ಚಾಮರಾಜನಗರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿಯಾಗಿ ಗೌಡಹಳ್ಳಿ ಮಹೇಶ್ ಅವಿರೋಧ ಆಯ್ಕೆ

ಚಾಮರಾಜನಗರ:20 ಫೆಬ್ರವರಿ 2022

ನಂದಿನಿ ಮೈಸೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕನ್ನಡಪ್ರಭ ಪ್ರಧಾನ ವರದಿಗಾರ ದೇವರಾಜು ಕಪ್ಪಸೋಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿಟಿವಿ ಜಿಲ್ಲಾ ವರದಿಗಾರ ಗೌಡಹಳ್ಳಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೇವರಾಜು ಕಪ್ಪಸೋಗೆಯವರು ಈ ಹಿಂದಿನ ಎರಡು ಅವಧಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷರಾಗಿ ಆಂದೋಲನ ಪತ್ರಿಕೆ ವರದಿಗಾರ ಬಿ.ವಿ.ಪ್ರಸಾದ್, ಸುವರ್ಣ ವಾಹಿನಿಯ ವಿಡಿಯೋ ಜರ್ನಲಿಸ್ಟ್ ಆರ್.ಸಿ.ಪುಟ್ಟರಾಜು, ಸುದ್ದಿಬುದ್ದಿ ಪತ್ರಿಕೆ ಸಂಪಾದಕಿ ಸ್ನೇಹಲಕ್ಷ್ಮಿ, ಜಿಲ್ಲಾ ಕಾರ್ಯದರ್ಶಿಗಳಾಗಿ ಉದಯವಾಣಿಯ ಕೊಳ್ಳೇಗಾಲ ವರದಿಗಾರ ಡಿ.ನಟರಾಜು, ಡೈಲಿ ಸಾಲಾರ್ ವರದಿಗಾರ ಮಹಮದ್ ಅಜೀಂ, ರೇಷ್ಮೆನಾಡು ವರದಿಗಾರ ಆರ್‌.ರಾಜೇಂದ್ರ, ಖಜಾಂಚಿಯಾಗಿ ಹೊಸದಿಗಂತ ವರದಿಗಾರ ಎಂ.ರೇಣುಕೇಶ್, ರಾಜ್ಯ ಸಮಿತಿ ಸದಸ್ಯರಾಗಿ ದೂರದರ್ಶನ ವರದಿಗಾರ ಗೂಳಿಪುರ ನಂದೀಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೇಷ್ಮೆನಾಡು ಮುಖ್ಯ ವರದಿಗಾರ ಅಬ್ರಹಾಂ ಡಿ’ಸಿಲ್ವ, ನ್ಯೂಸ್ 18 ಹಿರಿಯ ವರದಿಗಾರ ಎಸ್.ಎಂ. ನಂದೀಶ್, ಉದಯವಾಣಿ ಹಿರಿಯ ವರದಿಗಾರ ಕೆ.ಎಸ್.ಬನಶಂಕರ ಆರಾಧ್ಯ, ಸಂಯುಕ್ತ ಕರ್ನಾಟಕ ವರದಿಗಾರ ಎಚ್.ಎಸ್.ಚಂದ್ರಶೇಖರ್, ಗುಂಡ್ಲುಪೇಟೆಯ ಕನ್ನಡಪ್ರಭ ವರದಿಗಾರ ಎಚ್.ಎಸ್.ಶಿವಕುಮಾರ್, ರೇಷ್ಮೆನಾಡು ಸಂಪಾದಕಿ ಸವಿತಾ ಜಯಂತ್, ಗೊರುಕನ ಪತ್ರಿಕೆ ಛಾಯಾಗ್ರಾಹಕ ಕೆ.ಎ.ಶ್ರೀನಿವಾಸ್, ಗೊರುಕನ ಪತ್ರಿಕೆ ಸಂಪಾದಕ ಸಿ.ಮಹೇಂದ್ರ, ನಮ್ಮೂರು ಸುದ್ದಿ ಸಂಪಾದಕ ವಿ.ಗಂಗಾಧರ, ಯಳಂದೂರಿನ ಉದಯವಾಣಿ ವರದಿಗಾರ ಫೈರೋಜ್ ಖಾನ್, ಹನೂರಿನ ಸಂಜೆವಾಣಿ ವರದಿಗಾರ ಎಂ.ರವಿ, ನಿಂಪು ವಾರ್ತೆ ಸಂಪಾದಕ ಎನ್.ರಾಜೇಶ್, ಕನ್ನಡಪ್ರಭ ವರದಿಗಾರ ಎನ್.ರವಿಚಂದ್ರ, ಹನೂರಿನ ಗೊರುಕನ ಪತ್ರಿಕೆ ವರದಿಗಾರ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಸವರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *