ನಂದಿನಿ ಮನುಪ್ರಸಾದ್ ನಾಯಕ್
ಪಶ್ವಿಮ ಬಂಗಾಳದಲ್ಲಿ ಕತ್ತಲು ಹೋಗಿ ಕಮಲ ಆರಳಿದೆ. ಈ ಮೂಲಕ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರ ಕನಸು ನನಸಾಗಿದೆ : ಡಾ.ಈ.ಸಿ. ನಿಂಗರಾಜ್ ಗೌಡ.

ಈ ಸಲದ ಬಿಜೆಪಿಯ ಅಭೂತಪೂರ್ವ ಚುನಾವಣೆಯ ಫಲಿತಾಂಶದಿಂದಾಗಿ ಪಶ್ವಿಮ ಬಂಗಾಳದಲ್ಲಿ ಕತ್ತಲು ಹೋಗಿ ಕಮಲ ಆರಳಿದೆ. ಈ ಮೂಲಕ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರ ಕನಸು ನನಸಾಗಿದೆ ಎಂದು ಮೈಸೂರು ವಿಭಾಗದ ಸಹ ಪ್ರಭಾರಿ ರವರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಗೃಹ ಸಚಿವರಾದ ಶ್ರೀ ಅಮೀತ್ ಶಹಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತೀನ್ ನಭೀನ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜಿ, ಯೋಗಿ ಆದಿತ್ಯ ನಾಥ್, ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೆ ಡಾ.ಈ.ಸಿ.ನಿಂಗರಾಜ್ ಗೌಡರವರು ಧನ್ಯವಾದಗಳನ್ನೂ ಮತ್ತು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಕಳೆದ 50 ವರ್ಷಗಳಿಂದಲೂ ಪಶ್ಚಿಮಬಂಗಳದಲ್ಲಿ ಆಗಿನ ಕಮ್ಯೂನಿಷ್ಠರಿಂದ, ಕಳೆದ 15 ವರ್ಷಗಳಿಂದ ಟಿ.ಎಂ.ಸಿ ಕಾರ್ಯಕರ್ತರಿಂದ ಬಿಜೆಪಿ ಮತ್ತು ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರ ಭರ್ಭರ ಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಇದ್ದವು.. ಈ ಅಭೂತಪೂರ್ವ ಚುನಾವಣೆಯ ಜಯದಿಂದಾಗಿ ಅವರೇಲ್ಲರ ಆತ್ಮಕ್ಕೆ ಶಾಂತಿ ಸಿಕ್ಕೀದಂತೆ ಆಗಿದೆ.
ಈ ಚುನಾವಣೆಯ ಜಯದಿಂದಾಗಿ ಪಶ್ಚಿಮಬಂಗಾಳದ ಸಮಗ್ರ ಅಭಿವೃದ್ಧಿ, ಗಡಿ ರಕ್ಷಣೆಯ ಮೂಲಕ ದೇಶದ ಸುರಕ್ಷತೆ, ಮಹಿಳೆಯರ ರಕ್ಷಣೆ, ಯುವಕರಿಗೆ ಉದ್ಯೋಗ, ಪ್ರವಾಸೋಧ್ಯಮ, ಕೈಗಾರಿಕಾ ಅಭಿವೃದ್ಧಿಯೂ ನಿಶ್ಚಿತವಾಗಿ ಆಗಲಿದೆ ಎಂದು ಡಾ. ಈ.ಸಿ. ನಿಂಗರಾಜ್ ಗೌಡ ರವರು ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಬಂಗಾಳ, ಅಸ್ಸಾಂ, ಪುದುಚೇರಿಯ ಅಧ್ಭುತ ಗೆಲವೂ ಹಾಗೂ ತಮಿಳು ನಾಡು, ಕೇರಳದಲ್ಲಿ ಬಿಜೆಪಿಗೆ ಮತನೀಡಿದ ಎಲ್ಲಾ ಮತದಾರರಿಗೂ, ಕಾರ್ಯಕರ್ತರಿಗೂ ಡಾ.ಈ.ಸಿ. ನಿಂಗರಾಜ್ ಗೌಡ ರವರು ಕೃತಜ್ಞತೆಯನ್ನುಸಲ್ಲಿಸಿದ್ದಾರೆ.
ವಂದನೆಗಳೊಂದಿಗೆ,
ಡಾ.ಈ.ಸಿ.ನಿಂಗರಾಜ್ ಗೌಡ.
ಮೈಸೂರು ವಿಭಾಗದ ಬಿಜೆಪಿ ಸಹ ಪ್ರಭಾರಿ.