೂಸವಾರಿ ಮೆರವಣಿಗೆ ಮಾಡಿ ಜನರು ನೋಡಲು ಅವಕಾಶ ಕೊಡಬೇಕು.

                 ದಸರಾ ಉದ್ಘಾಟನೆಗೆ ಎಸ್.ಎಂ ಕೃಷ್ಣ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಸರ್ಕಾರ ದಸರಾ ಸಂಪ್ರದಾಯ ವನ್ನ ಗಾಳಿಗೆ ತೂರಿದೆ.ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕವಾಗಿ ಎಸ್.ಎಂ ಕೃಷ್ಣರ ಬಗ್ಗೆ ಗೌರವ ಇದೆ.ಆದರೆ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸರಿಯಲ್ಲ.ಹಿಂದಿನಿಂದಲೂ ದಸರಾಗೆ ತನ್ನದೇ ಆದ ಸಂಪ್ರದಾಯವಿದೆ.ಅದನ್ನ ಬಿಜೆಪಿ ಸರ್ಕಾರ ಬೆಳೆಸಿಕೊಂಡು ಹೋಗಬೇಕು.ಅದು ಬಿಟ್ಟು ತನ್ನಿಷ್ಟದಂತೆ ದಸರಾ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *