ಈ ಹಿಂದೆ ಅಪರಾಧ ಕೃತ್ಯ ಮಾಡಿದ್ದೇವೆ,ಅರೋಪಿಗಳ ಮಾತು ಕೇಳಿ ಬೆಚ್ಚಿ ಬಿದ್ದ ಪೋಲಿಸ್

 

ಮೈಸೂರು:30 ಆಗಸ್ಟ್ 2021
ಕ್ರೈಂ ರಿಪೋರ್ಟ್:ನ@ದಿನಿ

ಮೈಸೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಈ ಹಿಂದೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿಷ್ಯ ಸ್ವತಃ ಅರೋಪಿಗಳೇ ಬಾಯ್ಬಿಟ್ಟಿದ್ದು ಪೋಲಿಸರೇ ಬೆಚ್ಚಿ ಬಿದ್ದಿದ್ದಾರೆ.

ಹೌದು
ಸಾಮೂಹಿಕ ಅತ್ಯಾಚಾರ
ಕೇಸ್ ನಲ್ಲಿ ಆರು ಮಂದಿ ಆರೋಪಿಗಳಿದ್ದು ಐವರನ್ನ ಬಂಧಿಸಲಾಗಿದೆ.ಪ್ರಕರಣದಲ್ಲಿ ನಾವು 6 ಜನ ಅಲ್ಲ 7 ಜನ ಇದ್ದೇವೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.

ಗ್ಯಾಂಗ್ ರೇಪ್ ನಲ್ಲಿ ಭಾಗಿಯಾಗಿದ್ದ ಭೂಪತಿ ಅಲಿಯಾಸ್ ಕೀರಿ ಎಂಬಾತ ಚಾಮರಾಜೇಂದ್ರ ಮೃಗಾಲಯ,ಸಿಎಫ್ ಟಿ ಆರ್ ಐ,ಎಪಿಎಂಸಿ,ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶ್ರೀಗಂಧ ಮರ ಕಳ್ಳತನ ಮಾಡಿ ಜನವರಿ 9 2021 ರಂದು ಸಿಸಿಬಿ ಪೋಲಿಸರ ನೆರವಿನೊಂದಿಗೆ ನಜರಬಾದ್ ಪೋಲಿಸರ ಕೈಗೆ ತಗಲಾಕೊಂಡಿದ್ದ.ನಂತರ ನ್ಯಾಯಾಂಗ ಬಂಧನದಲ್ಲಿದ್ದ ಭೂಪತಿ.

ತದನಂತರ ಹೊರ ಬಂದು ಭೂಪತಿ ತನ್ನ ಹಳೆ ವರಸೆ ತೆಗೆದಿದ್ದ.ಆಗಸ್ಟ್ 24 ರಂದು ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿ ಜೈಲು ಸೇರಿದ್ದಾರೆ.

ಮೈಬಗ್ಗಿಸಿ ಕೆಲಸ ಮಾಡದೇ ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಭೂಪತಿ,ಯುವತಿಯ ಅತ್ಯಾಚಾರ ಮಾಡಿ ಪೋಲಿಸರಿಗೆ ಸಿಕ್ಕಿಬಿದ್ದು ಇದೀಗ ಖಾಕಿ ರುಚಿ ಸವಿಯುತ್ತಿ ದ್ದಾನೆ.

 

 

Leave a Reply

Your email address will not be published. Required fields are marked *