*ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ ‘ನ್ಯಾಯ’ ಯುಗವನ್ನು ಪ್ರಾರಂಭಿಸಲಿವೆ: ಶಾ*

*ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ ‘ನ್ಯಾಯ’ ಯುಗವನ್ನು ಪ್ರಾರಂಭಿಸಲಿವೆ: ಶಾ*

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುರುವಾರ ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್ ಮಸೂದೆಗಳನ್ನು ಮಂಡಿಸಿದರು. ಎಲ್ಲಾ ಮೂರು ಕ್ರಿಮಿನಲ್ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈಗ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಇಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗುವುದು.

ನ್ಯಾಯ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಆಧಾರದ ಮೇಲೆ ನವ ಭಾರತದ ನವೀನ ಕಾನೂನುಗಳು ನಮ್ಮನ್ನು ಗುಲಾಮಗಿರಿಯ ಮನಸ್ಥಿತಿ ಮತ್ತು ಬ್ರಿಟಿಷ್ ಆಳ್ವಿಕೆಯ ಕುರುಹುಗಳಿಂದ ಮುಕ್ತಿ ಕೊಡಿಸಲಿದೆ ಎಂಬುದು ಖಚಿತ. ನವ ಭಾರತದ ಹೊಸ ಕಾನೂನು ಶಿಕ್ಷೆಯ ಬದಲು ನ್ಯಾಯವನ್ನು ಒದಗಿಸಲಿದೆ ಎಂಬುದು ಶಾರವರ ಪ್ರತಿಪಾದನೆ.

ಅಮೃತ ಕಾಲದ ಈ ಬದಲಾವಣೆಗಳೊಂದಿಗೆ, ನವ ಭಾರತದ ಹೊಸ ಕಾನೂನು ಅಂದರೆ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಹೊಸ ಯುಗವನ್ನು ಪ್ರವೇಶಿಸಲಿದೆ, ಅಲ್ಲಿ ಕಾನೂನಿನ ಉದ್ದೇಶವು ಶಿಕ್ಷೆಯನ್ನು ನೀಡುವುದಲ್ಲ, ‘ನ್ಯಾಯ’ವನ್ನು ನೀಡುವುದು ಆಗಿರುತ್ತದೆ. ನರೇಂದ್ರ ಮೋದಿ ಸರ್ಕಾರವು ನುಡಿದಂತೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಇದು ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಈ ಅಮೃತ ಗಳಿಗೆಯಲ್ಲಿ ಗುಲಾಮಗಿರಿಯ ಚಿಹ್ನೆಗಳನ್ನು ಕಿತ್ತುಹಾಕಲು ಮತ್ತು ಶಿಕ್ಷೆಯ ಬದಲು ಜನರಿಗೆ ನ್ಯಾಯ ಒದಗಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.

ಆ ಸಮಯದಲ್ಲಿ ಬ್ರಿಟಿಷರು ವಿಧಿಸಿದ್ದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆಗಳು ನ್ಯಾಯ ನಿರ್ಣಯಕ್ಕಲ್ಲದೇ, ಶಿಕ್ಷೆಗಾಗಿ ಮಾಡಲ್ಪಟ್ಟಿದ್ದವು ಎಂಬುದು ಶಾರವರ ವಾದ. ಅವರ ಈ ದಿಟ್ಟ ಹೆಜ್ಜೆಯೊಂದಿಗೆ, ಈಗ ಭಾರತೀಯ ದಂಡ ಸಂಹಿತೆ, 1860 ಅನ್ನು ಭಾರತೀಯ ನ್ಯಾಯಾಂಗ ಸಂಹಿತೆ, 2023 ಎಂದು ಮರುನಾಮಕರಣ ಮಾಡಲಾಗುವುದು, ಕ್ರಿಮಿನಲ್ ಪ್ರೊಸೀಜರ್ ಕೋಡ್, 1898 ಅನ್ನು ಭಾರತೀಯ ನಾಗರಿಕ ರಕ್ಷಣಾ ಸಂಹಿತೆ, 2023 ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್, 1872 ಅನ್ನು ಭಾರತೀಯ ಸಾಕ್ಷ್ಯ ಕಾಯ್ದೆ, 2023 ಎಂದು ಮರುನಾಮಕರಣ ಮಾಡಲಾಗಿದೆ.

