ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರ ಪಡೆ ಬಿಜೆಪಿಗಿದೆ : ಟಿ ಎಸ್ ಶ್ರೀವತ್ಸ

ನಂದಿನಿ ಮೈಸೂರು

ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರ ಪಡೆ ಬಿಜೆಪಿಗಿದೆ : ಟಿ ಎಸ್ ಶ್ರೀವತ್ಸ

*ಮಳೆಯಲ್ಲೂ ಬಿರುಸಿನ ಪ್ರಚಾರ ಮಾಡಿದ ಟಿ ಎಸ್ ಶ್ರೀವತ್ಸ*

ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರ ಪಡೆಯಲು ಹೊಂದಿರುವ ಪಕ್ಷ ಬಿಜೆಪಿ ಆಗಿದ್ದು ಕಾರ್ಯಕರ್ತರ ತ್ಯಾಗ ಬಲಿದಾನದಿಂದ ಇಂದು ಬಿಜೆಪಿ ಪಕ್ಷ ದೇಶದಲ್ಲಿ ಸದೃಢವಾಗಿ ಬೆಳೆದು ನಿಂತಿದ್ದು ಈ ಪಕ್ಷದಲ್ಲಿ ಪ್ರಾಮಾಣಿಕರಿಗೆ ಮಾತ್ರ ಅವಕಾಶಗಳಿದ್ದು , ಅವಕಾಶಗಳನ್ನು ದುರುಪಯೋಗ ಮಾಡಿಕೊಂಡವರಿಗೆ ಪಕ್ಷ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ನೀಡಲಿದೆ ಎಂದು ಕೆ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶಿವತ್ಸ ಹೇಳಿದರು,
ನಗರದ ಜಯನಗರ ಹಾಗೂ ವಿವೇಕಾನಂದ ನಗರ ಮತ್ತು ಅರವಿಂದ್ ನಗರ ಮನೆಮನೆಗೂ ತೆರಳಿ ಮತಯಾಚಿಸಿ ಮಾತನಾಡಿದ ಅವರು ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದು , ಕಳೆದ 35 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಈ ಬಾರಿ ನನ್ನ ಸೇವೆಯನ್ನು ಗುರುತಿಸಿ ಬಿಜೆಪಿ ಪಕ್ಷ ಟಿಕೆಟ್ ನೀಡಿದ್ದು ಈ ಬಾರಿ ನಾನು ಜಯಗಳಿಸಿ ವಿಧಾನಸೌಧ ಪ್ರವೇಶಿಸುವುದು ಶತಸಿದ್ಧವಾಗಿದೆ ಎಂದರು, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನಪರ ಯೋಜನೆಗಳು ಮತ್ತು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನದ ನಿರ್ಧಾರಗಳ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಕ್ಷೇತ್ರದ ಮತದಾರರು ಸಹ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು, ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸದೃಢವಾಗಿ ಬೆಳೆದು ನಿಂತಿದ್ದು, ಕಾರ್ಯಕರ್ತರು ಸಹ ಉಮ್ಮಸ್ಸಿನಿಂದ ಪಕ್ಷ ಸಂಘಟನೆ ಮಾಡುತ್ತಿದ್ದು, ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಮತವನ್ನು ಕೇಳಲಾಗುತ್ತಿದೆ ಎಂದರು

ಇದೇ ಸಂದರ್ಭದಲ್ಲಿ ರಾಕೇಶ್ ಗೌಡ, ರಾಮ್ ಪ್ರಸಾದ್, ಪ್ರದೀಪ್ , ಅಜಯ್ ಶಾಸ್ತ್ರಿ, ಮಹದೇವ್, ನಾಗರಾಜ್, ಗೌರಿ, ಸುಜಾತ, ಉಮೇಶ್, ಶ್ರೀನಿವಾಸ, ರವಿ, ಗೌತಮ್, ಮನೋಜ್, ಪವನ್ ,ಹಾಗೂ ಇನ್ನಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *