ದಸರಾ ಜವಾಬ್ದಾರಿ ಹೊತ್ತು ಅರಮನೆಗೆ ಹೆಜ್ಜೆ ಹಾಕಿದ ಅಭಿಮನ್ಯುವಿಗೆ ಭವ್ಯ ಸ್ವಾಗತ

 

ಮೈಸೂರು: 16 ಸೆಪ್ಟೆಂಬರ್ 2021

ನ@ದಿನಿ

                 ವಿಶ್ವವಿಖ್ಯಾತ ಅರಮನೆ ತುಂಬೆಲ್ಲಾ ಸಂಭ್ರಮ ಸಡಗರ,750 ಕೆಜಿ ತೂಕದ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ ಗಜಪಡೆ ಜಯಮಾರ್ತಾಂಡ ದ್ವಾರಕ್ಕೆ ಆಗಮಿಸುತ್ತಿದಂತೆ ಹೂವಿನ ಸುರಿಮಳೆ.ಮಂಗಳ ವಾದ್ಯ,ಪೂರ್ಣ ಕುಂಭ ಸ್ವಾಗತ,ಪೋಲಿಸ್ ಗೌರವದೊಂದಿಗೆ 8 ಆನೆಗಳು ಅರಮನೆಯತ್ತ ಹೆಜ್ಜೆ ಹಾಕಿವೆ.

                   ಹೌದು, ದಸರಾ ಮಹೋತ್ಸವಕ್ಕೆಂದು ಆಗಮಿಸಿರುವ ಗಜಪಡೆಯನ್ನು ಅರಮನೆಯಲ್ಲಿ ಭವ್ಯವಾಗಿ ಸ್ವಾಗತ ಕೋರಿ ಅರಮನೆಗೆ ಬರಮಾಡಿಕೊಳ್ಳಲಾಯಿತು.ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಪೂಜೆ ನೆರವೇರಿಸುವ ಮೂಲಕ ಸ್ವಾಗತ ಕೋರಿದರು.

                  ಅರಮನೆಯ ಬಾಗಿಲಿನಲ್ಲಿ ಗಜಪಡೆಗೆ ಹೂಮಳೆ ಸುರಿಸಲಾಯಿತು.ಇದ್ದಕ್ಕೂ ಮುನ್ನ ಸಿಂಗಾರಗೊಂಡ ಆನೆಗಳಿಗೆ ಕಬ್ಬು ಬೆಲ್ಲ ತೆಂಗಿನಕಾಯಿ ನೈವೇದ್ಯ ಮಾಡಲಾಯಿತು.

                      ಕ್ಯಾಪ್ಟನ್  ಅಭಿಮನ್ಯು, ಧನಂಜಯ, ಕಾವೇರಿ,ಚೈತ್ರ,ಲಕ್ಷ್ಮಿ,ಗೋಪಾಲಸ್ವಾಮಿ ಅಶ್ವತ್ಥಾಮನಿಗೆ ಒಟ್ಟಿಗೆ ಪೂಜೆ ಸಲ್ಲಿಸಲಾಯಿತು.ವಿಕ್ರಮ ಆನೆಗೆ ಪ್ರತ್ಯೇಕ ಪೂಜೆ ಸಲ್ಲಿಸಿದರು.

                    ಅರಣ್ಯ ಭವನದಿಂದ ಅರಮನೆಗೆ ಎಂಟ್ರಿ ಕೊಡೋ ಮುನ್ನ ದಸರಾ ಮಹೋತ್ಸವಕ್ಕೆ ಮೊದಲಾ ಬಾರಿಗೆ ಆಗಮಿಸಿರುವ ಅಶ್ವತ್ಥಾಮ ನಗರದ ಸದ್ದು ಗದ್ದಲ ನೋಡಿ ರಸ್ತೆಯ ಫುಟ್ ಬಾತ್ ಏರಿದ್ರೇ.ಇತ್ತ ವಿಕ್ರಮ ಅರಮನೆ ದ್ವಾರಕ್ಕೆ ಬರದೇ ಸಪರೇಟ್ ಆಗಿ ಸೈಡಿನಲ್ಲೇ ಪೂಜೆ ಮಾಡಿಸಿಕೊಂಡ.

                    ಒಟ್ಟಾರೆ ಹೇಳೋದಾದರೇ
ಶುಭ ಲಗ್ನದಲ್ಲಿ ಅರಮನೆ ಅಂಗಳಕ್ಕೆ ಕಾಲಿಟ್ಟಿರುವ ಗಜಪಡೆಗೆ ದಸರ ಯಶಸ್ವಿ ಭಾರ ಹೆಗಲ ಮೇಲಿದೆ.

 

Leave a Reply

Your email address will not be published. Required fields are marked *