ಮೈಸೂರಿನ ಎಲ್ಲಾ ಬಸ್ ನಿಲ್ದಾಣ ಸಮವಸ್ತ್ರದಂತೆ ಇರಲಿ ಜೊತೆಗೆ ಗಂಡಭೇರುಂಡ ಲಾಂಛನ ಅಳವಡಿಸುವಂತೆ ಸ್ನೇಕ್ ಶ್ಯಾಮ್ ಒತ್ತಾಯ

ನಂದಿನಿ ಮೈಸೂರು

ಮೈಸೂರಿನಲ್ಲಿ ಸಮವಸ್ತ್ರದಂತೆ ಎಲ್ಲಾ ಬಸ್ ನಿಲ್ದಾಣ ಒಂದೇ ಮಾದರಿಯಲ್ಲಿ ಇರಲಿ ಜೊತೆಗೆ ಅದರಲ್ಲಿ ಗಂಡಭೇರುಂಡ ಲಾಂಛನ ಇರಲಿ ಎಂದು ಸಮಾಜ ಸೇವಕರು,ಮಾಜಿ‌ ನಗರ ಪಾಲಿಕೆ ಸದಸ್ಯರಾದ ಸ್ನೇಕ್ ಸ್ನೇಕ್ ಶ್ಯಾಮ್ ತಿಳಿಸಿದರು.

ಮೈಸೂರಿನಲ್ಲಿ ‌ಮಾತನಾಡಿದ ಅವರು ಬಸ್ ನಿಲ್ದಾಣ ಸಾರ್ವಜನಿಕರ ತೆರಿಗೆಯಿಂದ ನಿರ್ಮಿಸಲಾಗಿರುವುದು.ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಸಹ ಸಾರ್ವಜನಿಕರ ಹಣದಿಂದ ಕಟ್ಟಲಾಗಿರುತ್ತದೆ.ಮೈಸೂರಿನಲ್ಲಿ ಬಸ್ ನಿಲ್ದಾಣಯೊಂದು ಬಾರೀ ಚರ್ಚೆಯಾಗುತ್ತಿದ್ದು ಧರ್ಮ ಧರ್ಮಗಳ ನಡುವೆ ಶಾಂತಿ ಕದಡುವಂತೆ ಮಾಡುತ್ತಿದೆ.ಆದ್ದರಿಂದ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಕಟ್ಟುವ ಬಸ್ ನಿಲ್ದಾಣ ಒಂದೇ ತರ ನಿರ್ಮಾಣವಾಗಲೀ.ಕಟ್ಟಡದಲ್ಲಿ ಗಂಡಭೇರುಂಡ ಲಾಂಚನ ಅಳವಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇನ್ನೂ 100 ಟಿಪ್ಪು ಪತ್ರಿಮೆ ನಿರ್ಮಾಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶ್ಯಾಂ ರವರು ನಾನು ಒಬ್ಬ ಸಮಾಜ ಸೇವಕನಾಗಿದ್ದೇನೆ.ಎಲ್ಲರೂ ನನಗೆ ಬೇಕು.ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಎಂದರು.

Leave a Reply

Your email address will not be published. Required fields are marked *