ಆದಿವಾಸಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ

 

ಸರಗೂರು:2 ನವೆಂಬರ್ 2021

ನ@ದಿನಿ

ವಿವೇಕಾನಂದ ಸ್ಮಾರಕ ಆಸ್ಪತ್ರೆಯಿಂದ ಸರಗೂರು ತಾಲೂಕಿನ ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆದಿವಾಸಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಯಿ ಮತ್ತು ಮತ್ತು ಮಕ್ಕಳ ಮರಣ ತಪ್ಪಿಸಲು ಗರ್ಭಾವಸ್ಥೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯರ ಸಲಹೆಯಂತೆ ತಪಾಸಣೆ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಟಿ ಎಚ್ ಓ ರವಿಕುಮಾರ್ ತಿಳಿಸಿದರು.

ಸೀಮಂತ ಕಾರ್ಯಕ್ರಮದಲ್ಲಿ ಮಾನ್ಯ ತಹಶೀಲ್ದಾರ ಚಲುವರಾಜು, ಪ್ರಾಥಮಿಕ ಆರೋಗ್ಯ ಕೇಂದ್ರ ದ ಡಾ”ಚಂದ್ರಶೇಖರ್ ,ರವಿರಾಜ್ ವಿವೇಕಾನಂದ ಯೂತ್ ಮೂವ್ಮೆಂಟ್ ರಾಮಪ್ರಸಾದ್,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು,ವಿವೇಕ ನಂದ ಯೂತ್ ಮೂವ್ಮೆಂಟ್ ಸಿಬ್ಬಂದಿಗಳು, ಆಶಾ , ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗರ್ಭಿಣಿಯರು ಭಾಗವಹಿಸಿದರು.

Leave a Reply

Your email address will not be published. Required fields are marked *