ಎಚ್.ಡಿ.ಕೋಟೆ:27 ಸೆಪ್ಟೆಂಬರ್ 2021
ಎಚ್ ಡಿ ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಆವರಣದಲ್ಲಿ ,ಕಾನೂನು ಪ್ರಾಧಿಕಾರ ,ಕಾನೂನು ಸೇವಾ ಸಮಿತಿ , ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹದ ಅರಿವು,ಕೋವಿಡ್19, ಪೌಷ್ಟಿಕ ಆಹಾರಗಳ ಮಾಹಿತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎಚ್ಡಿ,ಕೋಟೆ ಪಟ್ಟಣದ ಹೆಚ್ಚುವರಿ ನ್ಯಾಯಾಧೀಶರಾದ ಮೊಹಮ್ಮದ್ ಶಾಹಿದ್ ಚೌತಾಯಿ ರವರು ಉದ್ಘಾಟನಾ ಭಾಷಣ ಮಾಡಿ ,ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಕೇವಲ 1 % ಮಾತ್ರ ಕಾನೂನು ಮಾಹಿತಿ ಸಾರ್ವಜನಿಕರಿಗೆ ದೊರೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಅದರ ಪ್ರಯುಕ್ತ ಹಳ್ಳಿಗಳಿಗೆ ತೆರಳಿ ಸಾರ್ವಜನಿಕರು ಬಾಲ್ಯವಿವಾಹವನ್ನು ಮಾಡಬಾರದು ,ಬಾಲ್ಯವಿವಾಹವನ್ನು ತಡೆಯುವ ಪಾತ್ರ ಬರೀ ಅಧಿಕಾರಿಗಳದ್ದು ಮಾತ್ರವಲ್ಲ ,ಮದುವೆ ತಯಾರಿಗೆ ಅಡುಗೆ ಮಾಡುವ ಭಟ್ಟ ನಿಂದ ಹಿಡಿದು ,ಆಭರಣ ಕೊಡುವ ಅಂಗಡಿಯವರೆಗೂ ,ಶಾಮಿಯಾನದ ತಯಾರಿ ಮಾಡುವ ಶಾಮಿಯಾನ ಅಂಗಡಿಯವರಿಗೂ ,ಯಾವ ವಿಷಯಕ್ಕಾಗಿ ಮುಂಜಾಗೃತ ಕ್ರಮ ಮಾಡುತ್ತಿದ್ದಾರೆ ಎಂಬುದರ ಅರಿವು ಮಾಡಿ ಬಾಲ್ಯ ವಿವಾಹಕ್ಕೆ ತಯಾರಿ ಮಾಡುತ್ತಿದ್ದರೆ ಇಂತಹವರಿಂದ ಹಿಡಿದು ನಾವು ನಿಮಗೆ ಸಹಕಾರ ಕೊಡುವುದಿಲ್ಲ ಎಂಬ ಮಟ್ಟಿಗೆ ಜಾಗೃತಿ ಮೂಡಬೇಕು ,ಹದಿಹರೆಯದ ಮಕ್ಕಳಿಗೆ ಶಿಕ್ಷಣದ ಮೊಟಕು ಮಾಡಿ ,ಈ ಕೊರೊನಾ ಸಂದರ್ಭದಲ್ಲಿ ದುಡಿಮೆಯಿಲ್ಲದ ಬಡವರ್ಗದ ಜನರು ,ಖರ್ಚು ಉಳಿಯುತ್ತದೆ ಎಂಬ ಕಾರಣಕ್ಕಾಗಿ ಗೋಪ್ಯವಾಗಿ ಬಾಲ್ಯ ವಿವಾಹವನ್ನು ಮಾಡಿ ತಮ್ಮ ಹೊರೆಯನ್ನು ಇಳಿಸುತ್ತಿದ್ದಾರೆ ,ಆದರೆ ಇದು ತಪ್ಪು ಈ ರೀತಿ ಮಾಡಬೇಡಿ ಮಗುವಿನ ಆರೋಗ್ಯದ ಮೇಲೆ ಮತ್ತು ಸಮಾಜ ತಲೆ ತಗ್ಗಿಸುವಂತಾಗುತ್ತದೆ ,ನಿಮ್ಮ ಹಳ್ಳಿಯ ವ್ಯಾಪ್ತಿಯಲ್ಲಿ ಬ್ಯಾಲೆ ವಿವಾಹವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆದಾಗ,ಇಷ್ಟೊಂದು ಹಿಂದುಳಿದ ಹಳ್ಳಿಗಳಲ್ಲಿ ಅಭಿವೃದ್ಧಿ ಆಗಲು ಮುಂದೆ ಯಾರೂ ಬರುವುದಿಲ್ಲ ,ಮತ್ತು ಸರ್ಕಾರದ ಮಟ್ಟದಲ್ಲಿ ನಿಮ್ಮ ಹಳ್ಳಿಯ ಬಗ್ಗೆ ಚರ್ಚೆ ನಡೆಯುತ್ತದೆ ,ಹಾಗಾಗಿ ಬಾಲ್ಯವಿವಾಹವನ್ನು ತಡೆಯಲು ಆಯಾ ಗ್ರಾಮ ವ್ಯಾಪ್ತಿಯಲ್ಲಿ ನಮ್ಮದೇ ಆದಂತಹ ತಂಡವನ್ನು ನಿರ್ಮಿಸಿ ನೀವೇ ಜಾಗೃತರಾಗಬೇಕು ಎಂದು ಮನವಿ ಮಾಡಿ ,ಕೊರೊನಾ ಲಸಿಕೆಯಲ್ಲಿ ಕೇವಲ 65% ಮಾತ್ರ ಲಸಿಕೆ ಸಾರ್ವಜನಿಕರಿಗೆ ದೊರೆತಿದ್ದು ಇನ್ನೂ ಬಹಳಷ್ಟು ಜನರು ಲಸಿಕೆ ಹಾಕಿಸಿಕೊಂಡಿಲ್ಲ ,ಹಿಂದಿನಿಂದಲೇ ಶೀಘ್ರವಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ಮೂರನೆ ಅಲೆಯನ್ನು ತಡೆಯುವಲ್ಲಿ ಜಾಗೃತರಾಗಿ ಎಂದು ಮನವಿ ಮಾಡಿದರು ,
ಮತ್ತೊಬ್ಬ ನ್ಯಾಯಾಧೀಶರಾದ ಶ್ರೀನಾಥ್ ರವರು ಮಾತನಾಡಿ ,ಸ್ವಸ್ಥ ಸಮಾಜದ ನಿರ್ವಹಣೆಗಾಗಿ ಬಾಲ್ಯವಿವಾಹವನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ,ಅಪ್ರಾಪ್ತ ಮಗಳು ಗರ್ಭಿಣಿ ಆದಾಗ ಆ ಮಗುವಿನ ದೈಹಿಕ ಶಕ್ತಿಯೂ ಕುಂದುತ್ತದೆ ,ಅಂಗವಿಕಲ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ,ಈ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ವಿವಾಹ ಬಾಲ್ಯವಿವಾಹ ಗಳಾಗಿದ್ದು ಆ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿರುವ ಮಾಹಿತಿ ಇರುತ್ತದೆ ,ಹಾಗಾಗಿ ಸಾರ್ವಜನಿಕರು ಅತಿ ಹೆಚ್ಚು ಜಾಗೃತರಾಗಿ ಬಾಲ್ಯವಿವಾಹವನ್ನು ಮಾಡಬೇಡಿ ಇದು ಕಾನೂನುಬದ್ಧ ವಾದಂತಹ ಅಪರಾಧ ಎಂದು ಅರಿವು ನೀಡಿದರು ,ವಕೀಲರ ಸಂಘದ ಅಧ್ಯಕ್ಷರಾದ ಡಿ ಆರ್ ಮಹೇಶ್ ರವರು ಮಾತನಾಡಿ ,ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿ ಅದನ್ನು ಬಿಟ್ಟು ,ಬಾಲ್ಯ ವಿವಾಹ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಈ ದಿನದ ಈ ತುರ್ತು ಕಾರ್ಯವನ್ನು ಸುಪ್ರಿಂ ಕೋರ್ಟ್ ಆದೇಶದಂತೆ ತುರ್ತಾಗಿ ನಾವೆಲ್ಲರೂ ಇಲ್ಲಿ ಸಭೆ ಸೇರಿ ನಿಮಗೆ ಅರಿವು ಮೂಡಿಸುತ್ತಿದ್ದೇವೆ ,ಈ ಕಾನೂನು ಮಾಹಿತಿಯ ಅರಿವು ಪಡೆದುಕೊಂಡು ಹಿಂದೆ ಎಲ್ಲರೂ ಜಾಗೃತರಾಗಿ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು ,ಹಿರಿಯ ವಕೀಲರಾದ ಚಂದ್ರಶೇಖರ್ ಅವರು ಮಾತನಾಡಿ ,ಕೊರೋನಾ ಎಂಬ ಮಹಾಮಾರಿ ನಮ್ಮನ್ನು ಮತ್ತೆ ಆವರಿಸಿದರೆ ,ನಾವು ಅತಿ ಹೆಚ್ಚು ಖರ್ಚು ವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ,ಸಾಧ್ಯವಿಲ್ಲದೆ ಸಾಯುವಂತಹ ಪರಿಸ್ಥಿತಿ ಬರಬೇಕಾಗುತ್ತದೆ ,ಹಾಗಾಗಿ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಂಡು ಮೂರನೇ ಅಲೆಯನ್ನು ತಪ್ಪಿಸುವಲ್ಲಿ ಕೈಜೋಡಿಸೋಣ ,ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು .
ಹಿರಿಯ ನ್ಯಾಯಾಧೀಶರಾದ ನಾರಾಯಣ ಗೌಡ ರವರು ಮಾತನಾಡಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ನಾನು ಕೊರೊನಾ ಲಸಿಕೆಯನ್ನು ಪೆಡದ ವ್ಯಕ್ತಿಯಾಗಿದ್ದೆ ,ಯಾವುದೇ ಅಡ್ಡ ಪರಿಣಾಮ ನನಗೆ ಈವರೆಗೂ ಆಗಿಲ್ಲ ,ಹಾಗಾಗಿ ಯಾರು ಭಯಪಡದೆ ಲಸಿಕೆಯನ್ನು ಪಡೆದುಕೊಂಡು ಜಾಗೃತರಾಗಿ ನಮ್ಮಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯೋಣ ,ಶಕ್ತಿಯುತ ರೋಗನಿರೋಧಕ ತರಕಾರಿಗಳನ್ನು ಸೇವಿಸಿ ಪೌಷ್ಟಿಕ ಆಹಾರವನ್ನು ಪಡೆದು ರೋಗನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ಹೆಚ್ಚಿಸಿಕೊಳ್ಳೋಣ ಎಂದು ಮನವಿ ಮಾಡಿದರು ,ಸರ್ಕಾರ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಇನ್ನೊಂದಿಷ್ಟು ತರಕಾರಿ ಹಣ್ಣುಗಳು ಮತ್ತು ಖನಿಜಯುಕ್ತ ಪ್ರೋಟಿನ್ ಯುಕ್ತ ಆಹಾರಗಳನ್ನು ನೀಡಿದರೆ ಸರ್ಕಾರ ಸಹಾಯವಾಗುತ್ತಿತ್ತು ಎಂದರು ,ಹಂಪಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ರವರು ಮಾತನಾಡಿ ,ನ್ಯಾಯಾಧೀಶರನ್ನು ನ್ಯಾಯಾಲಯದಲ್ಲಿ ಬಿಟ್ಟು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ,ಅಂತಹದರಲ್ಲಿ ನೀವು ನಮ್ಮ ಗ್ರಾಮಕ್ಕೆ ಬಂದು ಖುದ್ದು ನೀವೇ ಕಾನೂನು ಮಾಹಿತಿ ನೀಡುತ್ತಿರುವುದು ನಮಗೆಲ್ಲರಿಗೂ ಸಂತೋಷದಾಯಕ ,ಇಂತಹ ಅರಿವು ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ಹೆಚ್ಚು ನಿಮ್ಮಿಂದ ನಮಗೆ ದೊರೆಯಲಿ ಎಂದು ಆಶಿಸಿದರು ,
ಕಾರ್ಯಕ್ರಮದಲ್ಲಿ ವಕೀಲರಾದ ನಾಗೇಂದ್ರ ,ಪ್ರವೀಣ್ ಕುಮಾರ್ ,ಕರೀಗೌಡ ತಾರಾನಾಥ್ ,ವೈದ್ಯರಾದ ಡಾ ಪ್ರಕಾಶ್ ,ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷೆ ರಾಜಮ್ಮ ,ಶಂಕರೇಗೌಡ ,ಅಧ್ಯಕ್ಷೆ ಅಲುಮೇಲಮ್ಮ ,ರವಿ ,P.D.O. ಕೃಷ್ಣಮೂರ್ತಿ ಅಂಗನವಾಡಿ ಕಾರ್ಯಕರ್ತೆ ದೇವರಾಜಮ್ಮ ,ಹಾಗೂ ಗ್ರಾಮದ ಸಾರ್ವಜನಿಕರು ಮತ್ತು ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಹಾಜರಿದ್ದರು.