ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಬೆ.5 ರಿಂದ ರಾ.11ವರಗೆ ವೈಕುಂಠ ದ್ವಾರ ತೆರೆಯಲಿದೆ:ಎಚ್ ಜಿ ಗಿರಿಧರ್

ನಂದಿನಿ ಮೈಸೂರು

ನಾಳೆ ವೈಕುಂಠ ಏಕಾದಶಿ ಹಿನ್ನೆಲೆ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ವೈಕುಂಠ ದ್ವಾರ ತೆರೆಯಲಿದೆ.

ಮೈಸೂರಿನ ಕಲ್ಯಾಣಗಿರಿ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ತೋಮಲೆ ಸೇವೆ ಹಾಗೂ ವೆಂಕಟರಮಣ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಭಕ್ತಾದಿಗಳಿಗೆ ಪ್ರಸಾದದ ಮೂಲಕ ಲಾಡು ವಿತರಣೆ ಮಾಡಲಿದ್ದಾರೆ. ಈಗಾಗಲೇ ಬಾಣಸಿಗರಿಂದ ಕಳೆದ ನಾಲ್ಕು ದಿನಗಳಿಂದ 10 ಕ್ವಿಂಟಾಲ್ ಲಡ್ಡು ತಯಾರಿಸಿದ್ದಾರೆ.
ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನ ಲಕ್ಷ್ಮಿಯ ಉತ್ಸವ ಮೂರ್ತಿ ಪ್ರಸ್ತುತ ಅನೇಕ ಪವಾಡಗಳನ್ನು ಸೃಷ್ಟಿಸುತ್ತಿರುವ ಉತ್ಸವ ಮೂರ್ತಿ ಎಂದೇ ಪ್ರಸಿದ್ದಿಯಾಗಿದೆ. ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಭಕ್ತರು ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ ಎಂದು
ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಎಚ್‌ ಜಿ ಗಿರಿಧರ್ ತಿಳಿಸಿದರು.

Leave a Reply

Your email address will not be published. Required fields are marked *