ದಸರಾ_ಉದ್ಘಾಟನೆಗೆ_100_ಜನರಿಗೆ_ಮಾತ್ರ_ಅವಕಾಶ

 

ಮೈಸೂರು: 5 ಅಕ್ಟೋಬರ್ 2021

     ನ@ದಿನಿ

                                      ದಸರಾ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 7 ರಿಂದ 15ವರೆಗೆ ದಸರಾ ನಡೆಯಲಿದ್ದು, ಈಗಾಗಲೇ ಭರದಿಂದ ಸಿದ್ದತೆಗಳು ನಡೆಯುತ್ತಿವೆ. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಹಾಗೆಯೆ ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಹ ಸಿದ್ಧತೆ ನಡೆಯುತ್ತಿದೆ. ಇನ್ನು ಕಳೆದ ಬಾರಿಯಂತೆಯೆ ಈ ಬಾರಿ ಸಹ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

                ಏನಿದೆ_ಮಾರ್ಗಸೂಚಿಯಲ್ಲಿ?

 • ಕೊರೊನಾ ಸೋಂಕು ಇರುವ ಕಾರಣ ಸರಳವಾಗಿ ಹಬ್ವನ್ನು ಆಚರಣೆ ಮಾಡಬೇಕು.
 • ಮೈಸೂರು ದಸರಾ ಬಿಟ್ಟು ರಾಜ್ಯದ ಯಾವುದೇ ಭಾಗದಲ್ಲಿ ಒಮ್ಮೆಲೆ 400 ಜನ ಸೇರುವಂತಿಲ್ಲ.
 • ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ
 • ಆಯಾ ಜಿಲ್ಲೆಯ ಜಿಲ್ಲಾಡಳಿತ ಯಾವುದೇ ನಿಯಮಗಳನ್ನು ವಿಧಿಸುವ ಮುನ್ನ ಅದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಿರಬೇಕು.
 • ಸಾಮಾಜಿಕ ಅಂತರವಿಲ್ಲದೆ ಯಾವುದೇ ಕಾರ್ಯಕ್ರಮ ನಡೆಯುತ್ತಿರುವುದನ್ನ ಕಂಡು ಬಂದಲ್ಲಿ ಅದನ್ನು ನಿಷೇಧಿಸಲಾಗುತ್ತದೆ.
 • ಸರ್ಕಾರ ಹೊರಡಿಸಿರುವ ಕೊರೊನಾ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು.
 • ಯಾವುದೇ ರೀತಿಯ ಕಾನೂನು ಭಂಗ ಮಾಡದೇ ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು.

   ಮೈಸೂರಿನ_ಪ್ರತ್ಯೇಕ_ಮಾರ್ಗಸೂಚಿಯಲ್ಲಿ_ಏನಿದೆ?

 • ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗು ಸ್ಯಾನಿಟೈಸರ್ ಕಡ್ಡಾಯ.
 • ಈ ಸಮಾರಂಭಗಳಿಗೆ ಕೊರೊನಾ ಸೋಂಕು ಹರಡುವ ಭಯದಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡದ ಕಾರಣ ಈ ಭಾರಿ ಸಹ ಕಳೆದ ಬಾರಿಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಭ್ರಮ ನೋಡಲು ಅನುವು ಮಾಡಬೇಕು.‘
 • ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಠಾಟನೆಗೆ ಕೇವಲ 100 ಜನರಿಗೆ ಮಾತ್ರ ಅವಕಾಶ
 • ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇವಲ 2 ಗಂಟೆ ಅವಕಾಶ
 • ಈ ಕಾರ್ಯಕ್ರಮಗಳಿಗೆ 500 ಜನರಿಗಿಂತ ಹೆಚ್ಚಿನ ಜನರು ಸೇರಬಾರದು.
 • ದೀಪಾಲಂಕಾರ ನೋಡಲು ಸಂಜೆ ಸಂಜೆ 7 ರಿಂದ 9 ರವರೆಗೆ ಮಾತ್ರ ಅವಕಾಶ
 • ಜಂಬೂಸವಾರಿಯಂದೂ ಸಹ ಕೇವಲ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
 • ಪ್ರತಿಯೊಂದು ಸಂದರ್ಭದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ.
 • ಪೊಲೀಸ್ , ಕಲಾವಿದರು ಮತ್ತು ವಾದ್ಯ ವೃಂದವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ

ನಾಡಹಬ್ಬ ದಸರಾವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ, ಕಳೆದ ವರ್ಷವೂ ಸಹ ಕೋವಿಡ್ ವ್ಯಾಪಕವಾಗಿ ಹಬ್ಬಿದ್ದ ಕಾರಣ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಅದರ ಹಿಂದಿನ ವರ್ಷವೂ ಸಹ ರಾಜ್ಯದಲ್ಲಿ ನೆರೆ ಹಾವಳಿ ಹೆಚ್ಚಾಗಿದ್ದರಿಂದ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಕೋವಿಡ್ ಹಾವಳಿ ರಾಜ್ಯದಲ್ಲಿ ಇನ್ನು ಇರುವುದರಿಂದ ಹಾಗೂ ಆಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಈ ಬಾರಿಯೂ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

               ಹೇಗಿರಲಿದೆ_ಸರಳ_ದಸರಾ?

               ದಸರಾ ಆಚರಣೆ ಸಂಬಂಧ ಮೈಸೂರು ಮಹಾರಾಜರ ಕುಟುಂಬದವರ ಜೊತೆ ಮೈಸೂರು ಜಿಲ್ಲಾಡಳಿತ ಹಾಗೂ ದಸರಾ ಆಚರಣೆ ಸಮಿತಿ ಚರ್ಚೆ ನಡೆಸುತ್ತದೆ. ಮೈಸೂರು ಅರಮನೆಯಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಅರಮನೆ ಆವರಣ ಮತ್ತು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಾಂಸ್ಕೃತಿಕ, ಕಲೆ, ಸಂಗೀತ, ಕ್ರೀಡಾ ಚಟುವಟಿಕೆ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತು, ಸಿನಿಮೋತ್ಸವ, ರಂಗೋತ್ಸವ, ದೀಪೋತ್ಸವಗಳ ಆಚರಣೆಗಳಿಗೆ ಅವಕಾಶ ಇರುವುದು ಬಹುತೇಕ ಅನುಮಾನವಾಗಿದೆ. ಕಳೆದ ಬಾರಿಯಂತೆ ಖಾಸಗಿ ದರ್ಬಾರ್ ವೇಳೆ ರಾಜವಂಶಸ್ಥರು ಸೇರಿ ಕೆಲವೇ ಕೆಲವು ಮಂದಿಗೆ ಆಹ್ವಾನ ಇರುತ್ತದೆ.

Leave a Reply

Your email address will not be published. Required fields are marked *