ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತಿರುವ ಅಮಿತ್ ಶಾ

ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತಿರುವ ಅಮಿತ್ ಶಾ

ಇಂದು ಗೃಹಮಂತ್ರಿ ಅಮಿತ್ ಶಾರವರ ಸಮ್ಮುಖದಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ಮುಖ್ಯಮಂತ್ರಿಗಳು ಅಂತರರಾಜ್ಯ ಗಡಿ ಸಂಘರ್ಷ ವಿರಾಮಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಅಡಿಯಲ್ಲಿ 123 ಹಳ್ಳಿಗಳ ಕುರಿತಾದ ಹಳೆಯ ಗಡಿ ವಿವಾದಕ್ಕೆ ಅಂತಿಮ ತೆರೆ ಎಳೆಯಲಾಯಿತು. “ಈ ಐತಿಹಾಸಿಕ ಒಪ್ಪಂದ ಬಹು ದೊಡ್ಡ ಸಾಧನೆ. ಈಶಾನ್ಯ ರಾಜ್ಯಗಳನ್ನು ಶಾಂತಿಯುತ, ಅಭಿವೃದ್ದಿಯುತ ಮತ್ತು ಸಂಘರ್ಷ ರಹಿತ ರಾಜ್ಯಗಳನ್ನಾಗಿ ಮಾಡಬೇಕೆಂದು ನಮ್ಮ ಪ್ರಮುಖ ಗುರಿ” ಎಂದು ಅಮಿತ್ ಶಾ ಉಚ್ಚರಿಸಿದರು.

ಸುಮಾರು 800 ಕಿ.ಮೀ ಉದ್ದದ ವಿಸ್ತಾರ ಹೊಂದಿರುವ ಅಸ್ಸಾಂ-ಅರುಣಾಚಲ ಪ್ರದೇಶದ ಅಂತರರಾಜ್ಯ ಗಡಿ ಒಪ್ಪಂದವು ಎರಡು ನೆರೆಯ ರಾಜ್ಯಗಳ ನಡುವೆ ದೀರ್ಘಾವಧಿಯ ಒಪ್ಪಂದವನ್ನು ಖಚಿತಪಡಿಸುವುದಲ್ಲದೇ, ಕೆಲವು ವರ್ಷಗಳಿಂದ ಕಳೆದುಹೋಗಿದ್ದ ವೈಭವವನ್ನು ಮರಳಿ ಪಡೆಯಲು, ಮತ್ತು ಇಡೀ ಈಶಾನ್ಯ ಪ್ರದೇಶದ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾರವರ ಕನಸಿನ ಕೂಸಾದ ಈ ಒಪ್ಪಂದವು, ಯಾವುದೇ ಪ್ರದೇಶ ಅಥವಾ ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉಭಯ ರಾಜ್ಯಗಳ ನಡುವೆ ಯಾವುದೇ ಭವಿಷ್ಯದಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸುವ ಅವಕಾಶವನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಎಂಟನೇ ಒಪ್ಪಂದವಾಗಿದ್ದು, ಆರ್ಥಿಕ ಅಭಿವೃದ್ಧಿಗೆ ಅಗಾಧವಾದ ಸಾಮರ್ಥ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿದೆ.

ತಮ್ಮ ಕಠಿಣ ನಿಲುವುಗಳಿಂದ ಆಧುನಿಕ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಅಮಿತ್ ಶಾರವರು ಗೃಹ ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ಈಶಾನ್ಯ ರಾಜ್ಯಗಳ ಗಡಿ ಸಂಘರ್ಷಕ್ಕೆ ನಿಗದಿತ ಸಮಯದ ಪರಿಮಿತಿ ಅಳವಡಿಸಿದರು. ರಾಜ್ಯದಲ್ಲಿ ಶಾಂತಿಯಲ್ಲಿದೇ ಯಾವುದೇ ಅಭಿವೃದ್ಧಿಯಾಗದು ಎಂದು ನಂಬುವ ಶಾರವರು ‘ಕೈಯಲ್ಲಿ ಆಯುಧಗಳನ್ನು ಹಿಡಿದು ನಿಮಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮನೆ ಮುಂತಾದ ಸೌಲಭ್ಯಗಳು ಬೇಕೆಂದರೆ ಅಸಾಧ್ಯ. ಅಸಹಕಾರತೆಯಿಂದ ಅಭಿವೃದ್ಧಿಯಾಗದು ಎಂಬುದು ಶಾರವರ ಅಭಿಪ್ರಾಯ.

ಈ ಸಂದರ್ಭದಲ್ಲಿ ಮಾತನಾಡಿದ ಶಾ, ಹಿಂದಿನ ಸರ್ಕಾರಗಳ ನಿಷ್ಕ್ರಿಯ ಕುರಿತು ಟೀಕಿಸುತ್ತಾ, ಅವರು ಈ ರೀತಿ ನಿರುತ್ಸಾಹ ತೋರಿಸದಿದ್ದರೆ ಇಂತಹ ವಿವಾದಗಳು ಯಾವಾಗಲೋ ಅಂತ್ಯಗೊಳ್ಳುತ್ತಿದ್ದವು. ಆದಾಗ್ಯೂ, ಅಸ್ಸಾಂ-ಅರುಣಾಚಲ ಒಪ್ಪಂದವು ಖಂಡಿತವಾಗಿಯೂ ಈ ಇಡೀ ಪ್ರದೇಶದ ಭವಿಷ್ಯದ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಶಾ ಹೇಳಿದರು.

ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಕೇಂದ್ರವಾಗಿ, ಅಷ್ಟಲಕ್ಷ್ಮಿ (ಎಂಟು ರಾಜ್ಯಗಳು) ಎಂದೇ ಕರೆಯಲ್ಪಡುವ ಈಶಾನ್ಯ ಪ್ರದೇಶವು ಆಂದೋಲನ, ಜನಾಂಗೀಯ ಸಂಘರ್ಷ, ಅಶಾಂತಿ, ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದಗಳಿಂದ ಸಂಕಷ್ಟಕ್ಕೆ ಸಿಲುಕಿತ್ತು. 2014 ರಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ, ತನ್ನ “ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಶಾಶ್ವತ ವಾತಾವರಣವನ್ನು ತರುವ ಕಾರ್ಯವನ್ನು ಭಾಜಪ ಸರ್ಕಾರ ಮಾಡಿತು.

ಅಮಿತ್ ಶಾ ಅವರ ನೇತೃತ್ವದಲ್ಲಿ, ಗೃಹ ಸಚಿವಾಲಯವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಶ್ರದ್ಧೆಯಿಂದ ಕೆಲಸ ಮಾಡಿದೆ, ಮತ್ತು “ಪೂರ್ಣ ಸರ್ಕಾರದ” ವಿಧಾನದೊಂದಿಗೆ ಪ್ರದೇಶದ ಘನತೆ, ಸಂಸ್ಕೃತಿ, ಭಾಷೆ, ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ವ ನೀಡಿದೆ. ಬಹಳ ಸಮಯದಿಂದ ದೆಹಲಿಯ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಗೆ ಬಲಿಯಾದ ಈಶಾನ್ಯವು ಈಗ ಹಿಂಸಾಚಾರ ಮತ್ತು ಉಗ್ರಗಾಮಿತ್ವವನ್ನು ದೂರವಿಟ್ಟು ಅಭಿವೃದ್ಧಿಯ ಮುಖ್ಯವಾಹಿನಿಗೆ ಮರಳಲು ಪ್ರಾರಂಭಿಸಿದೆ.

ಪ್ರಸ್ತುತ ಸರ್ಕಾರವು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಜೆಟ್ ಬೆಂಬಲವನ್ನು ದೊಡ್ಡ ರೀತಿಯಲ್ಲಿ ಹೆಚ್ಚಿಸುವುದರ ಜೊತೆಗೆ ಈಶಾನ್ಯ ಕೇಂದ್ರಿತ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಹೊರತಾಗಿ, ಸರ್ಕಾರವು ಇತ್ತೀಚೆಗೆ ಈ ಪ್ರದೇಶಕ್ಕಾಗಿ ರೂ 4,800 ಕೋಟಿ ವೆಚ್ಚದಲ್ಲಿ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ) ಅನ್ನು ಪ್ರಾರಂಭಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ 2.66 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ‘ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ’ (ಆoಓಇಖ) ಬಜೆಟ್ ಅನ್ನು ಕೂಡ ಸಹ ಗಣನೀಯವಾಗಿ ಹೆಚ್ಚಿಸಲಾಗಿದೆ.

2014 ಕ್ಕೆ ಹೋಲಿಸಿದರೆ, 2022 ರಲ್ಲಿ ಹಿಂಸಾಚಾರದ ಘಟನೆಗಳು 67% ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಭದ್ರತಾ ಪಡೆಗಳಲ್ಲಿನ ಸಾವುನೋವುಗಳು 60% ರಷ್ಟು ಕಡಿಮೆಯಾಗಿದೆ, ನಾಗರಿಕರ ಸಾವುಗಳು 85% ರಷ್ಟು ಕಡಿಮೆಯಾಗಿದೆ ಮತ್ತು 8,000 ಉಗ್ರಗಾಮಿಗಳು ಮುಖ್ಯವಾಹಿನಿಗೆ ಬಂದು ಶರಣಾಗಿದ್ದಾರೆ. ಅಂತೆಯೇ, ಈಶಾನ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಂಈSPಂ) ಪರಿಧಿಯನ್ನು ಕಡಿಮೆ ಮಾಡಲಾಗಿದೆ ಮತ್ತು ತೊಂದರೆಗೊಳಗಾದ ಪ್ರದೇಶಗಳು ಈಗ ಮಹತ್ವಾಕಾಂಕ್ಷೆಯ ವಲಯಗಳಾಗಿ ಬದಲಾಗುತ್ತಿವೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ‘ಪೂರ್ವೋದಯ’ ಕನಸನ್ನು ಬಿತ್ತಿದ ಮೋದಿಯವರು ಈ ರಾಜ್ಯಗಳಿಗೆ ಅಷ್ಟಲಕ್ಷ್ಮಿ ಎಂದೇ ಕರೆದಿದ್ದಾರೆ. ಪೂರ್ಣ ಸರ್ಕಾರದ ನೀತಿಯೊಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತ ನೃತ್ಯಗಳಿಗೆ ಪೋಷಣೆ ನೀಡುತ್ತಾ, ಈ ರಾಜ್ಯಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು, ಅಮಿತ್ ಶಾ ನೇತೃತ್ವದಲ್ಲಿ ಗೃಹ ಇಲಾಖೆ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಂಡಿದೆ.

ಸ್ವಾತಂತ್ರ್ಯಾನಂತರ, ಹಲವಾರು ವರ್ಷಗಳವರೆಗೆ ದೆಹಲಿ ಸರ್ಕಾರದ ಉದಾಸೀನತೆ ಮತ್ತು ಕ್ಷುಲಕ ರಾಜಕಾರಣಗಳಿಂದ ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಂಚಿತವಾಗಿದ್ದವು. ಇದ್ದರಿಂದ ರೋಷಿಹೋಗಿದ್ದ ಅಲ್ಲಿನ ಹಲವು ಸ್ಥಳೀಯರು ಹಿಂಸಾ ಮಾರ್ಗದ ಜೊತೆಗೆ ಪ್ರತ್ಯೇಕತೆ ಕೂಗನ್ನು ಹೊರಡಿಸತೊಡಗಿದ್ದರು. 2014 ರ ನಂತರ ದೆಹಲಿಯ ಚುಕ್ಕಾಣಿ ಹಿಡಿದ ಮೋದಿ ಸರ್ಕಾರ ‘ಆಕ್ಟ್ ಈಸ್ಟ್ ಯೋಜನೆ’ ಅಳವಡಿಸಿಕೊಂಡಿತು. ಅಮಿತ್ ಶಾ ನೇತೃತ್ವದಲ್ಲಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ತ್ರಿಸೂತ್ರಗಳನ್ನು ಅಳವಡಿಸಿಕೊಂಡರು. ಮೊದಲನೆಯದಾಗಿ ಸ್ಥಳೀಯ ಆಡುಭಾಷೆಗಳು, ನೃತ್ಯ, ಸಂಗೀತ, ಆಹಾರ ಮತ್ತು ಸಂಸ್ಕೃತಿಗಳನ್ನು ಕಾಪಾಡುವುದು ಮತ್ತು ಅವುಗಳನ್ನು ಭಾರತದಾದ್ಯಂತ ಪ್ರಚಾರ ಮಾಡುವುದು. ಎರಡನೇಯದಾಗಿ ಈಶಾನ್ಯ ರಾಜ್ಯಗಳಲ್ಲಿನ ಎಲ್ಲಾ ಸಂಘರ್ಷಗಳಿಗೆ ಅಂತ್ಯ ಹಾಡಿ, ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೆಚ್ಚಿಸುವುದು. ಮೂರನೇಯದು ಈ ರಾಜ್ಯಗಳ ಸಮಗ್ರ ಅಭಿವೃದ್ಧಿ.

ಈ ನೀತಿಗಳ ಫಲಸ್ವರೂಪವೆಂಬತೆ, 2014 ನಂತರ ಈ ರಾಜ್ಯಗಳಿ ಶಾಂತಿಪಥದತ್ತ ಸಾಗುತ್ತಿವೆ; ಪ್ರತ್ಯೇಕತಾವಾದಿಗಳು ಮುನ್ನೆಲೆಗೆ ಬರುವುದರ ಜೊತೆಗೆ ಗಡಿ ಸಂಘರ್ಷಗಳು ಅಂತ್ಯಗೊಳ್ಳುತ್ತಿವೆ. ಹಾಗೇ ಜನಾಂಗೀಯ ಸಂಘರ್ಷಗಳು ಕೂಡ ಕಡಿಮೆಯಾಗುತ್ತಿದ್ದು, ಹಾಗೇ ಅಭಿವೃದ್ಧಿಯ ಹೊಸ ಪಥಗಳು ತೆರೆದುಕೊಳ್ಳುತ್ತಿವೆ. ಹೀಗೆ ಹಲವು ಗಡಿ ಒಪ್ಪಂದಗಳ ಮೂಲಕ 8000ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಗಿ ಬಂದಿದ್ದಾರೆ.

Leave a Reply

Your email address will not be published. Required fields are marked *