ಶೆಟ್ಟಳ್ಳಿ ಗ್ರಾಮದಲ್ಲಿ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ,ಟ್ರೋಫಿ ಮುಡಿಗೇರಿಸಿಕೊಂಡ ಶರತ್ ಕ್ರಿಕೆಟರ್ಸ್ ತಂಡ

ನಂದಿನಿ ಮೈಸೂರು

ಪಿರಿಯಾಪಟ್ಟಣ ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಏರ್ಪಡಿಸಿದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಏಳು ತಂಡಗಳು ಭಾಗವಹಿಸಿದವು ಮೂರು ದಿನಗಳ ಕಾಲ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಶರತ್ ಕ್ರಿಕೆಟರ್ಸ್ ತಂಡ 20,000 ನಗದು ಮತ್ತು ಆಕರ್ಷಕ ಟ್ರೋಪಿಯನ್ನ ತನ್ನದಾಗಿಸಿಕೊಂಡಿದೆ.

ಫೈನಲ್ ಮ್ಯಾಚ್ ಅಲ್ಲಿ ಸೋಮೇಶ್ವರ ಹಾಗೂ ಶರತ್ ಕ್ರಿಕೆಟರ್ಸ್ ತಂಡ ನಡುವೆ ನಡೆಯಿತು ಸೋಮೇಶ್ವರ ಮೊದಲು ಬ್ಯಾಟ್ ಮಾಡಿ ನಾಲ್ಕು ಓವರ್ ಗಳಿಗೆ 32 ರನ್ಗಳನ್ನ ಕಲೆಯಾಗಿತ್ತು ಎರಡನೇ ಇವಿನಿಂಗ್ಸ್ ಆರಂಭಿಸಿದ ಶರತ್ ಕ್ರಿಕೆಟರ್ಸ್ ತಂಡ 2.4 ಎಸೆತಗಳಲ್ಲೇ ಜಯಗಳಿಸಿತು ಶರತ್ ಕ್ರಿಕೆಟರ್ಸ್ ತಂಡದ ಆಟಗಾರ ಸಚಿನ್ ಪದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು
ದ್ವಿತೀಯ ಬಹುಮಾನವನ್ನು 10000. ನಗದು ಹಾಗೂ ಆಕರ್ಷಕ ಟ್ರೋಫಿ ಸೋಮೇಶ್ವರ ತಂಡ ಪಡೆದುಕೊಂಡಿತ್ತು ತೃತೀಯ 5000 ನಗದು ಮತ್ತು ಆಕರ್ಷಕ ಟ್ರೋಫಿ ಮಲೆ ಮಾದೇಶ್ವರ ತಂಡ ಪಡೆದುಕೊಂಡಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ಈಗಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ತಮ್ಮಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಜಿಲ್ಲಾ ಹಾಗೂ ರಾಜ್ಯ ರಾಷ್ಟ್ರಮಟ್ಟಗಳಿಗೆ ಆಯ್ಕೆ ಆಗುವ ಮೂಲಕ ಗ್ರಾಮಗಳಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಏಳು ತಂಡದ ಮಾಲೀಕರನ್ನ ಸನ್ಮಾನಿಸಲಾಯಿತು.

ಪಂದ್ಯದ ಆಯೋಜಕರು ಶಿವು ಮೋಹನ್ ಬಸವರಾಜ್ ಸುನಿಲ್ ಪ್ರವೀಣ್ ಕುಮಾರ್ ಸೋಮು ಭರತ್ ನೂರಾರು ಕ್ರಿಕೆಟ್ ಪ್ರೇಮಿಗಳು ಪಂದ್ಯ ವೀಕ್ಷಣೆ ಮಾಡಿದರು.

Leave a Reply

Your email address will not be published. Required fields are marked *