“ಶ್ರೀ ಷಣ್ಮುಖಸ್ವಾಮಿರವರ ನಿಧನಕ್ಕೆ ಸಂತಾಪ”

 

“ಶ್ರೀ ಷಣ್ಮುಖಸ್ವಾಮಿರವರ ನಿಧನಕ್ಕೆ ಸಂತಾಪ”

ಟಿ.ನರಸೀಪುರ ತಾಲ್ಲೋಕಿನ ಕೇತಹಳ್ಳಿ ಗ್ರಾಮದವರಾದ ಶ್ರೀ ಷಣ್ಮುಖಸ್ವಾಮಿಯವರು ಕುಂಬಾರ ಸಮಾಜದಲ್ಲಿ ಹುಟ್ಟಿ ತಮ್ಮ ಜಾತ್ಯಾತೀತ ನಿಲುವು ಮತ್ತು ಸಾಮಾಜಿಕ ಕಳಕಳಿ,ಸಾಹಿತ್ಯಿಕ ಚಿಂತನೆಗಳ ಮೂಲಕ ಎಲ್ಲಾ ವರ್ಗದ ಜನರ ಮನಸ್ಸು ಗೆದ್ದಿದ್ದರು.ವಾಟಾಳು ಶ್ರೀಗಳ ಸಹಪಾಠಿಯೂ ಆಗಿದ್ದ ಇವರ ಸಂಸ್ಕೃತಿ ಸರಳತೆ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಅದೆಷ್ಟೋ ಜನರು ತಲೆಭಾಗಿ ಶಿಷ್ಯರಾಗಿ ಬಿಟ್ಟಿದ್ದರು.ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ,ಎಲ್ ಐ ಸಿ ಏಜೆಂಟ್ ಆಗಿ ಕೆಲಸ ನಿರ್ವಹಿಸಿದ್ದರು.ಅವರಿಗಿದ್ದ ಕನ್ನಡಾಸಕ್ತಿಯ ಫಲವಾಗಿ 20ವರ್ಷಗಳ ಕಾಲ ನರಸೀಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ತೀವ್ರ
ಸಂತಾಪ ಸೂಚಿಸುತ್ತೇನೆ.ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ನರಸಿಂಹಮೂರ್ತಿ ರವರ ಆಪ್ತ ಸಹಾಯಕರಾಗಿಯೂ ಕೆಲಸ ಮಾಡಿದ್ದರು.ಟಿ.ನರಸೀಪುರ ತಾಲ್ಲೋಕು
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ತಮ್ಮ ಜೀವನ ದುದ್ದಕ್ಕೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು.ಹಲವಾರು ಕೃತಿಗಳನ್ನು ರಚಿಸಿದ್ದರು.
ಶ್ರೀಯುತರ ನಿಧನದಿಂದ ಸಾಹಿತ್ಯ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.

ಡಾ.ಎಂ.ಮಹೇಶ್
ಸ್ಥಾನಿಕ ವೈದ್ಯಾಧಿಕಾರಿಗಳು
ಚಾಮರಾಜನಗರ ಜಿಲ್ಲಾಸ್ಪತ್ರೆ .

Leave a Reply

Your email address will not be published. Required fields are marked *