ಮೈಸೂರು:14 ಏಪ್ರಿಲ್ 2022
ನಂದಿನಿ ಮೈಸೂರು
ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ
ಯೋಗನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ರವರಿಗೆ
ನಾಡೋಜ ಗೌರವ ಪ್ರಶಸ್ತಿ ದೊರಕಿದ್ದು ಮೈಸೂರಿನಲ್ಲಿ ಭಾಷ್ಯಂ ಸ್ವಾಮೀಜಿರವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ದಟ್ಟಗಳ್ಳಿ ನೇತಾಜಿ ಸರ್ಕಲ್ ಸಮೀಪ ನೂತನವಾಗಿ ಆರಂಭವಾಗಿರುವ ನಯನ ಕುಮಾರ್ಸ್ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಅಭಿನಂಧನ ಸಮಾರಂಭಕ್ಕೆ ವೇದಿಕೆ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಯನ ಕುಮಾರ್ಸ್ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕರಾದ
ಕೆಬಿ ಕುಮಾರ್ ,ಗೀತಾ ಕುಮಾರ್,
ಲಯನ್ಸ್ ಕ್ಲಬ್ ದೇವೇಗೌಡ ಕೆ.ಆರ್,
ಗೋವಿಂದರಾಜು,ಲಕ್ಷ್ಮೀ ರವರು ಭಾಷ್ಯಂ ಸ್ವಾಮೀಜಿರವರಿಗೆ ಗೌರವಿಸಿ ಅಭಿನಂಧಿಸಿದರು.ತದ ನಂತರ ವಿವಿಧ ಸಂಘ ಸಂಸ್ಥೆಗಳು ಭಾಷ್ಯಂ ಸ್ವಾಮೀಜಿರವರಿಗೆ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಭಾಷ್ಯಂ ಸ್ವಾಮೀಜಿ ಅಭಿಮಾನಕ್ಕೆ ಬೆಲೆ ಕಟ್ಟೋಕಾಗಲ್ಲ.ವಾಸ್ತವವಾಗಿ ಪ್ರಶಸ್ತಿ ಬಂದರೇ ಅದು ದೇವರ ಪಾದಕ್ಕೆ ಅರ್ಪಿಸುತ್ತೇನೆ. ಎರಡೇ ವರ್ಷದಲ್ಲಿ ಒಂದು ಪ್ರಶಸ್ತಿ ಗಳಿಸಿದೆ .ಮಾಧ್ಯಮಗಳು ಪ್ರಶ್ನೀಸಿದ್ರೂ ಪ್ರಶಸ್ತಿಯನ್ನು ನಾವು ಹುಡುಕಿ ಹೋಗಬಾರದು ನಮ್ಮನ್ನ ಪ್ರಶಸ್ತಿ ಹುಡುಕಿಕೊಂಡು ಬರಬೇಕು ಎಂದು ಹೇಳಿದೆ.ಪ್ರಶಸ್ತಿಯಲ್ಲಿ ಕೊಟ್ಟ ಆಭರಣವನ್ನ ದೇವರ ಕೊರಳಿಗೆ ಸಮರ್ಪಿಸಿದ್ದೇನೆ.ಕಳೆದ
8 ವರ್ಷಗಳಿಂದ ನಾಡೋಜಾ ಪ್ರಶಸ್ತಿಯಲ್ಲಿ ನನ್ನ ಹೆಸರು ಇತ್ತು.22 ವರ್ಷದಿಂದ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಮುಂಚೂಣಿಯಲ್ಲಿ ಇಡುತ್ತಾ ಬಂದಿದೆ. ನಾಡೋಜಾ ಪ್ರಶಸ್ತಿಗೂ ನಿಮಗೂ ಏನ್ ಸಂಬಂಧ ಎಂದು ಮಾಧ್ಯಮದವರು ಕೇಳಿದ್ರೂ.
123 ಗ್ರಂಥವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ ಎಂದು ತಿಳಿಸಿದೆ.ಜ್ಞಾನಕ್ಕೆ ಜಾತಿ ಇಲ್ಲ.
ಡಾ.ರಾಜ್ ಕುಮಾರ್ ಅವರ ಅಭಿಮಾನದ ಉಪದೇಶದಿಂದ ಈ ನಾಡೋಜ ಪ್ರಶಸ್ತಿ ಲಭಿಸಿದೆ.ನಾಡೋಜ ಪ್ರಶಸ್ತಿ ಪಡೆಯುವಾಗ ಡಾ.ರಾಜ್ ಕುಮಾರ್ ,ಪುನೀತ್ ರಾಜ್ ಕುಮಾರ್ ನೆನಪಿಸಿಕೊಂಡೆ ಎಂದು ಅಭಿನಂದನಾ ಸಮಾರಂಭದಲ್ಲಿ ಭಾವುಕರಾದರು.
ಕಾರ್ಯಕ್ರಮದಲ್ಲಿ ಭಾಷ್ಯಂ ಸ್ವಾಮೀಜಿರವರ ಸಹೋದರಾದ ಶ್ರೀನಿವಾಸ್,ಶೇಷಾದ್ರಿ,ಅಶ್ವೀನ್ ಕುಮಾರ್ ,ಆಸ್ಪತ್ರೆಯ ವೈದ್ಯರು, ಸಿಬ್ಬಂಧಿಗಳು ಸೇರಿದಂತೆ ಇತರರು ಭಾಗಿಯಾಗಿದ್ದರು.