ನಂದಿನಿ ಮೈಸೂರು
80 ರ ದಶಕದಲ್ಲಿ ಓದುವುದಕ್ಕೂ ಬಡತನ ಎದುರಾಗಿತ್ತು.ಆ ಕಾಲದಲ್ಲಿ ಬಡತನದಿಂದ ಬಂದ ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ನಡೆಸಿ ಇಂದು ಸರ್ಕಾರಿ ಹುದ್ದೇ ಪಡೆದಿದ್ದರೂ 1985 ರಲ್ಲಿ ಅಕ್ಷರ ಬಿತ್ತಿದ ಗುರುಗಳಿಗೆ 35 ವರ್ಷದ ಹಿಂದಿನ ವಿಧ್ಯಾರ್ಥಿಗಳು ಒಟ್ಟುಗೂಡಿ ಒಂದೇ ವೇದಿಕೆಯಲ್ಲಿ ಗುರುಗಳನ್ನು ವಂದಿಸಿದರು.ಆ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು ಹಳೆ ವಿಧ್ಯಾರ್ಥಿಗಳ ಮೊಮ್ಮೊಕ್ಕಳು.
ಹೌದು ದೊಡ್ಡ ಸಭಾಂಗಣ ವೇದಿಕೆಯಲ್ಲಿ ನೆಚ್ಚಿನ ಗುರುಗಳು ಕುಳಿತುಕೊಂಡಿದ್ರೇ ವೇದಿಕೆ ಮುಂಭಾಗ ಹಳೆ ವಿಧ್ಯಾರ್ಥಿಗಳ ಪೋಷಕರು,ಪತ್ನಿ,ಮಕ್ಕಳು ಮೊಮ್ಮೊಕ್ಕಳು ಆಸೀನರಾಗಿದ್ರು.
ನಜರಬಾದ್ ಬಳಿ ಇರುವ ಡಿಸಿ ಹಾಸ್ಟೆಲ್ ನಲ್ಲಿ ವಿಭಜಿತ ಮಹಾರಾಜ ಜೂನಿಯರ್ ಕಾಲೇಜ್ ಮತ್ತು ಪ್ರೌಢಶಾಲಾ 35 ವರ್ಷಗಳ ಹಳೆ ವಿಧ್ಯಾರ್ಥಿಗಳು ಅರ್ಥಪೂರ್ಣವಾಗಿ
ಗುರುವಂದನಾ ಕಾರ್ಯಕ್ರಮ ನಡೆಸಿದರು.
ಆ ಹಳೆ ವಿಧ್ಯಾರ್ಥಿಯಲ್ಲಿ ಒಬ್ಬ ದೇಶದ ಬೆನ್ನೆಲುಬು ರೈತನಾಗಿದ್ರೇ,ಮತ್ತೊಬ್ಬ ಪೋಲಿಸ್ ಅಧಿಕಾರಿಯಾಗಿದ್ದ,ಇನ್ನೊಬ್ಬ ಉನ್ನತ ಹುದ್ದೆ ಅಲಂಕರಿಸಿದ್ದ ಅದಲ್ಲದೇ ನೂರಾರು ಹಳೆ ವಿಧ್ಯಾರ್ಥಿಗಳು ಸ್ವದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡರೇ ಇನ್ನೂ ಕೆಲವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.1985 ರ ಹಾಸು ಪಾಸಿನ ಸ್ನೇಹಿತರೆಲ್ಲ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಕುಟುಂಬ ಸಮೇತ ಗುರುಗಳಿಗೆ ಗುರುವಂದನೆ ಅರ್ಪಿಸಿದ್ದಾರೆ.
ಚಿಕ್ಕ ಹನುಮಂತು, ಚಿಕ್ಕಲಿಂಗಯ್ಯ , ಬಸವರಾಜು , ರಮೇಶ್ ಗೌಡ, ಪ್ರಭುಕುಮಾರ್, ಮಹೇಶ್ ಕುಮಾರ್, ಶ್ರೀನಿವಾಸ್, ಶಿವಮೂರ್ತಿ ಸೇರಿದಂತೆ ಹಲವರು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಬಳಿ ವಿಧ್ಯಾಭ್ಯಾಸ ಮಾಡುತ್ತಿದ್ದ ಆ ದಿನಗಳನ್ನು ಮೆಲುಕು ಹಾಕಿದರು. ಪತ್ನಿ,ಮಕ್ಕಳು ಮೊಮ್ಮೊಕ್ಕಳ ಬಳಿ ಖುಷಿ ಹಂಚಿಕೊಂಡರು. ವರ್ಣರಂಜಿತ ಗುರುವಂದನಾ ಕಾರ್ಯಕ್ರಮ ಯುವ ಪೀಳಿಗೆಗೆ ಸ್ಪೂರ್ತಿಯಾಗುವಂತಿತ್ತು.ಹಳೆ ವಿಧ್ಯಾರ್ಥಿಗಳು ಸರ್ಕಾರಿ ನೌಕರರಾಗಿದ್ದರೂ ಉನ್ನತ ಹುದ್ದೆಗೆ ಏರಿದರೂ ಸಹ ಅವರ ಸ್ನೇಹ,ಅವರ ನಡೆ,ಹಳ್ಳಿ ಸೊಗಡಿನ ಮಾತು ಇಂದಿಗೂ ಹಾಗೇಯೇ ಇದ್ದಿದ್ದು ವಿಶೇಷವಾಗಿತ್ತು.