ಬಸವ ಬಳಗ ಚಾಮುಂಡಿಪುರಂ ಸಂಘದ ವತಿಯಿಂದ ಬಸವ ಜಯಂತಿ ಆಚರಣೆ

ನಂದಿನಿ ಮೈಸೂರು

ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಬಳಗ ಚಾಮುಂಡಿಪುರಂ ಸಂಘದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಜ್ಜಿಗೆ ವಿತರಣೆ ಮಾಡಲಾಯಿತು

ಅಧ್ಯಕ್ಷರಾದ ಸಂದೀಪ್ ರವರು ಮಾತನಾಡುತ್ತಾ
ವೈಶಾಖ ಶುದ್ಧ ತದಿಗೆಯಂದು, ಲಿಂಗಾಯತ ಮತದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ.

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.

ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ದಿನ ಚಿನ್ನ, ಬೆಳ್ಳಿಯನ್ನು ಮನೆಗೆ ತಂದರೆ ಶುಭ ಎಂಬ ನಂಬಿಕೆ ಇದೆ. ಅದೇ ದಿನದಂದು ಬಸವ ಜಯಂತಿಯನ್ನು ಕೂಡಾ ಆಚರಿಸಲಾಗುತ್ತದೆ.

ಬಸವಣ್ಣನವರು ಲಿಂಗಾಯತ ವಿಚಾರಧಾರೆಗಳ ಪ್ರವರ್ತಕರು. ಅವರು ಹುಟ್ಟಿದ ದಿನವನ್ನು ಪ್ರತಿ ವರ್ಷ ಬಸವ ಜಯಂತಿಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ಬಸವಣ್ಣನವರು ಸಮಾಜದಲ್ಲಿ ಜಾತಿ, ವರ್ಣ, ಲಿಂಗ ಭೇದ ಎಂಬುದು ಇಲ್ಲ, ನಾವೆಲ್ಲರೂ ಸಮಾನರು ಎಂದು ಸಮಾಜಕ್ಕೆ ಸಂದೇಶ ಸಾರಿದವರು. ಆದ್ದರಿಂದಲೇ ಬಸವೇಶ್ವರರನ್ನು ಬಸವಣ್ಣ, ಬಸವ, ವಿಶ್ವಗುರು ಎಂದು ಕರೆಯಲಾಗುತ್ತದೆ.

ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಬಿಜ್ಜಳನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು, ಇದು ನಂತರ ಎಲ್ಲಾ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು. ಬಸವೇಶ್ವರರ ಸಾಕ್ಷರತಾ ಕೃತಿಗಳು ವಚನ ಸಾಹಿತ್ಯವನ್ನು ಒಳಗೊಂಡಿವೆ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷರಾದ ಎಂ ಬಸವರಾಜು, ಖಜಾಂಜಿ ವಿ ಬಸವರಾಜು, ಸಹ ಕಾರ್ಯದರ್ಶಿಗಳಾದ ಜಿ ಮಹದೇವಪ್ಪ, ನಿರ್ದೇಶಕರಗಳಾದ ಕೆ ವಿ ಯೋಗೇಶ್, ಕೆ ಎಂ ಸೋಮೇಶ್, ವಿ ಮಂಜುನಾಥ್, ಡಿ ಸಿ ಮಂಜುಳಾ, ಬಸವರಾಜು, ಹೆಚ್ ಎನ್ ನವೀನ್ , ಮುಖಂಡರಾದ ಪಾರ್ಥಸಾರಥಿ, ರಾಜೇಂದ್ರ, ದೀಪಕ್, ಸಂತೋಷ್, ಸುರೇಶ್, ಶಿವಪ್ರಸಾದ್, ಮೋಹನ್, ಶೇಖರ್, ಆನಂದ್, ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *