ರೋಲರ್ ಸ್ಟೇಟಿಂಗ್‌ನಲ್ಲಿ ಮೆಡಲ್ ಪಡೆದ ಮೈಸೂರು ಸ್ಪರ್ಧಿಗಳು, ಉದ್ಬೂರು ಶಾಲೆ 3 ಮಕ್ಕಳಲ್ಲಿ ಓರ್ವ ನ್ಯಾಷನಲ್ ಗೆ ಆಯ್ಕೆ

ನಂದಿನಿ ‌ಮೈಸೂರು

ರೋಲರ್ ಸ್ಟೇಟಿಂಗ್‌ನಲ್ಲಿ ಮೆಡಲ್ ಪಡೆದ ಮೈಸೂರಿನ ಸ್ಪರ್ಧಿಗಳು

ಮೈಸೂರು: ಬೆಂಗಳೂರು ಹಾಗೂ ತುಮಕೂರಿ ನಲ್ಲಿ ನವೆಂಬರ್ 5 ಮತ್ತು 6 ರಂದು ನಡೆದ 38 ನೇ ಕರ್ನಾಟಕ ರಾಜ್ಯ ಸೆಲೆಕ್ಷನ್ ಟ್ರಿಯಲ್ಸ್ 2022-23 ರಲ್ಲಿ ನಮ್ಮ ಮೈಸೂರಿನ ಸೇಫಿಯನ್ ಸ್ಟೇಟರ್ಸ್‌ ಇಂದ, ಕೋಚ್ ಪ್ರತಾಪ್ ಚಂದ್ ಅವರಿಂದ ತರಬೇತಿ ಪಡೆದಿರುವ 14 ಸೈಟರ್ಸ್ ಭಾಗವಹಿಸಿದ್ದು ಅದರಲ್ಲಿ 11 ಸೈಟರ್ಸ್ ಮೆಡಲ್ ಅನ್ನು ಪಡೆದಿದ್ದು, ಹಾಗೂ 8 ಸ್ಟೇಟರ್ಸ್‌ ನ್ಯಾಷನಲ್ ನಲ್ಲಿ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸುತ್ತಿದ್ದಾರೆ.

ಅದರಲ್ಲಿ ನಮ್ಮ ಮೈಸೂರಿನ ಉದ್ಬೂರು ಗ್ರಾಮ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಮಕ್ಕಳು  ಭಾಗವಹಿಸಿದ್ದು ಎಲ್ಲರೂ ಮೆಡಲ್ ಅನ್ನು ಪಡೆದಿರುತ್ತಾರೆ, ಹಾಗೂ ನಾಗರಾಜ್‌ ಎಂಬುವರು ನ್ಯಾಷನಲ್ ಗೆ ಆಯ್ಕೆಯಾಗಿದ್ದಾರೆ.

ಸಾಧಕರ ಪಟ್ಟಿ :

11 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು (ಸಬ್ ಜೂನಿಯರ್ಸ್, * ಯಶಸ್ವಿನಿ – ಪ್ರಥಮ ಸ್ಥಾನ, * ಸೌರಭ – 1 ನೇ ಸ್ಥಾನ (ಇನ್‌ಲೈನ್‌ ಡೌನ್‌ಹಿಲ್), * ಸಂಸ್ಕೃತಿ – 2 ನೇ ಸ್ಥಾನ,

14 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು (ಕಿರಿಯರು), * ಲತಾ – 3ನೇ ಸ್ಥಾನ, 11 ವರ್ಷ ಮೇಲ್ಪಟ್ಟ ಹುಡುಗರು (ಸಬ್ ಜೂನಿಯರ್ಸ್), * ಭಾವೇಶ್ 2ನೇ ಸ್ಥಾನ, 14 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರು (ಕಿರಿಯರು), * ಮನೋಜ್ -1ನೇ ಸ್ಥಾನ, * ನಾಗೇಂದ್ರ – 3ನೇ ಸ್ಥಾನ, * ನಾಗರಾಜು – 2ನೇ ಸ್ಥಾನ (ಇನ್‌ಲೈನ್ ಇಳಿಜಾರು),

17ಕ್ಕಿಂತ ಮೇಲ್ಪಟ್ಟ ಹುಡುಗಿಯರು, * ಶುಭಾ – 1ನೇ ಸ್ಥಾನ. * ನಿತಿಕಾ -2ನೇ ಸ್ಥಾನ, 17ಕ್ಕಿಂತ ಮೇಲ್ಪಟ್ಟ ಹುಡುಗರು, ಸಾವನ್ – 3ನೇ ಸ್ಥಾನ. ಪಡೆದಿರುತ್ತಾರೆ.

Leave a Reply

Your email address will not be published. Required fields are marked *