ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಸೋಲಿನ ಭೀತಿ ಅವರನ್ನು ಆವರಿಸಿಕೊಂಡಿದೆ:ಸಿಟಿ ರವಿ

ನಂದಿನಿ ಮೈಸೂರು

*ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲಿ ಬೇರೆಯವರು ಸಿಎಂ ಆಗುವುದು ಇಷ್ಟವಿಲ್ಲ, ಹಾಗಾಗಿಯೇ ಕಾಂಗ್ರೆಸ್ ಮುಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ.

*ವರುಣಾದಲ್ಲಿ ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

*ಯಾರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಹಿಂತೆಗೆದುಕೊಳ್ಳುತ್ತೇವೆ ಎಂಬುದನ್ನು ಕಾಂಗ್ರೆಸ್‌ನವರು ಬಹಿರಂಗವಾಗಿ ಹೇಳಲಿ.

*ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೋ ಇಲ್ಲವೇ ಎಂಬುದನ್ನು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಲಿ.

*ನಾನು ರಾಜಕಾರಣಿ, ರಾಜ್ಯದ ಜನರು ಅಪೇಕ್ಷ ಪಟ್ಟರೆ ನಾನೂ ಕೂಡ ಸಿಎಂ ಆಗಬಹುದು

ಮೈಸೂರು; ಸ್ಪರ್ಧಿಸುವುದಕ್ಕೆ ಸೂಕ್ತವಾದ ಕ್ಷೇತ್ರದ ಸಿಗದೆ ಕೊನೆಗೆ ವರುಣಾ ಕ್ಷೇತ್ರಕ್ಕೆ ಮತ್ತೆ ಆಗಮಿಸಿ ಸ್ಪರ್ಧಿಸಿರುವ ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಸೋಲಿನ ಭೀತಿ ಅವರನ್ನು ಆವರಿಸಿಕೊಂಡಿದೆ ಎಂದು ಬಿಜೆಪಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸೋಮವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ವರುಣಾದಲ್ಲಿ ಅಹಿಂದ ಕಾರ್ಡ್ ನಡೆಯುತ್ತಿಲ್ಲ, ಲಿಂಗಾಯಿತರು, ದಲಿತರು ಎಲ್ಲಾ ವರ್ಗದ ಜನರು ಇದೀಗ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರಿಗೆ ಚಕ್ರವ್ಯೂಹದಲ್ಲಿ ಸಿಲುಕಿದ್ದು, ಸೋಲಿನ ಭೀತಿ ಆವರಿಸಿಕೊಂಡಿದೆ. ಅವರನ್ನು ಕಾಪಾಡುವುದಕ್ಕೆ ಅವರೊಂದಿಗೆ ಅರ್ಜುನನೂ ಇಲ್ಲ. ಕೃಷ್ಣ ಇರುವುದು ಬಿಜೆಪಿಯಲ್ಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಶಕ್ತಿ, ಸಾಮಾರ್ಥ್ಯವನ್ನೆಲ್ಲಾ ಸಿದ್ದರಾಮಯ್ಯರನ್ನು ವರುಣಾದಲ್ಲಿ ಸೋಲಿಸಲು ವಿನಿಯೋಗಿಸುತ್ತಿದ್ದಾರೆ. ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಸಿದ್ದರಾಮಯ್ಯನವರನ್ನು ನಿರ್ಲಕ್ಷಿಸಿದ್ದಾರೆ. ಡಾ.ಜಿ.ಪರಮೇಶ್ವರ್‌ನ್ನು ಸೋಲಿಸಿದ ಶಾಪ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಹಾಗಾಗಿ ಸಿದ್ದರಾಮಯ್ಯನವರಿಗೆ ಹತಾಶೆಯ ಭಾವ ಕಾಡುತ್ತಿದೆ. ನನಗೆ ಸಿಗದ ಮುಖ್ಯಮಂತ್ರಿ ಪಟ್ಟ ಕಾಂಗ್ರೆಸ್‌ನಲ್ಲಿ ಬೇರೆಯಾರಿಗೂ ಸಿಗಬಾರದೆಂಬ ಮನಸ್ಥಿತಿಯಲ್ಲಿದ್ದಾರೆ. ಹಾಗಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬರಬಾರದು ಎಂದು ಲಿಂಗಾಯಿತ ಸಮುದಾಯದ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ.

ಲಿಂಗಾಯಿತ ಸಮುದಾಯದವರು ಭ್ರಷ್ಟರು ಎಂದು ಹೇಳಿಕೆ ನೀಡುವ ಮೂಲಕ ಲಿಂಗಾಯಿತ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ. ಬಸವ ತತ್ವಕ್ಕೆ ಅಪಪ್ರಚಾರ ಮಾಡಿದ್ದಾರೆ. ಅದಕ್ಕೆ ತಕ್ಕ ಬೆಲೆಯನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ತೆತ್ತಲಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬರಬಾರದೆಂಬ ಸಿದ್ದರಾಮಯ್ಯನವರ ಆಸೆ ಖಂಡಿತವಾಗಿಯೂ ಈಡೇರುತ್ತದೆ ಎಂದರು. ಸಿದ್ದರಾಮಯ್ಯನವರಿಗೆ 45 ವರ್ಷಗಳ ರಾಜಕೀಯದ ಅನುಭವವಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆAಬ ಆಸೆಯಿದೆ. ಅದನ್ನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೋಲಾರದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿದ್ದಾಗಲೇ ಅವರಿಗೆ ತನಗೆ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದು ಗೊತ್ತಾಗಿ ಹೋಗಿದೆ. ಹಾಗಾಗಿಯೇ ನನಗೆ ಸಿಗದ ಸ್ಥಾನ ಕಾಂಗ್ರೆಸ್‌ನಲ್ಲಿ ಬೇರೆಯಾರಿಗೂ ಸಿಗಬಾರದೆಂಬ ಉದ್ದೇಶದಿಂದ ಕಾಂಗ್ರೆಸ್‌ನ್ನೇ ಮುಗಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‌ಗೆ ಹಾಗೂ ಸಿದ್ದರಾಮಯ್ಯನವರಿಗೆ ಕೇವಲ ಘೋಷಣೆ ಮಾತ್ರವಾಗಿ ಉಳಿದಿದೆ. ಯಾವುದೇ ಬದ್ಧತೆಯಿಲ್ಲ. ಹಾಗಾಗಿಯೇ ಅವರು ಒಳ ಮೀಸಲಾತಿಯನ್ನು ಜಾರಿಗೆ ತರುವುದು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಯಾವುದೇ ಕೆಲಸವನ್ನು ಮಾಡಲಿಲ್ಲ. ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು, ದಲಿತರಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಕುಳಿತು ತಮ್ಮ ಬಳಿಗೆ ತಂದ ಕಡತವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಬೀಸಾಕಿದ್ದರು. ದಲಿತರಲ್ಲಿ ಎಡಗೈ, ಬಲಗೈ ಎಂದು ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದರು. ಆದರೆ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೇನು ಗೂಡಿಗೆ ಕೈಹಾಕಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಮಾತ್ರವಲ್ಲ ಒಕ್ಕಲಿಗರು, ವೀರಶೈವ ಲಿಂಗಯಿತರಿಗೂ ಕೂಡ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದಾರೆ. ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ನಮ್ಮ ಪಕ್ಷ ಕೇವಲ ಹೇಳಿಕೆಗೆ, ಘೋಷಣೆಗೆ ಮಾತ್ರ ಸೀಮಿತವಾಗಿಲ್ಲ, ನಾವು ಏನನ್ನು ಹೇಳುತ್ತೇವೆಯೋ, ಅದನ್ನು ಮಾಡುತ್ತೇವೆ, ಏನನ್ನು ಮಾಡುತ್ತೇವೆಯೋ, ಅದನ್ನು ಹೇಳುತ್ತೇವೆ ಎಂದರು.

ಬದ್ಧತೆಯಿಲ್ಲ ಕಾಂಗ್ರೆಸ್‌ನವರು ಮಾತ್ರ ಒಳ ಮೀಸಲಾತಿ ಜಾರಿಯಾಗಲ್ಲ, ಬಡ್ತಿ ಮೀಸಲಾತಿಯನ್ನು ಕೊಡಲ್ಲ, ತಳವಾರ-ಪರಿವಾರಕ್ಕೆ ಮೀಸಲಾತಿಯನ್ನು ನೀಡಲ್ಲ ಎಂದು ಹೇಳುತ್ತಿದ್ದರು. ಆದರೆ ನಮ್ಮ ಬಿಜೆಪಿ ಸರ್ಕಾರ ಎಲ್ಲವನ್ನೂ ಕೊಟ್ಟುಕೊಂಡು ಬಂದಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಯಾರ ಮೀಸಲಾತಿ ವಾಪಾಸ್ ಪಡೆಯುತ್ತಿರೀ ಸ್ಪಷ್ಟಪಡಿಸಿ; ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ, ಒಕ್ಕಲಿಗ, ವೀರಶೈವಲಿಂಗಾಯಿತರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಹೆಚ್ಚಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳವನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ವರ್ಗದವರ ಮೀಸಲಾತಿ ಹೆಚ್ಚಳವನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ತಾಕತ್ ಇದ್ದರೆ ಚುನಾವಣೆಗೂ ಮುನ್ನಾ ಈ ಬಗ್ಗೆ ಸ್ಪಷ್ಟಪಡಿಸಲಿ, ಯಾರ ಮೀಸಲಾತಿಯನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.
ಹಿಂದುತ್ವದ ಭದ್ರವಾದ ಡ್ಯಾಂನಲ್ಲಿ ಕಾಂಗ್ರೆಸ್ ಮುಳುಗಿ ಹೋಗಲಿದೆ;
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಲಿಂಗಾಯಿತ ಡ್ಯಾಂ, ಕಟ್ಟೆ ಒಡೆದಿದೆ. ಹಾಗಾಗಿ ಬಿಜೆಪಿ ಮುಳುಗಲಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ನಮ್ಮ ದೇಶವನ್ನ ಒಡೆದು, ಪಾಕಿಸ್ತಾನ, ಬೂತಾನ್, ನೇಪಾಳವನ್ನ ರಾಷ್ಟçಗಳನ್ನಾಗಿ ಮಾಡಿದ್ದಾರೆ. ದಲಿತರನ್ನು ಬಲಗೈ, ಎಡಗೈ ಎಂದು ಒಡೆದು ಆಳುತ್ತಿದ್ದಾರೆ. ಜಾತಿ, ಜಾತಿ, ಸಮುದಾಯಗಳನ್ನ ಎತ್ತಿ ಕಟ್ಟಿ ಒಡೆದು ಆಳಿದ್ದಾರೆ. ವೀರಶೈವ ಲಿಂಗಾಯಿತರನ್ನು ಒಡೆದು, ಅದರ ಫಲವನ್ನೂ ಅನುಭವಿಸಿದ್ದಾರೆ. ಸಮಾಜಗಳನ್ನು, ದೇಶವನ್ನು ಒಡೆಯುವುದನ್ನೇ ತಮ್ಮ ರಾಜಕೀಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರ ಒಡೆದಾಳುವ ತಂತ್ರಗಾರಿಕೆ ಗೊತ್ತಾಗಿಯೇ ನಾವು ಎಸ್ಸಿ, ಎಸ್ಟಿಗೆ, ವೀರಶೈವ ಲಿಂಗಾಯಿತರು, ಒಕ್ಕಲಿಗರಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದೇವೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣ, 600 ಕೋಟಿ ರೂ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿದ್ದೇವೆ, ಕನಕದಾರ, ವಾಲ್ಮೀಕಿಯವರನ್ನೂ ಜೋಡಿಸಿದ್ದೇವೆ. ಆ ಮೂಲಕ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿದ್ದೇವೆ. ರೈತರಿಗೆ ಬಡ್ಡಿರಹಿತವಾಗಿ 5 ಲಕ್ಷರೂ ತನಕ ಸಾಲ, ಹಾಲು ಉತ್ಪಾಧಕರಿಗೆ 5 ರೂ ಪ್ರೋತ್ಸಾಹ ಧನ ನೀಡಿದ್ದೇವೆ. ಹಿಂದೂತ್ವದ ಡ್ಯಾಂ ಎತ್ತರವನ್ನು ಹೆಚ್ಚಿಸಿ, ಗಟ್ಟಿ ಮಾಡಿ, ಭದ್ರಪಡಿಸಿದ್ದೇವೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಡ್ಯಾಂ ಒಡೆಯಲು ಆಗದೆ, ಅದರಲ್ಲಿ ಮುಳುಗಿ ಹೋಗುವುದು ನಿಶ್ಚಿತ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು; ನನ್ನ ಚಿಕ್ಕಮಗಳೂರು ಕ್ಷೇತ್ರದ ಸೇರಿದಂತೆ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಕೇಳಿ ಪ್ರಚಾರ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೇ ಇಲ್ಲವೇ ಎಂಬುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಮೈತ್ರಿ ಮಾಡಿಕೊಂಡಿಲ್ಲ ಎಂದಾದರೆ ರಾಜಕೀಯ ವ್ಯಭಿಚಾರ ನಡೆಸುತ್ತಿರುವ ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಸ್ಲಿಮರು ಬಿಜೆಪಿಯಲ್ಲಿ ವೋಟ್ ಡೆಪಾಸಿಟ್ ಮಾಡಲಿ;
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಧರ್ಮ, ಜಾತಿ, ಸಮುದಾಯದವರನ್ನೂ ಒಳಗೊಂಡೇ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುತ್ತಿದ್ದಾರೆ. ಯೋಜನೆಯಿಂದ ಯಾರನ್ನೂ ಹೊರತುಪಡಿಸಿಲ್ಲ, ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳ ಫಲ ಬೇಕು, ಆದರೆ ಮೋದಿ ನೇತೃತ್ವದ ಸರ್ಕಾರಕ್ಕೆ ವೋಟ್ ಬೇಡಾ ಎಂದರೆ ಹೇಗೆ. ಕಾಂಗ್ರೆಸ್‌ನಲ್ಲಿ ನಿಮ್ಮ ವೋಟ್ ಡೆಪಾಸಿಟ್ ಇಟ್ಟು, ಬಿಜೆಪಿ ಸರ್ಕಾರದಲ್ಲಿ ಚೆಕ್ ಕೇಳಿದರೆ ಹೇಗೆ. ಮೊದಲು ನಮ್ಮಲ್ಲಿ ವೋಟ್‌ನ್ನು ಡೆಪಾಸಿಟ್ ಮಾಡಿ, ಆ ಮೇಲೆ ಚೆಕ್ ಪಡೆದುಕೊಂಡು ಡ್ರಾ ಮಾಡಿಕೊಳ್ಳಿ. ಕಾಂಗ್ರೆಸ್‌ನವರು ನಿಮ್ಮ ವೋಟ್‌ನ್ನು ತಮ್ಮ ಬ್ಯಾಂಕ್‌ನಲ್ಲಿಟ್ಟುಕೊAಡಿದ್ದಾರೆ. ಆದರೆ ಅವರಿಂದ ನಿಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಈಗ ನಿಮಗೆ ಮನವರಿಕೆಯಾಗಿದೆ. ಹಾಗಾಗಿ ನಮ್ಮ ಪಕ್ಷದಲ್ಲಿ ಬಂದು ಡೆಪಾಸಿಟ್ ಮಾಡಿ ಎಂದರು.

ಜನ ಅಪೇಕ್ಷೆಪಟ್ಟರೆ ನಾನೂ ಸಿಎಂ ಆಗಬಹುದು;
ನಾನು ಕೂಡ ರಾಜಕಾರಣಿ, ನನ್ನ ಕ್ಷೇತ್ರದ ಜನರು ನನ್ನನ್ನು ಮುಖ್ಯಮಂತ್ರಿಯಾಗಬೇಕೆAದು ಹೇಳುತ್ತಿದ್ದಾರೆ. ಇದನ್ನು ಇಡೀ ರಾಜ್ಯದ ಜನರು ಹೇಳಿದರೆ, ಅಪೇಕ್ಷೆ ಪಟ್ಟರೆ ಖಂಡಿತವಾಗಿ ನಾನು ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇAದ್ರ, ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ಪ್ರಧಾನ ಕಾರ್ಯದರ್ಶಿ ದೇವನೂರು ಜಿ.ಪ್ರತಾಪ್, ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರ ಸಂಯೋಜಕ ನಾಗೇಶ್, ಸಹ ವಕ್ತಾರ ಕೇಬಲ್ ಮಹೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಸಹ ಸಂಚಾಲಕ ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶೈಲೇಂದ್ರ ಬಿಜೆಪಿಗೆ ಸೇರ್ಪಡೆ ; ಮೈಸೂರು ನಗರಪಾಲಿಕೆಯ ಮಾಜಿ ಉಪಮೇಯರ್ ಶೈಲೇಂದ್ರ ಅವರು ತಮ್ಮ ಬೆಂಬಲಿಗರೊAದಿಗೆ ಜೆಡಿಎಸ್‌ನ್ನು ತೊರೆದು ಬಿಜೆಪಿಗೆ ಮಾಧ್ಯಮ ಕೇಂದ್ರದಲ್ಲಿ ಸೇರ್ಪಡೆಯಾದರು. ಪಕ್ಷದ ಧ್ವಜವನ್ನು ಅವರಿಗೆ ನೀಡಿ, ಶಲ್ಯವನ್ನು ಹಾಕುವ ಮೂಲಕ ಬಿಜೆಪಿ ರಾಷ್ಡಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಕ್ಷಕ್ಕೆ ಬರಮಾಡಿಕೊಂಡರು.

 

Leave a Reply

Your email address will not be published. Required fields are marked *