ಮೈಸೂರು:3 ನವೆಂಬರ್ 2021
ನ@ದಿನಿ
ಅಪೂರ್ವ ಸ್ನೇಹ ಬಳಗದ ವತಿಯಿಂದ ದೀಪಾವಳಿ ಅಂಗವಾಗಿ ಚಾಮುಂಡಿಪುರಂ ಹಾಗೂ ಬಂಡಿ ಕೇರಿ ಸುತ್ತಮುತ್ತ ಮನೆ ಮನೆಗೆ ತೆರಳಿ ಹಣತೆ ವಿತರಿಸುವ ಮೂಲಕ ಬೆಳಕಿನ ಜಾಗೃತಿ ಮೂಡಿಸಲಾಯಿತು.
ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ಮಾತನಾಡಿ ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ, ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಉದ್ದೇಶ.ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ.
ಕೆಲವೆಡೆ ಜಾನುವಾರುಗಳನ್ನು ಪೂಜಿಸಲಾಗುತ್ತದೆ.
ಹಾಗಾಗಿ ಇದು ರೈತರ ಹಬ್ಬವೂ ಹೌದು. ನವ ವಧುವರರಿಗೆ ವಿಶೇಷ ಹೊಸ ಮದುವೆಯಾದ ನಂತರ ಬಾಗಿಣ ನೀಡುವುದು ಒಂದು ಸಂಪ್ರದಾಯ ಎನ್ನಿಸುವ ಮೂಲಕ ದೀಪಾವಳಿಗೆ ಆದಿ ಹರೆಯರಲ್ಲಿ ಹುಮ್ಮಸ್ಸೂ ಇದೆ. ಹೀಗೆ, ದೀಪದ ಕುಡಿಗಳಂತೆ ಹಬ್ಬಕ್ಕೆ ಹಲವು ದಾರಿಗಳಿವೆ.
ಬೆಳಕಿನ ಹಬ್ಬದೊಂದಿಗೆ ನೀರನ್ನು ತಳಕು ಹಾಕಿದರೂ, ಆ ನೀರಿನಲ್ಲಿ ಕೂಡ ಬೆಳಕಿರುವುದನ್ನು ಗಮನಿಸಬೇಕು. ಇದರರ್ಥ ಇಷ್ಟೇ – ಹಬ್ಬಕ್ಕೆ ಏನು ಅರ್ಥ ಹಚ್ಚಿದರೂ ಅದು ಕೊನೆಗೊಳ್ಳುವುದು ಬೆಳಕಿನೊಂದಿಗೆ ಹಾಗಾಗಿ ಈ ಕಾರ್ಯಕ್ಕೆ ಚಾಲನೆ ನೀಡಿದರು.
ಬೆಳಕಿನ ಹಬ್ಬಕ್ಕೆ ಮೆರುಗು ತರುವ ಪಟಾಕಿಗಳು, ಮಾಲಿನ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಅಪಾಯಕಾರಿ ಪಟಾಕಿಗಳ ಬಳಕೆ ನಿಯಂತ್ರಿಸಲು ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರಗಳೇ ಅನುಮತಿ ನೀಡಿರುವುದು ಸ್ವಾಗತಾರ್ಹ. ಕಡಿಮೆ ಮಾಲಿನ್ಯ ಉಂಟು ಮಾಡುವುದರಿಂದ ಹಸಿರು ಪಟಾಕಿ ಸಿಡಿಸುವುದು ತಪ್ಪೇನಲ್ಲ. ಹಬ್ಬ ಎಂದು ಭಾರಿ ಪ್ರಮಾಣದ ಪಟಾಕಿ ಸಿಡಿಸುವ ಮಿತಿಯನ್ನು ಕಡಿಮೆ ಮಾಡಿಕೊಂಡರೆ, ಭವಿಷ್ಯದ ದೃಷ್ಟಿಯಿಂದ ಎಲ್ಲರಿಗೂ ಒಳ್ಳೆಯದು. ಮಕ್ಕಳು ಪಟಾಕಿ ಸಿಡಿಸುವಾಗ ಮನೆಯವರು ಎಚ್ಚರ ವಹಿಸಿ ಎಂದರು.
ಇದೇ ಸಂದರ್ಭದಲ್ಲಿ ಲಕ್ಷ್ಮೀದೇವಿ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ,ತೀರ್ಥಕುಮಾರ್ ,ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ಹಾಗೂ ಇನ್ನಿತರರು ಹಾಜರಿದ್ದರು.