ನ.27 ರಂದು ಕೋವಿಡ್ ಮುಂಚೂಣಿ ಯೋಧರಿಗೆ ಗೌರವ ಸಮರ್ಪಣೆ ಭಾವ ನಮನ ಕಾರ್ಯಕ್ರಮ

ಮೈಸೂರು:25 ನವೆಂಬರ್ 2021

ನಂದಿನಿ ಮೈಸೂರು

ಅರಭಿ ಸಾಂಸ್ಕೃತಿಕ ಟ್ರಸ್ಟ್‌ ನಿಂದ ಕೋವಿಡ್ ಮುಂಚೂಣಿ ಯೋಧರಿಗೆ ಗೌರವ ಸಮರ್ಪಣೆ ಭಾವ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಕುಲದೀಪ್ ತಿಳಿಸಿದರು.

ಟ್ರಸ್ಟ್ರ್ ನಲ್ಲಿ 12 ಜನ ಸದಸ್ಯರಿದ್ದು,ನ.27 ರಂದು ಮೈಸೂರಿನ ಕಲಾ ಮಂದಿರದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಭಾವಗೀತೆಗಳ ಗಾಯನ ಕಾರ್ಯಕ್ರಮ ಜರುಗಲಿದೆ. ಅದಕ್ಕೂ ಮುನ್ನ ಕೋವಿಡ್ ಸಂದರ್ಭದಲ್ಲಿ ವೈದ್ಯರು, ಆಶಾಕಾರ್ಯಕರ್ತರು,ಪೋಲಿಸರು ಮಾಡಿದ ಸೇವೆ, ಅನುಭವಿಸಿದ ಕಷ್ಟದ ಬಗ್ಗೆ ವಿಡಿಯೋ ಪ್ರದರ್ಶಿಸಲಿದ್ದೇವೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.ಮೈಸೂರಿನ ಜನರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭ ಮಹೇಶ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *