ನಂದಿನಿ ಮೈಸೂರು
ಕರ್ನಾಟಕ ವಿಧಾನಸಭಾ ಚುನಾವಣೆ 2023 ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಜನ ಸೇವಕ ಡಾ. ರೇವಣ್ಣಗೆ ಬಿಜೆಪಿ ಟಿಕೇಟ್ ನೀಡಿದೆ.
ಜೆಡಿಎಸ್ ನಿಂದ ಹಾಲಿ ಶಾಸಕ ಎಂ ಅಶ್ವಿನ್ ಕುಮಾರ್ ಹಾಗೂ ಕಾಂಗ್ರೆಸ್ ನಿಂದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಕಣದಲ್ಲಿದ್ದಾರೆ. ಬಿಜೆಪಿಯಿಂದ ಡಾಕ್ಟರ್ ರೇವಣ್ಣ ಸ್ಪರ್ಧೆ ಖಚಿತವಾಗಿದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.ತಮ್ಮದೇ ಆದ ಸೇವೆಯಿಂದ ಬಿಜೆಪಿ ಟಿಕೆಟ್ ಪಡೆದ ಸ್ಥಳೀಯ ನಾಯಕ ಡಾಕ್ಟರ್ ರೇವಣ್ಣ ಟಿ.ನರಸೀಪುರ ನೀಲಸೋಗೆ ಗ್ರಾಮದವರಾಗಿದ್ದಾರೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಎಂ.ಅಶ್ವೀನ್ ಕುಮಾರ್ ಇಬ್ಬರು ಬಲಿಷ್ಠ ನಾಯಕರ ನಡುವೆ ಡಾ.ರೇವಣ್ಣ ಟಿ.ನರಸೀಪುರ ಕ್ಷೇತ್ರದಲ್ಲಿ ಕಮಲ ಅರಳಿಸಲಿದ್ದಾರಾ ಕಾದಷ್ಟ್ಠೆ ನೋಡಬೇಕಿದೆ.