ಕಾಂಗ್ರೆಸ್ ಪಕ್ಷ ಹರೀಶ್ ಗೌಡರವರಿಗೆ ಟಿಕೇಟ್ ನೀಡುವಂತೆ ವಿವಿಧ ಸಮುದಾಯದಿಂದ ಒತ್ತಾಯ

ನಂದಿನಿ ಮೈಸೂರು

ಕಾಂಗ್ರೆಸ್ ಮುಖಂಡ ಹರೀಶ್ ಗೌಡರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ವಿವಿಧ ಸಮುದಾಯದ ಮುಖಂಡರು ಒತ್ತಾಯಿಸಿದರು.

ಮೈಸೂರಿನ ವಿಜಯನಗರದ ತ್ರಿನೇತ್ರ ಸರ್ಕಲ್ ಬಳಿ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹರೀಶ್ ಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗಲಿ ಎಂದು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ
ಗಣೇಶ್ ಮಾತನಾಡಿ ಜನರ ಹಿತದೃಷ್ಠಿ ಕಾಯುವ ಜನರಿಗೆ ಸ್ಪಂದಿಸುವ ನಾಯಕ ಹರೀಶ್ ಗೌಡ.ಕೋರೋನಾ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.ಕ್ಷೇತ್ರದ ಜನ ಯಾವುದೇ ಸಮಸ್ಯೆ ಹೇಳಿಕೊಂಡರೇ ಅದನ್ನು ಬಗೆ ಹರಿಸುವ ಕೆಲಸ ಮಾಡುತ್ತಾರೆ.
2023 ಕ್ಕೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ
ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಬೇಕು.ಇದು ಒಬ್ಬರ ಒತ್ತಾಯವಲ್ಲ ಕ್ಷೇತ್ರದ ಎಲ್ಲಾ ಸಮುದಾಯದ ಜನರ ಒತ್ತಾಯ.ಈಬಾರಿ ಹರೀಶ್ ಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡುತ್ತೇವೆ ಎಂದರು.

ಚಂದ್ರೇಗೌಡ,ಸಿದ್ದಪ್ಪಾಜಿ,ನರಸೇಗೌಡ,ಪಾಯದ ನಾಗರಾಜು,ರಮೇಶ್ ಕೋಳಿ ಅಂಗಡಿ,ರಾಮಚಂದ್ರ,ರವಿ,ಜಲ್ಲಿ ಮಹದೇವ್ ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *