ಮೈಸೂರು:20 ಫೆಬ್ರವರಿ 2022
ನಂದಿನಿ ಮೈಸೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರ ಆಯ್ಕೆಗೆ ಇದೇ ಫೆ.27 ರಂದು ನಡೆಯುವ ಚುನಾವಣಾ ಕಣದಲ್ಲಿ ಮೂವರು ಅಭ್ಯರ್ಥಿಗಳ ನಡುವೆ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ.
ಮೈಸೂರು ಜಿಲ್ಲೆಯಿಂದ ಒಬ್ಬ ನಿರ್ದೇಶಕರ ಆಯ್ಕೆಗೆ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಧರ್ಮ ಪತ್ರಿಕೆ ಸುದ್ದಿ ಸಂಪಾದಕ
ಸಿ.ಎಂ.ಕಿರಣ್ ಕುಮಾರ್ , ಆಂದೋಲನ ದಿನಪತ್ರಿಕೆ ವರದಿಗಾರ ಕೆ.ಬಿ.ರಮೇಶ ನಾಯಕ್ ಹಾಗೂ ಬಿ ಟಿವಿಯ ಮೈಸೂರು ಬ್ಯೂರೋ ಮುಖ್ಯಸ್ಥರಾದ ಬಿ.ರಾಘವೇಂದ್ರ ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಫೆ.೭ ರಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡು ಫೆ.೧೧ ರಿಂದ ನಾಮಪತ್ರ ಸಲ್ಲಿಕೆ ನಡೆದಿದ್ದು, ಫೆ.೧೯ ರಂದು ಅಂತಿಮ ಅಭ್ಯರ್ಥಿಗಳಾಗಿ ಮೂವರ ಹೆಸರನ್ನು ಘೋಷಿಸಲಾಗಿದೆ. ಫೆ.27 ರಂದು ಬೆಳಿಗ್ಗೆ10 ರಿಂದ 3 ರವರೆಗೆ ಮತದಾನ ನಡೆಯಲಿದ್ದು, ಮಧ್ಯಾಹ್ನದ ನಂತರ ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿಯಾದ ಬನ್ನೂರು ಕೆ.ರಾಜು ಅವರು ತಿಳಿಸಿದ್ದಾರೆ.