ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಮಾನವ ದಿನಾಚರಣೆ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ನಂದಿನಿ ಮೈಸೂರು

ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಮಾನವ ದಿನಾಚರಣೆ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು .

ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರ ನಂಜುಮಳಿಗೆಯಲ್ಲಿ ಆಯೋಜಿಸಿದ್ದ
ಕಾರ್ಯಕ್ರಮಕ್ಕೆ ಮೇಯರ್ ಶಿವಕುಮಾರ್ ರವರು ಜ್ಯೋತಿ ಬೆಳಗಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ನಾಯಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ದ್ಯಾವಪ್ಪ ನಾಯಕರು ವಹಿಸಿದ್ದರು. ಉದ್ಬೂರು ಕೃಷ್ಣರವರು ಪ್ರಾರ್ಥನೆ ಮಾಡಿದರು ಸಂಘದ ಅಧ್ಯಕ್ಷರಾದ ಟಿ ನಾಗಲಿಂಗಪ್ಪ ರವರು ಗಣ್ಯರನ್ನು ಸ್ವಾಗತಿಸಿದರು.

ಎಂ ಎಸ್ ಸಿ ಅಗ್ರಿಕಲ್ಚರ್ ನಲ್ಲಿ ನಾಲ್ಕನೇ ರಾಂಕ್ ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ಎಸ್ ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರಾಂಕ್ ಗಳಿಸಿದ ಕುಮಾರಿ ಹರ್ಷಿತ ಎಸ್ ಬಕ್ಕಹಳ್ಳಿ ನಂಜನಗೂಡು ತಾಲೂಕು ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರೌಢಶಾಲಾ ಸಹ ಶಿಕ್ಷರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ವಾಲ್ಮೀಕಿ ಸಮುದಾಯದ ನಿರ್ದೇಶಕರಾದ ಶ್ರೀ ಅಣ್ಣಯ್ಯ ನಾಯಕರು ಮುಂತಾದವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್ ರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು .

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ರವರು ಹಾಗೂ ಹೇಮ ಶೆಟ್ಟರು ನಿವೃತ್ತ ಶಿಕ್ಷಕರು ಕನ್ನಡ ಚಳುವಳಿಗಾರರಾದ ಶಿವಶಂಕರ್, ರೇವಣ್ಣ , ಹಿರಿಯ ಉಪಾಧ್ಯಕ್ಷ ನಾಗ ನಾಯಕರು ಸಂಘಟನಾ ಕಾರ್ಯದರ್ಶಿಗಳು ೆಚ್‍ಡಿ ಕೋಟೆ, ಮಂಜಣ್ಣ, ಶಿವ ಲಿಂಗರಾಜು ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳು, ಜವರೇಗೌಡರು ಮಾಜಿ ಅಧ್ಯಕ್ಷರು ತಾಲೂಕು ಶಿಕ್ಷಕರ ಸಂಘ ಮೈಸೂರು ಚಿಕ್ಕನಾಯಕರು ಮುಖ್ಯ ಶಿಕ್ಷಕರು ಕರಿಯಪ್ಪ
ನಾಯಕರು ಉಪಾಧ್ಯಕ್ಷರು ಹುಣಸೂರು,ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಮಾರ್ ಬಿ ,ಎಮ್.ಎನ್.ಕೃಷ್ಣಮೂರ್ತಿ
ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *