ನಂದಿನಿ ಮೈಸೂರು
ಚಾಮರಾಜ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಎಲ್ ನಾಗೇಂದ್ರ ರವರನ್ನು ಆಯ್ಕೆ ಮಾಡಿದ ಹಿನ್ನೆಲೆ ಮಂಡಲದ ನಗರ ಪಾಲಿಕೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಒಂಟಿಕೊಪ್ಪಲಿನಲ್ಲಿರುವ ಕ್ಷೇತ್ರದ ಕಛೇರಿಯಲ್ಲಿ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯದ ನಾಯಕರಿಗೆ ಧನ್ಯವಾದ ಅರ್ಪಿಸಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಮಹಾಪೌರರಾದ ಶಿವಕುಮಾರ್ ,ಅಧ್ಯಕ್ಷರಾದ ಸೋಮಶೇಖರ ರಾಜು ,ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ , ರಮೇಶ್ , ನಗರ ಪಾಲಿಕೆಯ ಸದಸ್ಯರುಗಳಾದ ಸುಬ್ಬಯ್ಯ, ಸತೀಶ್ , ರಂಗಸ್ವಾಮಿ, ರವೀಂದ್ರ ,ಪ್ರಮೀಳಾ ಭರತ್ ,ವೇದವಾತಿ ,ಚಿಕ್ಕ ವೆಂಕಟು, ದಿನೇಶ್ ಮತ್ತಿತರು ಇದ್ದರು.