ಕುಖ್ಯಾತ ನಾಲ್ವರು ಶ್ರೀಗಂಧಚೋರರ ಸೆರೆ

ಮೈಸೂರು:9 ಜನವರಿ 2021
ಕ್ರೈಂ ವರದಿ:ನ@ದಿನಿ

ಶ್ರೀಗಂಧ ಮರಗಳ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ನಜರ್ ಬಾದ್ ಪೋಲಿಸರು ಯಶಸ್ವಿಯಾಗಿದ್ದಾರೆ.

‘ತಮಿಳುನಾಡಿನ ಭೂಪತಿ (24), ಫ್ರಾನ್ಸಿಸ್ (26), ಸೆಂದಿಲ್‌ಕುಮಾರ್ (38) ಹಾಗೂ ಪ್ರವೀಣ್‌ಕುಮಾರ್ (36) ಬಂಧಿತರು.

ತಮಿಳುನಾಡಿನಿಂದ ಬಂಧಿಸಿ ಕರೆ ತಂದಿದ್ದಾರೆ. ಇವರಿಂದ ₹ 5.5 ಲಕ್ಷ ಮೌಲ್ಯದ 46 ಕೆ.ಜಿ ತೂಕದ ಶ್ರೀಗಂಧದ ಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರು ನಗರದಲ್ಲಿ ಒಟ್ಟು 10 ಕಡೆ ಗಂಧದ ಮರಗಳನ್ನು ಕತ್ತರಿಸಿ, ಅವುಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರೆ. ಪ್ರಮುಖ ಆರೋಪಿ ರಾಹಿಲ್‌ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಡಿಸಿಪಿ ಗೀತಾ ಪ್ರಸನ್ನ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖ ಆರೋಪಿ ರಾಹಿಲ್ (36) ನಾಪತ್ತೆಯಾಗಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಕಾರ್ಯಾಚರಣೆಯಿಂದ ನಜರ್‌ಬಾದ್‌ನ 2, ಜಯಲಕ್ಷ್ಮೀಪುರಂನ 1, ಅಶೋಕಪುರಂನ 2, ಕೃಷ್ಣರಾಜದ 3, ಲಕ್ಷ್ಮೀಪುರಂನ 1 ಹಾಗೂ ನರಸಿಂಹರಾಜದ 1 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.

ಹಗಲು ಹೊತ್ತಿನಲ್ಲಿ ಮರ ಹುಡುಕುವುದು

ಆರೋಪಿಗಳ ಪೈಕಿ ಪ್ರಮುಖ ಆರೋಪಿ ಎನಿಸಿದ ರಾಹಿಲ್‌ ಹಗಲು ಹೊತ್ತಿನಲ್ಲಿ ನಗರದಲ್ಲಿ ಬೀದಿಬೀದಿಯಲ್ಲಿ ಅಲೆಯುತ್ತ ಗಂಧದ ಮರಗಳನ್ನು ಗುರುತಿಸುತ್ತಿದ್ದ. ನಂತರ, ಉಳಿದವರನ್ನು ಕತ್ತರಿಸಲು ರಾತ್ರಿ ವೇಳೆ ಕಳುಹಿಸುತ್ತಿದ್ದ. ರಾತ್ರಿ ವೇಳೆ ಹೊಂಚು ಹಾಕಿ ಆರೋಪಿಗಳು ಮರವನ್ನು ಕತ್ತರಿಸಿಕೊಂಡು ಹೋಗುತ್ತಿದ್ದರು.

ಚಾಮರಾಜೇಂದ್ರ ಮೃಗಾಲಯ, ಸಿಎಫ್‌ಟಿಆರ್‌ಐ, ಎಪಿಎಂಸಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಆವರಣದಲ್ಲಿದ್ದ ಮರಗಳನ್ನು ಇವರು ಕತ್ತರಿಸಿದ್ದರು. ಇದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ‌ಸಿಸಿಬಿ ನೆರವಿನೊಂದಿಗೆ ನಜರ್‌ಬಾದ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ದೇವರಾಜ ವಿಭಾಗದ ಪ್ರಭಾರ ಎಸಿಪಿ ಮರಿಯಪ್ಪ,ನಜರ್ ಬಾದ್ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಮಾರ್ಗದಲ್ಲಿ ಪಿಎಸ್ ಐ ಸಿದ್ದೇಶ್ ಎಂ.ಎಲ್,ಸಿಬ್ಬಂದಿಗಳಾದ ಪ್ರಕಾಶ್,ಬಿ.ವಿ,ಮಧುಕೇಶ್,ಹೆಚ್.ವಿ,ಚೇತನ್.ಪಿ,ಸಂದೇಶ್ ಕುಮಾರ್,ಕಿರಣ್ ರಾಥೋಡ್,ಚೇತನ್ ಹೆಚ್.ಎಸ್,ಲೋಲಾಕ್ಷಿ,ಜಗದೀಶ್,ಮಂಜು,ಕುಮಾರ್.ಪಿ ಪತ್ತೆ ಕಾರ್ಯದಲ್ಲಿ ಭಾಗಿಯಾದ್ದು ಆಯುಕ್ತರಾದ ಡಾ.ಚಂದ್ರಗುಪ್ತರವರು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *