ಮೈಸೂರು:3 ನವೆಂಬರ್ 2021
ವಿಶೇಷ ವರದಿ : ನಂದಿನಿ
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತನ್ನದೇ ಆದ ಸ್ಥಾನವಿದೆ. ಸಾಮಾನ್ಯವಾಗಿ ಗೋವಿನ ಗೊಬ್ಬರ ಮತ್ತು ಗೋವಿನ ಮೂತ್ರವನ್ನ ಶುಭ ಕಾರ್ಯಕ್ಕೆ ಬಳಸುತ್ತಿದ್ದದ್ದು ನಿಮಗೆ ಗೊತ್ತಿದೆ. ಮಣ್ಣಿನಿಂದ,ಪ್ಲ್ಯಾಸ್ಟಿಕ್ ನಿಂದ ದೀಪಗಳು ತಯಾರು ಮಾಡೋದನ್ನ ಕೇಳಿರ್ತೀರಾ.
ಆದರೇ ಇಲ್ಲೊಂದು ಪ್ರತಿಷ್ಠಾನ ಗೋವಿನ ಗೊಬ್ಬರ, ಮೂತ್ರ ಬಳಸಿ ಕಾಮದೇನು ಹಣತೆ ತಯಾರಿಸಿದ್ದಾರೆ.
ಮನೆ ಮನದಲ್ಲಿ ಜಗಮಗಿಸುವ ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ.ಪರಿಸರ ಸ್ನೇಹಿ ಹಣತೆ ತಯಾರಿ ಜೊತೆಗೆ ಈ ಬಾರೀ ಕಾಮದೇನು ಹಣತೆ ದೀಪ ಮಣ್ಣೀನ ದೀಪಕ್ಕಿಂತ ವಿಶೇಷವಾಗಿದೆ.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಪ್ರಗತಿ ಪ್ರತಿಷ್ಠಾನ ಈ ಬಾರಿ ಗೋ ಮೂತ್ರ ಮತ್ತೆ ಗೊಬ್ಬರದಲ್ಲಿ ದೀಪ ತಯಾರಿ ಮಾಡಲು ಹೊಸ ಪ್ರಯತ್ನ ಮಾಡ್ತೀದೆ. ಗೋವಿನ ಗೊಬ್ಬರ ಗೋ ಮೂತ್ರ ಜೊತೆ ಗೋದಿ ಇಟ್ಟು ಮಿಶ್ರಣ ಮಾಡಿ ಅದಕ್ಕೆ ಅರಿಶಿನ ಕುಂಕುಮ ಬಣ್ಣ ಬಳಸಿ ದೀಪ ತಯಾರು ಮಾಡುತ್ತಿದ್ದಾರೆ.
ಪ್ರಗತಿ ಪ್ರತಿಷ್ಠಾನ 2013 ರಂದು ಆರಂಭವಾಯಿತು.ಈ ಎಂಜಿಓ ನಲ್ಲಿ 200 ಕ್ಕೂ ಹೆಚ್ಚು ಸದಸ್ಯರಿದ್ದಾರೆ.ಪರಿಸರ ಸ್ನೇಹಿ ಗೋವಿನ ಗೊಬ್ಬರ,ಮೂತ್ರ ಬಳಸಿ ಕಾಮದೇನು ಹಣತೆ ತಯಾರು ಮಾಡುತ್ತಿದ್ದೇವೆ.ಇತ್ತೀಚಿನ ದಿನಗಳಲ್ಲಿ ಪ್ಲ್ಯಾಸ್ಟಿಕ್ ದೀಪಕ್ಕೆ ಮಾರು ಹೋಗಿದ್ದಾರೆ.ಪ್ಲ್ಯಾಸ್ಟಿಕ್ ದೀಪ ಪರಿಸರಕ್ಕೆ ಹಾನಿ ಮಾಡಲಿದೆ. ಆದ್ದರಿಂದ ಈ ರೀತಿಯ ಹೊಸ ಪ್ರಯತ್ನದ ಮೂಲಕ ಪರಿಸರ ಸಂರಕ್ಷಣೆ ಮಾಡಲು ಹೊರಟಿದ್ದೇವೆ.ಕಳೆದ ವರ್ಷದಿಂಿಂದ ಈ ಈ ಹಣತೆ ತಯಾರಿಸುತ್ತಿದ್ದೇವೆ.ಇದುವರೆಗೆ ಸರ್ಕಾರಕ್ಕೆ ಯಾವುದೇ ಪರಿಹಾರ ಕೇಳಿಲ್ಲ. ಜನರಿಂದಲೂ ದೇಣಿಗೆ ಪಡೆದಿಲ್ಲ.ನಮ್ಮ ಸ್ವಂತ ದುಡಿಮೆಯಿಂದ ಈ ಪ್ರಗತಿ ಪ್ರತಿಷ್ಠಾನ ಮುಂದೆ ಸಾಗುತ್ತಿದ್ದೇ ಎನ್ನುತ್ತಾರೆ ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಕೆ.ಅಜಯ್ ಕುಮಾರ್ ಜೈನ್.
ಮಣ್ಣಿನಿಂದ ಹಣತೆಯಾದರೆ ಬೀಜದಿಂದ ಎಣ್ಣೆಯಾಯಿತು ಅರಳಿಯಿಂದ ಬತ್ತಿಯಾದರೆ ಸುಡುವ ಬೆಂಕಿ ಜ್ಯೋತಿಯಾಯಿತು.ಅದೇನೇ ಆಗಲೀ ಗೋವಿನ ಸಗಣೆ ಅಂತ ಮೂಗು ಮುರಿಯುವ ಮಂದಿಯ ಮುಂದೆ ಮನೆ ಮನ ಬೆಳಗಲು ಕಾಮದೇನು ದೀಪ ಎಲ್ಲರನ್ನ ತಮ್ಮತ್ತ ಸೆಳೆಯುತ್ತಿದೆ.