ಹೆಚ್.ಡಿ.ಕೋಟೆ:2 ನವೆಂಬರ್ 2021
ನ@ದಿನಿ
ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ದಿವಂಗತ ಎಸ್ ಚಿಕ್ಕಮಾದು ರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
ಎಸ್. ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ಹೆಚ್.ಡಿ ಕೋಟೆ ಪಟ್ಟಣದ ಬಾಪೂಜಿ ಸರ್ಕಲ್ ಬಳಿ ಕೋವಿಡ್ 19 ಹಿನ್ನಲೆ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ದಿವಂಗತ ಚಿಕ್ಕಮಾದು ಅವರ ಭಾವಚಿತ್ರಕ್ಕೆ
ಜನಪ್ರಿಯ ಶಾಸಕ ಅನಿಲ್ ಚಿಕ್ಕಮಾದು ಒಳಗೊಂಡಂತೆ ಅಧಿಕಾರಿಗಳು ಸೇರಿ ಪುಷ್ಪ ನಮನ ಸಲ್ಲಿಸಿದರು.
ದಿವಂಗತ ಎಸ್ ಚಿಕ್ಕಮಾದು ಅವರ ನೆನಪಿನಾರ್ಥವಾಗಿ ಸರ್ಕಾರಿ ಬಾಲಕಿಯರ ಮಾದರಿ ಶಾಲೆ ಮತ್ತು ಸಿದ್ದಪ್ಪಾಜಿ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಮಾಡಲಾಯಿತು.
ಮೈಸೂರಿನ ಹೆಸರಾಂತ ಡಿ ಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ. ಜವರ ನಾಯಕರವರ ರಿಂದ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿನ್ನಹಳ್ಳಿ ರಾಜ ನಾಯಕರು ಗೌರವಾಧ್ಯಕ್ಷರಾದ ಪುಟ್ಟ ಬಸವನಾಯಕರು, ದಾಸನಾಯಕರು , ಬೆಟ್ಟನಾಯಕರು, ಮಣಿ ಮಾಗುಡಿಲು ಹಾಗೂ ಮುಂತಾದವರು ಹಾಜರಿದ್ದರು.