ದಿ. ಚಿಕ್ಕಮಾದು ಅವರ 4ನೇ ವರ್ಷದ ಪುಣ್ಯ ಸ್ಮರಣೆ,ಅಪ್ಪುಗೆ ಮೌನಾಚರಣೆ

ಸರಗೂರು:1 ನವೆಂಬರ್ 2021

ನ@ದಿನಿ

ಸರಗೂರು ತಾಲ್ಲೂಕಿನ ಕೆ.ಬೆಳತೂರು ಗ್ರಾಮದಲ್ಲಿ ದಿವಂಗತ ಚಿಕ್ಕಮಾದು ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ನಡೆಸಲಾಯಿತು.

ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ಕೆ.ಬೆಳತೂರು ಬಸ್ ನಿಲ್ದಾಣದ ಬಳಿ ದಿವಂಗತ ಚಿಕ್ಕಮಾದು ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಪುಷ್ಪರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಇದಕ್ಕೂ ಮೂದಲೇ ಆಕಾಲಿಕ ಮರಣ ಹೊಂದಿದ ಅಪ್ಪು ಅವರಿಗೆ 2 ನಿಮಿಷಗಳ ಕಾಲ ಮೌನಚಾರಣೆ ಮಾಡಲಾಯಿತು.

ದಿವಂಗತ ಚಿಕ್ಕಮಾದು ಅವರ ನೆನಪಿನಾರ್ಥವಾಗಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಧನಸಹಾಯ ನೀಡಿದರು.

ದಿವಂಗತ ಚಿಕ್ಕಮಾದು ಅವರು ಮಾಡಿರುವ ಸಾಧನೆಗಳ ಬಗ್ಗೆ ಚಿಕ್ಕವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ಪರಿಚಯಿಸಿದರು.ಭೋಜನ ವ್ಯವಸ್ಥೆ ಮಾಡಲಾಗಿತ್ತು. 

ಇದೇವೇಳೆ ಚಿಕ್ಕಮಾದು ಅಭಿಮಾನಿ ಬಳಗದ ಮಂಜು, ಹರೀಶ್, ಪ್ರತಾಪ್, ಗೋಪಾಲ್,ಕೆಂಪ, ಪ್ರಸಾದ್ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *