ಎಂ.ಲಕ್ಷ್ಮಣ್ ಗೆಲುವಿಗಾಗಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ, 101 ತೆಂಗಿನಕಾಯಿ ಹೊಡೆದು ಪ್ರಾರ್ಥಿಸಿದ ಶ್ರೀಪಾಲ್

ನಂದಿನಿ ಮೈಸೂರು

ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ಎಂ.ಲಕ್ಷ್ಮಣ್‌ ಬಹುಮತದಿಂದ ಗೆಲ್ಲಲಿ ಎಂದು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನ ಕಾಯಿ ಹೊಡೆದು ಪ್ರಾರ್ಥಿಸಿದರು.

 

ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾದ ಆರ್.ಶ್ರೀಪಾಲ್ ನೇತೃತ್ವದಲ್ಲಿ ಚಾಮುಂಡಿ ದೇವಸ್ಥಾನದ ಮುಂಭಾಗ 101 ತೆಂಗಿನಕಾಯಿ ಹೊಡೆದರು.ನಂತರ ಮಾತನಾಡಿದ ಅವರು ಅಕ್ಷಯ ತೃತೀಯ ದಿನ ಬಹಳ ವಿಶೇಷವಾದ ದಿನದಂದು ನಾಡದೇವತೆ ಶ್ರೀ.ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಎಂ.ಲಕ್ಷ್ಮಣ್ ಅವರು 1 ಲಕ್ಷ ಮತಗಳ‌ ಅಂತರದಲ್ಲಿ ಗೆದ್ದು ಬರಲೆಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದೇವೆ.ಪೂಜಾಕಾರ್ಯಕ್ರಮ ನಂತರ 101 ತೆಂಗಿನಕಾಯಿ ಹೊಡೆದಿದ್ದೇವೆ.ದೇಗುಲಕ್ಕೆ ಬಂದ 500 ಭಕ್ತರಿಗೆ ಪ್ರಸಾದ ವಿತರಿಸಿದ್ದೇವೆ.ಎಂ.ಲಕ್ಷ್ಮಣ್ ಅವರು ಗೆಲ್ಲುವ ವಿಶ್ವಾಸವಿದೆ.ಫಲಿತಾಂಶ ಜೂನ್ 4 ರಂದು ಹೊರಬೀಳಲಿದ್ದು ಅಂದು ಸಂಜೆ ಕೂಡ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಗಿರೀಶ್, ಸುನೀಲ್ ನಾರಾಯಣ್,ರವಿ ಎಸ್ ನಾಯಕ್,ದೀಪಕ್ ಪುಟ್ಟಸ್ವಾಮಿ,ಮಾದೇಶ್ ಶಿವಣ್ಣ,ಕುಮುದಾ, ಕೃಷ್ಣಪ್ಪ,ಮೈಸೂರು ಬಸವಣ್ಣ ಸೇರಿದಂತೆ
ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *