ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಎಲ್ಲ ಮಕ್ಕಳಿಗೂ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮ

ನಂದಿನಿ ಮೈಸೂರು

ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಎಲ್ಲ ಮಕ್ಕಳಿಗೂ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮವನ್ನು ನಮ್ಮ ವಾರ್ಡಿನ ಮೇದರಕೇರಿಯ ಅಂಗನವಾಡಿಯಲ್ಲಿ ಉದ್ಘಾಟನೆ ಮಾಡಲಾಯಿತು

ಇಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಚಾಮುಂಡಿಪುರಂಗೆ ಒಳಪಡುವ ಮೇದರಕೇರಿಯ ಅಂಗನವಾಡಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮವನ್ನು ಅಡಳಿತ ಪಕ್ಷದ ನಾಯಕರು ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಯುತ ಮ ವಿ ರಾಮಪ್ರಸಾದ ರವರು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಚಾಮುಂಡಿಪುರಂನ ಆಡಳಿತ ವೈದಾಧಿಕಾರಿಗಳಾದ ಶ್ರೀಮತಿ ಡಾ||ಮಮತಾ ರವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ದೀಪಾ ಬೆಳಗಿಸುವುದರ ಮೂಲಕ ಹಾಗೂ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ಸ್ ಹಾಕುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಾದ HIO ವಿಜಯ್ ಕುಮಾರ್, ಮಾನಸ ಭರಣಿ, PHCO ರವರಾದ ಚಲುವಮ್ಮ, ಶೀಲಮ್ಮ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಕುಮಾರಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *