ನಂದಿನಿ ಮನುಪ್ರಸಾದ್ ನಾಯಕ್
**ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ*

-
- ಜನನ: ಇವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಜನಿಸಿದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಾಂತೇಶ.
- ಶಿಕ್ಷಣ: ಇವರು ಕಲಾ ವಿಭಾಗದಲ್ಲಿ ಪದವಿ (BA) ಶಿಕ್ಷಣ ಮುಗಿಸಿದ್ದಾರೆ.
- ಪೀಠಾರೋಹಣ: 2002 ರಲ್ಲಿ ಕೊಪ್ಪಳದ ಐತಿಹಾಸಿಕ ಶ್ರೀ ಗವಿಮಠದ 18ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಮಠದ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
-
- ಅಕ್ಷರ ದಾಸೋಹ: ಮಠದ ವತಿಯಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಶಾಲಾ-ಕಾಲೇಜುಗಳನ್ನು ನಡೆಸಲಾಗುತ್ತಿದೆ.
- ಬೃಹತ್ ವಸತಿ ನಿಲಯ: ಇತ್ತೀಚೆಗಷ್ಟೇ ಶ್ರೀಗಳ ಸಂಕಲ್ಪದಂತೆ ಬಡ ವಿದ್ಯಾರ್ಥಿಗಳಿಗಾಗಿ ಸುಮಾರು 5,000 ವಿದ್ಯಾರ್ಥಿಗಳು ಉಚಿತವಾಗಿ ಉಳಿದುಕೊಳ್ಳಬಹುದಾದ ಏಷ್ಯಾದಲ್ಲೇ ಅತಿ ದೊಡ್ಡದಾದ ಸುಸಜ್ಜಿತ ವಸತಿ ನಿಲಯವನ್ನು ನಿರ್ಮಿಸಲಾಗಿದೆ.
-
- ಹಿರೇಹಳ್ಳ ಪುನಶ್ಚೇತನ: ಹೂಳು ತುಂಬಿ ಒಣಗಿಹೋಗಿದ್ದ ಹಿರೇಹಳ್ಳವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕ ಹೂಳು ಎತ್ತಿಸಿ, ಮರುಜೀವ ನೀಡಿದರು. ಇದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಯಿತು.
- ವೃಕ್ಷ ದಾಸೋಹ: ಗವಿಮಠದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಕ್ಷಾಂತರ ಸಸಿಗಳನ್ನು ವಿತರಿಸಿ, ಅವುಗಳನ್ನು ನೆಟ್ಟು ಬೆಳೆಸುವಂತೆ ಪ್ರೇರೇಪಿಸಿದರು.
- ಕೆರೆಗಳ ಹೂಳೆತ್ತುವಿಕೆ: ಜಿಲ್ಲೆಯ ಹಲವಾರು ಐತಿಹಾಸಿಕ ಕೆರೆಗಳ ಹೂಳನ್ನು ರೈತರ ಸಹಾಯದಿಂದಲೇ ತೆಗೆಸಿ, ನೀರು ಸಂಗ್ರಹಣೆಗೆ ಅನುವು ಮಾಡಿಕೊಟ್ಟಿದ್ದಾರೆ.
*ಉಭಯ ಸದನಗಳ ಎಲ್ಲಾ ಸದಸ್ಯರನ್ನು ಆಹ್ವಾನಿಸಿದ ಸಿಎಂ*
“ಈ ಬಾರಿಯ ನಾಡ ಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ವಿಧಾನಸಭೆಯಲ್ಲಿ ಗುರುವಾರ ನಡೆದ ಬರಗಾಲದ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು. ಸದನದ ಎಲ್ಲಾ ಸದಸ್ಯರನ್ನು ದಸರಾ ಉತ್ಸವಕ್ಕೆ ಆಹ್ವಾನಿಸಿದರು.
“ಈ ಬಾರಿ ಕೊಪ್ಪಳದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ಪತ್ರ ಕಳುಹಿಸಿದ್ದೇನೆ. ಇಂದು ಬೆಳಗ್ಗೆ ಅವರ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ. ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದರು.
“ಮುಂದಿನ ತಿಂಗಳು ನಾಡಹಬ್ಬ ದಸರಾ ಬರುತ್ತಿದೆ. ಈ ವರ್ಷದ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬರಬೇಕು” ಎಂದರು.
ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸಮಾಜದಲ್ಲಿ ಮೂಡಿಸಿರುವ ಜಲ ಸಂರಕ್ಷಣೆ ಜಾಗೃತಿ, ಶೈಕ್ಷಣಿಕ ಕ್ರಾಂತಿ ಹಾಗೂ ತಮ್ಮ ಜನಪರ, ಸಮಾಜಮುಖಿ ಕಾಯಕಗಳ ಮೂಲಕ ಕೋಟ್ಯಂತರ ಭಕ್ತರ ಮನಗೆದ್ದಿದ್ದಾರೆ. ಇವರ ಈ ನಿರಂತರ ಸಾಮಾಜಿಕ ಕಳಕಳಿಯನ್ನು ಗೌರವಿಸಿ ಸರ್ಕಾರ ಈ ಮಹೋನ್ನತ ಜವಾಬ್ದಾರಿಯನ್ನು ನೀಡಿದೆ.