ಕಳೆದ 9 ವರ್ಷಗಳಲ್ಲಿ, ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾರ ಸಮರ್ಥ ಮಾರ್ಗದರ್ಶನದಲ್ಲಿ, ಭಾರತೀಯ ಜನತಾ ಪಕ್ಷವು ತನ್ನ ಪ್ರಣಾಳಿಕೆ ಮತ್ತು ಭರವಸೆಗಳನ್ನು ಉತ್ತಮವಾಗಿ ಈಡೇರಿಸುತ್ತಾ ಬರುತ್ತಿದೆ. ಸರ್ಕಾರ ರಚನೆಯಾದ ಕೂಡಲೇ 370 ಮತ್ತು 35ಎ ವಿಧಿಗಳನ್ನು ತೆಗೆದುಹಾಕಲಾಗುವುದು ಎಂದು ಮೋದಿ ಸರ್ಕಾರ ಭರವಸೆ ನೀಡಿತ್ತು. ರಾಜಕೀಯದ ಚಾಣಕ್ಯ, ರಾಷ್ಟ್ರೀಯವಾದಿ ಮೌಲ್ಯಗಳ ಪ್ರಬಲ ಬೆಂಬಲಿಗ ಶಾ ಅವರ ಕಟ್ಟುನಿಟ್ಟಿನ ನೀತಿಗಳಿಂದಾಗಿ 370 ಮತ್ತು 35A ವಿಧಿಗಳನ್ನು ತೆಗೆದುಹಾಕಲಾಗಿದೆ. ಪರಿಣಾಮವಾಗಿ, J&K ಭಾರತದ ಅವಿಭಾಜ್ಯ ಅಂಗವಾಗಿದೆ.

ಒಂದೆಡೆ, ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದಂತೆ ತ್ರಿವಳಿ ತಲಾಖ್ ಅನ್ನು ತೆಗೆದುಹಾಕುವ ಭರವಸೆಯನ್ನು ಈಡೇರಿಸಿದ ಮೋದಿ-ಶಾ ಜೋಡಿ, ಇನ್ನೊಂದೆಡೆ ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮೂಲಕ ದೇಶದ ಮಾತೃಶಕ್ತಿಯನ್ನು ಗೌರವಿಸುವ ಕೆಲಸ ಮಾಡಿದ್ದಾರೆ.

ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪಾಲಿಸುವ ಭರವಸೆಯನ್ನು ಬಿಜೆಪಿ ಈಡೇರಿಸಿದೆ, ಇದು ಭಯೋತ್ಪಾದಕ ಘಟನೆಗಳಲ್ಲಿ 65% ಕಡಿತ ಮತ್ತು ಮೂರು ಭಯೋತ್ಪಾದಕ ಹಾಟ್ ಸ್ಪಾಟ್‌ಗಳಾದ ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರಗಾಮಿ ಪ್ರದೇಶಗಳು, ಮತ್ತು ಈಶಾನ್ಯ ರಾಜ್ಯಗಳಲ್ಲಿನ ಸಾವುಗಳಲ್ಲಿ 73% ಕಡಿತಕ್ಕೆ ಕಾರಣವಾಯಿತು. 70% ಕ್ಕಿಂತ ಹೆಚ್ಚು ಈಶಾನ್ಯ ಪ್ರದೇಶಗಳನ್ನು AFSPA ದಿಂದ ಸಹ ತೆಗೆದುಹಾಕಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ಮೋದಿ ಸರ್ಕಾರ ಭರವಸೆ ನೀಡಿತ್ತು ಮತ್ತು ಈಗ ಶ್ರೀರಾಮನು ಜನವರಿ 22 ರಿಂದ ಅಲ್ಲಿ ನೆಲೆಸಲಿದ್ದಾನೆ.

ನಾವು ನ್ಯಾಯ ಪಡೆಯುವ ವೇಗವನ್ನು ಹೆಚ್ಚಿಸುಟ್ಟಿದ್ದೆವೆ, ಇನ್ನು ಮುಂದೆ ಕಾನೂನುಗಳು ಶಿಕ್ಷೆಯನ್ನು ಆಧರಿಸಿರುವುದಿಲ್ಲ ಆದರೆ ನ್ಯಾಯವನ್ನು ಆಧರಿಸಲಿವೆ ಎಂದು ಕೇಂದ್ರ ಗೃಹ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕ ಶಾ ಹೇಳಿದರು. ನವ ಭಾರತದ ನಿರ್ಮಾಣಕ್ಕಾಗಿ ಹೊಸ ಕಾನೂನನ್ನು ತರಲು ಮತ್ತು ನೀಡಿದ ಭರವಸೆಗಳನ್ನು ಈಡೇರಿಸಲು ಶಾ ಅವರು ಮಾಡಿದ ಪ್ರಯತ್ನಗಳಿಗೆ ದೇಶದ ಜನರು ಸಾಕ್ಷಿಯಾಗಲಿದ್ದಾರೆ. ಕಳೆದ 9 ವರ್ಷಗಳ ಸಾಧನೆಯನ್ನು ನೋಡಿದರೆ, ಈ ಭರವಸೆಯನ್ನು ಮೋದಿ-ಶಾ ಜೋಡಿ ಈಡೇರಿಸಲಿದೆ ಎನ್ನಬಹುದು.

Leave a Reply

Your email address will not be published. Required fields are marked *